- ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯವರು 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಿವಮೊಗ್ಗದ ಬಸವಕೇಂದ್ರದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಚಂದ್ರಪ್ಪ ಮೋಹನ್ ಬಸವರಾಜಪ್ಪ ವೈಜಿನಾಥ ಬಸವಾರಾಜ್ ಕೋಡದ್ ರುದ್ರೆಶ್ ಕೋಡದ್ ಸತೀಶ್ ಮುಂಚೆಮನೆ ಲೋಕೆಶ್ವರಪ್ಪ, ಸಜ್ಜನ್ ಶೆಟ್ಟರ್, ಹೆಮಂತ್ ಕಮಾರ್, ಮಂಜುನಾಥ, ಶಿವಯೋಗಿ ಹಂಚಿನಮನೆ, ಹಾಲಸ್ವಾಮಿ, ಚಿದಾನಂದ್, ಕೆ.ಜಿ.ವೆಂಕಟೇಶ,ಹಲವು ಭಕ್ತರು ಮತ್ತು ಸಮುದಾಯದ ಮುಖಂಡರು ಭಾಗವಹಿಸಿದ್ದರು.
- ಕಾರ್ಯಕ್ರಮ ನಂತರ ಬಸವ ನೆಲೆಯಲ್ಲಿ ತಿಂಡಿ ಮುಗಿಸಿದ ನಂತರ ಸ್ವಾಮೀಜಿಯವರ ನೇತೃತ್ವದಲ್ಲಿ “ಭೂದೇವಿಗೆ ಹಸಿರು ಬಾಗಿನ” ಎಂಬ ಅಭಿಯಾನವನ್ನು ರೂಪಿಸಲಾಯಿತು, ಇದರಡಿಯಲ್ಲಿ ಗಿಡಗಳನ್ನು ನೆಡುವ ಕಾರ್ಯ ಕೈಗೊಳ್ಳಲಾಯಿತು
-
ಈ ಕಾರ್ಯಕ್ರಮದಲ್ಲಿ ಡಾ. ಮರುಳಸಿದ್ದ ಸ್ವಾಮೀಜಿಯವರು ಭಕ್ತರು ಹಾಗೂ ನೆರೆದ ಎಲ್ಲರೊಂದಿಗೆ ಶಿಮುಲ್ ಪಕ್ಕದ ಜಮೀನಿಗೆ ತೆರಳಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದರು. ಈ ಸತ್ಕಾರ್ಯದಲ್ಲಿ ಎಸ್ ರುದ್ರೇಗೌಡರು, ಡಾ. ಧನಂಜಯ ಸರ್ಜಿ, ಜಿ ಬೆನಕಪ್ಪ, ಎಚ್ ಡಿ ನಾಗರಾಜ್ ಅನಿತಾ ರವಿಶಂಕರ್
ಈ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲು ಸ್ಥಳೀಯರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.ಈ ರೀತಿಯ ಚಟುವಟಿಕೆಗಳು ಪ್ರಕೃತಿ ಪ್ರೇಮವನ್ನು ಉತ್ತೇಜಿಸಲು ಮತ್ತು ಪರಿಸರವನ್ನು ಉಳಿಸುವ ಮಹತ್ವವನ್ನು ಎಲ್ಲರಿಗೂ ಸಾರಲು ಮುಖ್ಯವಾಗಿವೆ ಎಂದು ಸ್ವಾಮೀಜಿಯವರು ಹೇಳಿದರು.
Home ಇದೀಗ ಬಂದ ಸುದ್ದಿ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳವರಿಂದ 78ನೆಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಶಿಷ್ಟ ಕಾರ್ಯಕ್ರಮ ಭೂದೇವಿಗೆ...