ಜಿಲ್ಲಾ ಒಕ್ಕಲಿಗರ ಸಂಘದ ಚುನಾವಣೆಗೆ ಭರ್ಜರಿ ಪ್ರಚಾರ ಗೆಲುವಿನ ಭರವಸೆಯಲ್ಲಿ ಕಡಿದಾಳ್ ಗೋಪಾಲ್ ನೇತೃತ್ವದ ತಂಡ.!

0
204

 

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ೨೧ ನಿರ್ದೇಶಕ ಸ್ಥಾನಗಳಿಗೆ ಆಗಸ್ಟ್ ೧೧ರ ಭಾನುವಾರ ಚುನಾವಣೆ ನಡೆಯಲಿದ್ದು, ೨೯ ಮಂದಿ ಚುನಾವಣಾ ಕಣದಲ್ಲಿದ್ದಾರೆ.  ಕಡಿದಾಳ್ ಗೋಪಾಲ್ ನೇತೃತ್ವದಲ್ಲಿ ೨೧ ಜನರ ಸಿಂಡಿಕೇಟ್ ಮಾಡಿಕೊಂಡು ಪ್ರಚಾರ ನಡೆಸಿದ್ದರೆ, ಇನ್ನುಳಿದ ೭ ಮಂದಿ ಮತ್ತೊಂದು ಪ್ರತ್ಯೇಕವಾಗಿ ಪ್ರಚಾರ ಕೈಗೊಂಡಿದ್ದು, ಗೆಲುವಿಗಾಗಿ ಪೈಪೋಟಿ ನಡೆಸಿದ್ದಾರೆ.

ಕಡಿದಾಳ್ ಗೋಪಾಲ್ ನೇತೃತ್ವದ ಸಿಂಡಿಕೇಟ್ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದು, ಮಾಜಿ ನಿರ್ದೇಶಕರುಗಳು, ಮಾಜಿ ಅಧ್ಯಕ್ಷರುಗಳು, ಬಿ.ಎ. ರಮೇಶ್ ಹೆಗ್ಡೆ, ಅಶಿತ್ ಬಳಗಟ್ಟೆ ಶಾಮಯ್ಯ, ಹಿರಿಯರಾದ ಆದಿಮೂರ್ತಿ, ಎನ್.ಎಚ್. ನಾಗರಾಜ್ (ನೀರುಳ್ಳಿ), ಕೆ.ವಿ. ಸುಂದರೇಶ್ ಹೀಗೆ ಹಲವರು ಹಳೆಯ ಘಟಾನುಘಟಿಗಳ ನಡುವೆ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಾ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಒಕ್ಕೂಟದಲ್ಲಿ ಸಾಕಷ್ಟು ಕೆಲಸ ಮಾಡಿರುವ ಎಸ್.ಎಂ. ದೇವೇಂದ್ರ, ಸುದರ್ಶನ್ ಹೆಚ್.ಪಿ. (ತಾಯಿಮನೆ), ಹಾಗೂ ಕೆ.ಎಸ್. ಪ್ರತಿಮಾ ಢಾಕಪ್ಪರವರುಗಳ ವೈಯಕ್ತಿಕ ವರ್ಚಸ್ಸಿನಿಂದ ಈ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಕಡಿದಾಳ್ ಗೋಪಾಲ್ ನೇತೃತ್ವದ ತಂಡದಲ್ಲಿ ಈ ಮೂವರು ಹೊಸ ಮುಖಗಳ ಗೆಲುವು ಖಚಿತ ಎಂದು ಒಕ್ಕಲಿಗ ಸಮುದಾಯ ಮಾತನಾಡಿಕೊಳ್ಳುತ್ತಿದೆ.
ಇದಲ್ಲದೇ ವಕೀಲ ರವಿಕುಮಾರ್, ಆಡಿಟರ್ ಪ್ರಕಾಶ್, ಯೋಗೀಶ್, ಹಿರಿಯರಾದ ವನಮಾಲಕ್ಕ ಇವರುಗಳು ಸಹ ವೈಯಕ್ತಿಕವಾಗಿ ಪೈಪೋಟಿ ನಡೆಸಿದ್ದಾರೆ.

ಕಡಿದಾಳ್ ಗೋಪಾಲ್ ನೇತೃತ್ವದ ತಂಡದಲ್ಲಿರುವ ಎಲ್ಲರೂವಿವಿಧಕ್ಷೇತ್ರಗಳಲ್ಲಿಗುರುತಿಸಿಕೊಂಡವರಾಗಿದ್ದು, ಇವರಲ್ಲಿ ಹಲವರು ಈ ಹಿಂದೆಯೂ ಸಂಘದ ನಿರ್ದೇಶಕರಾಗಿದ್ದು, ಕೆಲವರು ಮೊದಲ ಬಾರಿ ಸಂಘದ ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸಿದ್ದಾರೆ.
ಇನ್ನು ಗೆಲುವಿನ ಭರವಸೆ ಮೂಡಿಸಿರುವ ಎಸ್.ಎಂ. ದೇವೇಂದ್ರ ಇವರು ಯುವಧ್ವನಿ ಸಾಮಾಜಿಕ ಸೇವಾ ಸಂಸ್ಥೆ ನಿರ್ದೇಶಕರಾಗಿ, ಕೆಪಿಟಿಸಿಎಲ್ ನೌಕರರ ಸಂಘದ ಪ್ರಾಥಮಿಕ ಸಮಿತಿ ಅಧ್ಯಕ್ಷರಾಗಿ, ಕೆಪಿಟಿಸಿಎಲ್ ನೌಕರರ ಸಂಘದ ನಿರ್ದೇಶಕರಾಗಿ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವದಲ್ಲದೇ ಕೆಂಪೇಗೌಡ ತಾಲ್ಲೂಕು ಒಕ್ಕಲಿಗರ ಸಂಘದ ನಿರ್ದೇಶಕರಾಗಿ, ಜಿಲ್ಲಾ ಒಕ್ಕಲಿಗರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಒಕ್ಕಲಿಗ ಸಮಾಜ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಸುದರ್ಶನ್ ಹೆಚ್.ಪಿ (ತಾಯಿಮನೆ) ಇವರು ಸಮಾಜ ಸೇವಾ ಕಾರ್ಯಗಳಿಗೆ ಹೆಸರಾಗಿದ್ದು, ತಾಯಿಮನೆ ಫೌಂಡೇಶನ್‌ನ ಅಧ್ಯಕ್ಷರಾಗಿ ಅನಾಥ ಮಕ್ಕಳ ಪಾಲನೆ ಮಾಡುವ ಮೂಲಕ ಜಿಲ್ಲೆಯಲ್ಲಿ ಮನೆ ಮಾತಾಗಿದ್ದಾರೆ. ಮದರ್ ಸಂಸ್ಥೆ ಕಾರ್ಯದರ್ಶಿಯಾಗಿ, ಜಿಲ್ಲಾ ಪೇವಾರ್ಡ್ ಕೆ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ, ಜೆಸಿಐ ಶಿವಮೊಗ್ಗ ರಾಯಲ್ಸ್ನ ಅಧ್ಯಕ್ಷರಾಗಿ, ಅಖಿಲ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಜಿಲ್ಲಾ ಜೀತ ಪದ್ಧತಿ ಕಾಯ್ದೆ ಜಿಲ್ಲಾ ಸಲಹಾ ಸಮಿತಿ ಸದಸ್ಯರಾಗಿ, ಹೆಣ್ಣು ಭ್ರೂಣ ಹತ್ಯೆ ತಡೆ ಕಾಯ್ದೆ ಜಿಲ್ಲಾ ಸಲಹಾ ಸಮಿತಿ ಸದಸ್ಯರಾಗಿ, ಶಿಶುಪಾಲನ ಕೇಂದ್ರ ಜಿಲ್ಲಾ ಸಮಿತಿ ಸದಸ್ಯರಾಗಿ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಕೆ.ಎಸ್. ಪ್ರತಿಮಾ ಢಾಕಪ್ಪ ಇವರು ಜೆ.ಹೆಚ್.ಐ. ಜಿಲ್ಲಾ ಸಂಘ, ಜಿಲ್ಲಾ ಚುಂಚಾದ್ರಿ ಮಹಿಳಾ ಸಂಘಗಳ ಪೂರ್ವಾಧ್ಯಕ್ಷರಾಗಿದ್ದಾರೆ. ಜಿಲ್ಲಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳ ಸಂಘದ ಪೂರ್ವಾಧ್ಯಕ್ಷರಾಗಿ, ಜಿಲ್ಲಾ ಶ್ರೀ ಲಲಿತ ಮಹಿಳಾ ಒಕ್ಕೂಟದ ಪೂರ್ವಾಧ್ಯಕ್ಷರಾಗಿ, ಶಿವಮೊಗ್ಗ ಜೆಸಿಐ ಭಾವನ ಪೂರ್ವಾಧ್ಯಕ್ಷರಾಗಿ, ಜೆಸಿಐ ಝೋನ್ ೨೪ರ ಪೂರ್ವ ಅಧಿಕಾರಿಗಳಾಗಿ, ಜಿಲ್ಲಾ ಜನಪದ ಪರಿಷತ್‌ನ ಹಾಲಿ ಸಂಚಾಲಕರಾಗಿ, ಇನ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗ ರಿವರ್ ಸೈಡ್‌ನ ಪೂರ್ವಾಧ್ಯಕ್ಷರಾಗಿ, ಅಖಿಲ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ, ಫಾರ್ಮಸಿ ಅಂಡ್ ಅಲೈಡ್ ಸಹಕಾರ ನಿಯಮಿತ ನಿರ್ದೇಶಕರಾಗಿ, ಅರಿವು ಸಾಮಾಜಿಕ ಸಂಸ್ಥೆ ನಿರ್ದೇಶಕರಾಗಿ, ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಒಕ್ಕೂಟದ ನಿರ್ದೇಶಕರಾಗಿ, ಜಿಲ್ಲಾ ಲೈಂಗಿಕ ಕಿರುಕುಳ ಸಮಿತಿ ಡಿಹೆಚ್‌ಓ ಕಚೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಲಹಾ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಒಟ್ಟಾರೆ ಒಕ್ಕಲಿಗರ ಸಂಘಕ್ಕೆ ನಾಳೆ ನಡೆಯಲಿರುವ ಚುನಾವಣೆಯಲ್ಲಿ ಕಡಿದಾಳ್ ಗೋಪಾಲ್ ನೇತೃತ್ವದ ತಂಡ ಗೆಲುವಿನ ಭರವಸೆಯಲ್ಲಿದ್ದು, ಹೊಸದಾಗಿ ಸಂಘದ ಕಾರ್ಯಕಾರಿ ಸಮಿತಿಗೆ ನಿರ್ದೇಶಕರಾಗಿ ಎಸ್.ಎಂ. ದೇವೇಂದ್ರಪ್ಪ, ಸುದರ್ಶನ್ (ತಾಯಿಮನೆ) ಹಾಗೂ ಕೆ.ಎಸ್. ಪ್ರತಿಮಾ ಢಾಕಪ್ಪ ಆಯ್ಕೆಯಾಗುವುದು ಖಚಿತವಾಗಿದೆ ಎಂಬ ಮಾಹಿತಿಗಳು ಬರುತ್ತಿವೆ.