ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕುಂಸಿ ಠಾಣೆಯ  ಪೊಲೀಸ್ ಇಬ್ಬರುನ್ನು ಸನ್ಮಾನಿಸಿದ್ದಾಕೆ..!?

0
267

 
ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಕೆ. ಪಟೇಲ್ ರವರು, ಪ್ರಾಮಾಣಿಕತೆ ಹಾಗೂ ಮಾನವೀಯತೆ ಮೆರೆದ ಚೋರಡಿ ಗ್ರಾಮದ ಸೋಮಶೇಖರ್ ಮತ್ತು ಸುಹಾಸ್ ಪ್ರಸಾದ್ ಸಿ ಅವರನ್ನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸನ್ಮಾನಿಸಿದ್ದಾರೆ.


ಸೋಮಶೇಖರ್ ಅವರು 1.8.2024 ರಂದು ಚೋರಡಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಬೆಳಿಗ್ಗೆ 9:15 ಕ್ಕೆ ರಂಗಮಂದಿರ ರಸ್ತೆಯಲ್ಲಿ ಒಂದು ವ್ಯಾನಿಟಿ ಬ್ಯಾಗ್‌ ಸಿಕ್ಕಿದ್ದು, ಅದರಲ್ಲಿ 1 ಲಕ್ಷ ರೂಪಾಯಿ, ಐಡಿ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಎಟಿಎಂ ಕಾರ್ಡ್ ಮತ್ತು ಶಾಲಾ ದಾಖಲಾತಿಗಳು ಇದ್ದವು. ಇವುಗಳನ್ನು ಅವರು ಯಾವುದೇ ಸ್ವಾರ್ಥ ಇಲ್ಲದೆ, ಅದೇ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ಎಲ್. ರೇಣುಕಾ ಅವರಿಗೆ ವಾಪಸು ನೀಡಿ, ತಮ್ಮ ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ಮೆರೆದಿದ್ದಾರೆ.ಹಾಗೆಯೇ, ಸುಹಾಸ್ ಪ್ರಸಾದ್ ಸಿ. ಅವರು 26.01.2024 ರಂದು ಚೋರಡಿ ಗ್ರಾಮದ ಎನ್‌ಎಚ್‌ 69 ರಸ್ತೆಯಲ್ಲಿ ಸಿಕ್ಕಿದ್ದ ಪರ್ಸ್‌ನಲ್ಲಿ ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಅವರ ಮಾಲೀಕರಾದ ನಿವೃತ್ತ ಐಜಿಪಿ ಸುರೇಶ್ ಬಾಬು ಅವರ ಮಗಳು ಶಶಿ ಶಾಲಿನಿ ಅವರಿಗೆ ವಾಪಸು ನೀಡಿ, ಮಾನವೀಯತೆ ಮತ್ತು ಪ್ರಾಮಾಣಿಕತೆಯ ಪ್ರತಿರೂಪವಾಗಿದ್ದಾರೆ.ಈ ಎರಡೂ ಉದಾಹರಣೆಗಳು, ಇಂದಿನ ಸಮಾಜದಲ್ಲಿ ಮಾನವೀಯತೆ ಮತ್ತು ಪ್ರಾಮಾಣಿಕತೆ ಇನ್ನೂ ಜೀವಂತವಾಗಿರುವುದನ್ನು ತೋರಿಸುತ್ತವೆ. ಇನ್ಸ್ಪೆಕ್ಟರ್ ಹರೀಶ್ ಕೆ. ಪಟೇಲ್ ಅವರು ಈ ಇಬ್ಬರನ್ನು ಶಾಲು ಹೊದಿಸಿ ಸನ್ಮಾನಿಸುವ ಮೂಲಕ, ಇವರ ಕೃತ್ಯಕ್ಕೆ ಗೌರವವನ್ನು ಸಲ್ಲಿಸಿದ್ದಾರೆ.

ಗೌರಿ ಮತ್ತು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹರೀಶ್ ಪಾಟೀಲ್  ಪೊಲೀಸ್ ನಿರೀಕ್ಷಕರು, ಕುಂಸಿ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ಮುಂಚಿತವಾಗಿಯೇ  ಗಣೇಶ ಪ್ರತಿಷ್ಟಾಪನಾ ಸಮಿತಿಯ ಸದಸ್ಯರ ಸಭೆಯನ್ನು ನಡೆಸಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.

1) ಗಣಪತಿ ಮೂರ್ತಿ ಪ್ರತಿಷ್ಟಾಪನೆ ಮಂಡಳಿಯವರು ಗಣಪತಿ ಮೂರ್ತಿಗಳನ್ನು ಕೂರಿಸುವ ಮುನ್ನ ಗಣಪತಿ ಪ್ರತಿಷ್ಠಾಪನಾ ಮಂಡಳಿಯ ಹೆಸರು, ಸದಸ್ಯರ ವಿವರ, ಪ್ರತಿಷ್ಟಾಪಿಸುವ ದಿನಾಂಕ, ಗಣಪತಿ ಮೂರ್ತಿ ಕೂರಿಸುವ ಸ್ಥಳ, ಎಷ್ಟು ದಿನಳವರೆಗೆ ಕೂರಿಸಲಾಗುತ್ತದೆ, ಮೆರವಣಿಗೆ ಮಾರ್ಗ, ವಿಸರ್ಜನೆ ಮಾಡುವ ದಿನಾಂಕ ಹಾಗೂ ಸ್ಥಳದ ಮಾಹಿತಿಯನ್ನು ಮುಂಚಿತವಾಗಿಯೇ ಪೊಲೀಸ್ ಠಾಣೆಗೆ ನೀಡಿ ಸಹಕರಿಸಬೇಕಾಗಿ ವಿನಂತಿಸಿದರು.

ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯ  ಸಿರಿಗೆರೆ ಚೆಕ್ ಪೋಸ್ಟ್ ಇಂದ ಒಂದುವರೆ ಎರಡು ಕಿಲೋಮೀಟರ್ ದೂರದಲ್ಲಿ ಒಂದು ಶವ ಬಿದ್ದಿರುತ್ತದೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.!