ಕೆ.ಬಿ. ಅಶೋಕ್ ನಾಯ್ಕ್ ನಾಮಪತ್ರ ಸಲ್ಲಿಕೆ

0
109

ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಕೆ.ಬಿ. ಅಶೋಕ್ ನಾಯ್ಕ್ ಅವರು ಇಂದು ಅವರ ಉಮೇದುವಾರಿಕೆಯನ್ನು ಸ್ಲಲಿಸಿದರು.

ಇದಕ್ಕೂ ಮುನ್ನ ಅವರು ರವೀಂದ್ರನಗರದ ಶ್ರೀ ಪ್ರಸನ್ನ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಮೆರವಣಿಗೆಯಲ್ಲಿ ತಾಲ್ಲೂಕು ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದರು.

 


ಈ ಸಂದರ್ಭದಲ್ಲಿ ಡೊಳ್ಳುಕುಣಿತದ ತಂಡದೊAದಿಗೆ ನೂರಾರು ಸಂಖ್ಯೆಯ ಮಹಿಳೆಯರೂ ಸಾಥ್ ನೀಡಿದ್ದರು.
ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಆಗಮಿಸಿದ ಅಭ್ಯರ್ಥಿ ಕೆ.ಬಿ. ಅಶೋಕ್ ನಾಯ್ಕ್ಗೆ ಸಂಸದ ಬಿ.ವೈ. ರಾಘವೇಂದ್ರ, ಅಧ್ಯಕ್ಷರಾದ ಟಿ.ಡಿ. ಮೇಘರಾಜ್, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇ ಗೌಡ್ರು,

 

ಅರುಣ್ ಡಿ.ಎಸ್., ಭಾರತಿ ಶೆಟ್ಟಿ, ಗ್ರಾಮಾಂತರ ಚುನಾವಣಾ ಪ್ರಭಾರಿ ಎಸ್ ದತ್ತಾತ್ರಿ, ಮಂಡಲ ಅಧ್ಯಕ್ಷರಾದ ರತ್ನಾಕರ್‌ಶೆಣೈ, ಮಂಜುನಾಥ್, ಚುನಾಯಿತ ಪ್ರತಿನಿಧಿಗಳು ಸಾಥ್ ನೀಡಿದರು.