Wednesday, September 25, 2024
spot_img

ಶಿಮುಲ್ ಚುನಾವಣೆ ದಿನೇಶ್ ಬುಳ್ಳಾಪುರ ಗೆಲುವು!

ಶಿಮುಲ್ ಚುನಾವಣೆ ದಿನೇಶ್ ಬುಳ್ಳಾಪುರ ಗೆಲುವು

ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಇಂದುಮತದಾನ ನಡೆದಿದ್ದು ಶೇ.99 ರಷ್ಟು ಮತದಾನವಾಗಿದೆ.

14 ಸ್ಥಾನದ ನಿರ್ದೇಶಕರ ಆಯ್ಕೆಗಾಗಿ

ನಡೆಯುವ ಶಿಮೂಲ್‌ ಚುನಾವಣೆಯಲ್ಲಿ 12 ಸ್ಥಾನಕ್ಕೆಮತ ಚಲಾವಣೆಯಾಗಿದೆ. ಮಾಚೇನಹಳ್ಳಿ ಡೈರಿಯಲ್ಲಿ ಮತದಾನ ಬೆಳಿಗ್ಗೆ 9 ರಿಂದ 4 ಗಂಟೆಯ ವರೆಗೆ ಮತಚಲಾವಣೆಯಾಗಿದ್ದು

ಶಿವಮೊಗ್ಗದಲ್ಲಿ 264 ಮತಗಳಲ್ಲಿ 264 ಮತಗಳು ಚಲಾವಣೆಯಾದರೆ, ಸಾಗರದಲ್ಲಿ 256 ಮತ್ತಗಳಲ್ಲಿ 255 ಮತಗಳು, ದಾವಣಗೆರೆಯಲ್ಲಿ 362 ರಲ್ಲಿ 361 ಮತ್ತು ಚಿತ್ರದುರ್ಗದಲ್ಲಿ 289 ಮತಗಳಲ್ಲಿ 289 ಮತಗಳು ಚಲಾವಣೆಯಾಗಿದೆ. ಅಂದರೆ 1171 ಮತಗಳಲ್ಲಿ 1169 ಮತಗಳು ಚಲಾವಣೆಯಾಗಿದ್ದವು

ಶಿಮುಲ್ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದಾ ದಿನೇಶ್ ಬುಳ್ಳಾಪುರವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ  ದಿನೇಶ್ ಬುಳ್ಳಾಪುರ ಅವರು115 ಮತ ತೆಗೆದುಕೊಂಡರೆ ಇನ್ನು ಬಿಜೆಪಿಯ ಬೆಂಬಲಿತ ಅಭ್ಯರ್ಥಿ ಜಗದೀಶ್ ರವರು 47 ಮತ ತೆಗೆದುಕೊಂಡಿದ್ದಾರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ  ಕುಂಚೆನಹಳ್ಳಿ ಜಗದೀಶ್ ರವರು 105 ಮತ ತೆಗೆದುಕೊಂಡು ಸೋತಿದ್ದಾರೆ 
ಭದ್ರಾವತಿ ಆನಂದ್ ರವರು 147 ಮತ ತೆಗೆದುಕೊಂಡು ಗೆಲವು ಸಾಧಿಸಿದ್ದಾರೆ. ಇನ್ನು 12 ನಿರ್ದೇಶಕರ ಸ್ಥಾನದ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.

 

 

Related Articles

Stay Connected

0FansLike
3,912FollowersFollow
0SubscribersSubscribe

Latest Articles