ಶಿವಮೊಗ್ಗ ಮಹಾನಗರ ಪಾಲಿಕೆ ಹಿರಿಯ ನೌಕರ ಕರ ವಸೂಲಿಗಾರ, ಜಿ ಪರಮೇಶ್ ಇನ್ನಿಲ್ಲ.!

0
257

ಶಿವಮೊಗ್ಗ ಮಹಾನಗರ ಪಾಲಿಕೆಯ ಹಿರಿಯ ನೌಕರರು, ಸಂಘದ ಪೌರ ಸೇವಾ ನೌಕರರ ಸಂಘದ ಪ್ರಮುಖರು, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು  ಜಿ. ಪರಮೇಶ್ ನಿನ್ನೆ  ರಾತ್ರಿ  ನಿಧನರಾದರು.
ಅವರಿಗೆ 59 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿದಂತೆ ಸಹೋದರರು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಪರಮೇಶ್ ಅವರ ಅಂತಿಮ ದರ್ಶನಕ್ಕೆ ಇಂದು ಮಧ್ಯಾಹ್ನ 3ರವರೆಗೆ ಕರಿಯಣ್ಣ ಮನೆ ಹತ್ತಿರದ ಅವರ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪರಮೇಶ್ ಶಿವಮೊಗ್ಗ ನಗರಸಭೆ ಹಾಗೂ ಮಹಾನಗರ ಪಾಲಿಕೆಯಲ್ಲಿ ಅಪಾರ ಜನ ಮೆಚ್ಚುಗೆಯ ನೌಕರರಾಗಿ ಹಲವು ಮೇಯರಗಳಿಗೆ ಆಪ್ತ ಸಹಾಯಕರಾಗಿ ಕೆಲಸ ನಿರ್ವಹಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ಸರಳ ಸಜ್ಜನಿಕೆ ಹಾಗೂ ಸೇವಾ ಮನೋಭಾವದ ಜೊತೆ ಸ್ನೇಹದ ವ್ಯಕ್ತಿಯಾಗಿ ಗುರುತಿಸಿಕೊಂಡು ಬೆಳೆದಿದ್ದರು. ಮಹಾನಗರ ಪಾಲಿಕೆಯ ನೌಕರರು ಹಾಗೂ ಇತರ ಗಣ್ಯರು ಇವರ ಸಂತಾಪ ಸೂಚಿಸಿದ್ದು ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ಕುಟುಂಬವರ್ಗಕ್ಕೆ ನೀಡಲೆಂದು ಪ್ರಾರ್ಥಿಸಿದ್ದಾರೆ.