Wednesday, September 25, 2024
spot_img

“ತಾಯಿಯ ಹೆಸರಿನಲ್ಲಿ ಒಂದು ಗಿಡ” ಏನಿದು ವಿನೂತನ ಕಾರ್ಯ ಎಲ್ಲಿ, ಯಾವಾಗ..!?

ತಾಯಿಯ ಹೆಸರಿನಲ್ಲಿ ಒಂದು ಗಿಡ” ಅಭಿಯಾನವು ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳುವ ಮಹತ್ವದ ಕಾರ್ಯಕ್ರಮವಾಗಿದೆ. ಇದು ವಿಶ್ವ ಪರಿಸರ ದಿನದ ಅಂಗವಾಗಿ, ನರೇಗಾ ಯೋಜನೆಯಡಿ ಅರಣ್ಯ, ಕೃಷಿ, ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ಸಮನ್ವಯ ಸಾಧಿಸಿ, 22-08-2024 ರಂದು ಗ್ರಾಮ ಪಂಚಾಯತ್ ಕೊನಗವಳ್ಳಿ, ವಲಯದ ಮುದುವಾಲ  ಗ್ರಾಮದಲ್ಲಿ  ಜರುಗಿತು.


ಈ ಅಭಿಯಾನದ ಮುಖ್ಯ ಉದ್ದೇಶವೆಂದರೆ ಪರಿಸರದ ಸಂರಕ್ಷಣೆಯಲ್ಲಿ ಸಾಮಾನ್ಯ ಜನರನ್ನು ತೊಡಗಿಸುವುದು ಮತ್ತು ತಾಯಿಯ ಹೆಸರಿನಲ್ಲಿ ಸಸಿಗಳನ್ನು ನೆಡುವ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಬೌಧ್ಧಿಕತೆಯನ್ನು ಮೂಡಿಸುವುದು. ತಾಯಿಯ ಹೆಸರಿನಲ್ಲಿ ಸಸಿ ನೆಡುವ ಆಲೋಚನೆ ಭಾರತೀಯ ಸಂಸ್ಕೃತಿಯಮೂಲತತ್ವಗಳೊಂದನ್ನು ಪ್ರತಿಬಿಂಬಿಸುತ್ತದೆ ತಾಯಿ ಮತ್ತು ಪ್ರಕೃತಿ ಹೋಲಿಸಿದಂತೆ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕೂಡಾನಮ್ಮಕುಟುಂಬದಭಾಗವನ್ನಾಗಿ ಪರಿಗಣಿಸಬೇಕು ಈಗಾಗಲೇ ಸಮಗ್ರ ಭಾರತದಲ್ಲಿ ಪರಿಸರದ ಕಾಳಜಿ ಬಗ್ಗೆ ಅರಿವು ಮೂಡಿಸುವ ಹಲವಾರು ಅಭಿಯಾನಗಳು ನಡೆದುಕೊಂಡಿವೆ. ಆದರೆ, “ತಾಯಿಯ ಹೆಸರಿನಲ್ಲಿ ಒಂದು ಗಿಡ” ಅಭಿಯಾನವು ಕೇವಲ ಪರಿಸರದ ಪ್ರತಿ, ತಾಯಿಯ ಪ್ರೀತಿಯ ಪ್ರತಿಬಿಂಬವಾಗಿ ಹೊರಹೊಮ್ಮಿತು.  ತಾಯಿ ಮತ್ತು ನಿಸರ್ಗದ ನಡುವಿನ ಸಂಬಂಧವನ್ನು ಪರಿಗಣಿಸಿದಾಗ, ತಾಯಿಯ ಹೆಸರಿನಲ್ಲಿ ಸಸಿ ನೆಡುವುದು ಸಾಂಸ್ಕೃತಿಕವಾಗಿ ಹಾಗೂ ಮಾನಸಿಕವಾಗಿ ಆರ್ಥಿಕತೆಯನ್ನು ತುಂಬಲು ಸಹಕಾರಿಯಾಗಿದೆ.

ಈ ಅಭಿಯಾನವು ಕೃಷಿ, ತೋಟಗಾರಿಕೆ, ಮತ್ತು ಅರಣ್ಯ ಇಲಾಖೆಯ ಒಗ್ಗೂಡಿಸುವಿಕೆಯ ಪರಿಣಾಮವಾಗಿದೆ. ಈ ಅನನ್ಯ ಜೋಡಣೆ ಕಾರ್ಯಕ್ರಮದ ಯಶಸ್ಸನ್ನು ಹೆಚ್ಚಿಸಿತು.  ಈ ಸಂದರ್ಭ ಶ್ರೀಮತಿ. ನಂದಿನಿ, ಮಾನ್ಯ ಮುಖ್ಯ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಶಿವಮೊಗ್ಗ, ರವಿರಾಮಚಂದ್ರ ಸಹಾಯಕ ನಿರ್ದೇಶಕರು (ಗ್ರಾ.ಉ.ಖಾ.ಯೋ), ತಾಲ್ಲೂಕು ಪಂಚಾಯತ್ ಶಿವಮೊಗ್ಗ, ಅಧ್ಯಕ್ಷರು ಗ್ರಾಮ ಪಂಚಾಯತ್, ಕೊನಗವಳ್ಳಿ, ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಕೊನಗವಳ್ಳಿ, ವಲಯ ಅರಣ್ಯಾಧಿಕಾರಿಗಳು ಶಿವಮೊಗ್ಗ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಕೊನಗವಳ್ಳಿ, ಡಾಟಾ ಎಂಟ್ರಿ ಆಪ್ ರೇಟರ್, ತಾಲ್ಲೂಕು ಐ.ಇ.ಸಿ ಸಂಯೋಜಕರು ಶಿವಮೊಗ್ಗ, ಬಿ.ಎಫ್.ಟಿ ,ಇತರೆ ಸಿಬ್ಬಂದಿಗಳು ಹಾಜರಿದ್ದರು.

ತಾಯಿಯ ಹೆಸರಿನಲ್ಲಿ ಒಂದು ಗಿಡ
ನಮ್ಮ ನರೇಗಾ ನಮ್ಮ ಕರ್ನಾಟಕ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್  ಕೊನಗವಳ್ಳಿ, ಗ್ರಾಮಪಂಚಾಯತಿ ವಲಯದಿಂದ ವಿಶ್ವಪರಿಸರ ದಿನಾಚರಣೆ

Related Articles

Stay Connected

0FansLike
3,912FollowersFollow
0SubscribersSubscribe

Latest Articles