ಖಾಸಗಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸೇರಿದ ಓಮಿನಿ ಕಾರು ಬಾರಿ ಮಳೆಗೆ ಲೈಟ್ ಕಂಬಕ್ಕೆ ಡಿಕ್ಕಿ.. !?
oplus_0
ಶಿವಮೊಗ್ಗದಲ್ಲಿ ಸುರಿದ ಬಾರಿ ಮಳೆಗೆ ಗೆಜ್ಜೇನಹಳ್ಳಿ ರಸ್ತೆಯಲ್ಲಿ ಪುರಲೆ ಖಾಸಗಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸೆರಿದ ಓಮಿನಿ ಕಾರು ಬಾರಿ ಮಳೆಗೆ ರಸ್ತೆಯ ಚರಂಡಿಯ ನೀರು ತುಂಬಿ ರಸ್ತೆಯ ಮೇಲೆ ನದಿಯಂತೆ ಹರಿಯುತ್ತಿದ್ದು ಓಮಿನಿ ಕಾರಿನ ವಾಹನ ಚಾಲಕನಿಗೆ ಕಂಟ್ರೋಲ್ ಸಿಗದೆ ಕೆಪಿಟಿಸಿಎಲ್ ಕಂಬಕ್ಕೆ ಡಿಕ್ಕಿ ಯಾಗಿ ಎರಡು ಲೈಟ್ ಕಂಬ ತುಂಡಾಗಿ ಬಿದ್ದಿದೆ ಅದ್ರುಷ್ಟವಾಶತ ಕಂಬ ಪಕ್ಕಕ್ಕೆ ಬಿದ್ದಿದ್ದು ತಕ್ಷಣಕ್ಕೆ ಪವರ್ ಕಟ್ಟಾಗಿರುವದರಿಂದ ಓಮಿನಿ ಚಾಲಕ ಪ್ರಾಣಾಪಾಯದಿಂದ ಪಾರಗಿದ್ದಾರೆ.
ಗೆಜ್ಜೆ ನಹಳ್ಳಿ ಗ್ರಾಮಸ್ಥರ ಆಗ್ರಹ ಈ ರಸ್ತೆ ಶಿಕಾರಿಪುರ ಹೊನ್ನಾಳಿ ಮುಖ್ಯ ರಸ್ತೆಯಾಗಿದ್ದು ಹಲವು ವಾಹನಗಳು ರಸ್ತೆಯಲ್ಲಿ ಯಥೇಚ್ಛವಾಗಿ ಓಡಾಡುತ್ತಿದ್ದು ಪಿಡಬ್ಲ್ಯೂಡಿ ಅವರು ರಸ್ತೆಯ ಚರಂಡಿಯಲ್ಳಿ ಮಣ್ಣು ತುಂಬಿದ್ದು ನೀರು ರಸ್ತೆಯ ಮೇಲೆ ಹರಿಯುತ್ತಿರುವದರಿಂದ ಹಲವು ಅನಾಹುತಗಳ ನಡೆಯುತ್ತಿದ್ದು ತಕ್ಷಣಕ್ಕೆ ಚರಂಡಿ ಹೋಳು ಎತ್ತಿ ನೀರು ಚರಂಡಿಯಲ್ಲಿ ಹರಿಯುವಂತೆ ಅನುವು ಮಾಡಿಕೊಡಬೇಕಾಗಿ ಗೆಜ್ಜೆನಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.