Wednesday, September 25, 2024
spot_img

ಅಂತರಾಷ್ಟ್ರೀಯ ಸಂಸ್ಥೆಯಾದ ಶಿವಮೊಗ್ಗ ಕಾಸ್ಮೋಪಾಲಿಟನ್ ಕ್ಲಬ್‌ನ ಪದಗ್ರಹಣ 2024-2025 ಸಾಲಿನ ಲಯನ್ಸ್ ಅಧ್ಯಕ್ಷ ಯಾರು .!?

ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯಾದ ಶಿವಮೊಗ್ಗ ಕಾಸ್ಮೋಪಾಲಿಟನ್ ಕ್ಲಬ್‌ನ ಪದಗ್ರಹಣ ಸಮಾರಂಭವು ಶಿವಮೊಗ್ಗ ಲಯನ್ಸ್ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವು ಕುಮಾರಿ ತನ್ಮಹಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.

ಪದಗ್ರಹಣ ಸಮಾರಂಭವನ್ನು ಲಯನ್ ಸುರೇಶ್ ಪ್ರಭು PMGF, ಪದಗ್ರಹಣ ಅಧಿಕಾರಿ, ನಡೆಸಿಕೊಟ್ಟರು. 2024-2025 ಸಾಲಿನ ಲಯನ್ಸ್ ಅಧ್ಯಕ್ಷರಾಗಿ ಪರಮೇಶ್ವರಪ್ಪ ಎನ್, ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ, ಖಜಾಂಜಿಯಾಗಿ ಮಂಜುನಾಥ್ ಎಸ್.ಎನ್. ಪದಗ್ರಹಣ ಮಾಡಿದರು.ಈ ಸಂದರ್ಭದಲ್ಲಿ, ಸಾಮಾಜಿಕ ಸೇವೆಯ ಭಾಗವಾಗಿ ಸರಕಾರಿ ಪ್ರಾಥಮಿಕ ಶಾಲೆ ಅನುಪಿನ ಕಟ್ಟಿಯ 50 ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು. ಇಂಜಿನಿಯರಿಂಗ್ ವಿದ್ಯಾರ್ಥಿಯಾದ ಶರದಿ ಅವರಿಗೆ ಉತ್ತಮ ಭರತನಾಟ್ಯಕ್ಕಾಗಿ ಸಮ್ಮಾನಿಸಲಾಯಿತು.

Oplus_131072

ಭಾರತ ಮತ್ತು ಶ್ರೀಲಂಕಾ ನಡುವಿನ 2024ರ ಅಥ್ಲೆಟಿಕ್ ಚಾಂಪಿಯನ್ಶಿಪ್‌ನಲ್ಲಿ ಜಯ ಸಾಧಿಸಿದ ಕಲ್ಯಾಣಿ ಅವರನ್ನು ಗೌರವಪೂರ್ಣವಾಗಿ ಅಭಿನಂದಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕ್ಲಬ್ಬಿನ ಹಿಂದಿನ ಅಧ್ಯಕ್ಷರಾದ ಜಯದೇವ ಎಂ, ಕಾರ್ಯದರ್ಶಿಯಾದ ಪರ್ಸಿ ಡಿಸೋಜಾ, ಮತ್ತು ವಿ.ರಾಜು, ZC ಹೊನ್ನಪ್ಪ, ಸಿ.ರಾಜೇಶ್, ಟಿ.ಯೋಗೇಶ, ಶಶಿಧರ್ ಟಿ.ಎನ್, ಶ್ರೀಮತಿ ಐರನ್ ಡಿಸೋಜ, ಗಿರೀಶ್ ಬಂಡಿಗಡಿ, ಏಸುದಾಸ್, ಪ್ರಭಾಕರ್ ಎಸ್ಎಂ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವು ಸಮುದಾಯದ ಸೇವೆಯ ಮಹತ್ವವನ್ನು ತೋರಿಸುವುದರ ಜೊತೆಗೆ, ಯುವ ಪ್ರತಿಭೆಗಳ ಸಾಧನೆಗಳನ್ನು ಗುರುತಿಸಿ ಗೌರವಿಸುವ ಸ್ಮರಣೀಯವಾಗಿತ್ತು.

Related Articles

Stay Connected

0FansLike
3,912FollowersFollow
0SubscribersSubscribe

Latest Articles