ಐ.ಸಿ.ಎ.ಆ‌ರ್- ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇಲ್ಲಿ   ಒಂದು ದಿನದ ಒಳ ಆವರಣ ತರಬೇತಿ .!

0
48
oplus_0

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಇರುವಕ್ಕಿ, ಶಿವಮೊಗ್ಗ ವಿಸ್ತರಣಾ ನಿರ್ದೇಶನಾಲಯ, ಶಿವಮೊಗ್ಗ

ಐ.ಸಿ.ಎ.ಆ‌ರ್- ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇಲ್ಲಿ ಒಂದು ದಿನದ ಒಳ ಆವರಣ ತರಬೇತಿ  ಹಮ್ಮಿಕೊಂಡಿದ್ದು  ವೈಜ್ಞಾನಿಕ ಜೇನು ಕೃಷಿ ಕಾರ್ಯಗಾರವನ್ನು ಹಿರಿಯ ವಿಜ್ಞಾನಿ ಬಿ.ಸಿ.ಹನುಮಂತ ಸ್ವಾಮಿ ಸಸ್ಯ ವಿಸ್ತರಣಾ ಅಧಿಕಾರಿಗಳು , ಹಾಗೂ ಸಂಪನ್ಮೂಲ ವ್ಯಕ್ತಿಯಾದ ಡಾ. ಆರ್. ಗಿರೀಶ್ ವಿಜ್ಞಾನಿ (ಸಸ್ಯ ಸಂರಕ್ಷಣೆ) ಅಶೋಕ್ ಎಂ ಪಶು ವಿಜ್ಞಾನಿ,
ಡಾ ಜಿ ಕೆ ಗಿರಿಜೇಶ್ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಇವರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಗಾರವನ್ನು ಉದ್ಘಾಟನೆ ಮಾಡಲಾಯಿತು 
ಕಾರ್ಯಗಾರದ ಉದ್ಘಾಟನಾ ಭಾಷಣವಾಗಿ ಡಾಕ್ಟರ್ ಹನುಮಂತ ಸ್ವಾಮಿಯವರು ಮಾತನಾಡುತ್ತಾ ಜೇನು ಕೃಷಿಯನ್ನು ಐಸಿಐ ಮಾದರಿಯಲ್ಲಿ ವೈಜ್ಞಾನಿಕವಾಗಿ ಯಾವ ರೀತಿ ಜೇನು ಸಾಕಾಣೆ ಮಾಡಬಹುದೆಂದು ಡಾಕ್ಟರ್ ಗಿರೀಶ್ ರವರು ಸಂಪನ್ಮೂಲ ವ್ಯಕ್ತಿಗಳಾಗಿರುವುದರಿಂದ ಹೆಚ್ಚಿನ ವಿಷಯವನ್ನು ತಿಳಿಸುತ್ತಾರೆ. ಹಿಂದೆ ಜನರು ಮಡಿಕೆಯಲ್ಲಿ ಜೇನು ಸಾಕಣೆ ಮಾಡುತ್ತಿದ್ದು ಈಗ ಇದು ವೈಜ್ಞಾನಿಕವಾಗಿ ಬದಲಾಗಿದೆ ಈಗ ಬಿಲ್ಡಿಂಗ್ ಮೇಲೆ ಮನೆಯ ಪಕ್ಕದಲ್ಲಿ ಜೇನು ಕೃಷಿ ಮಾಡಬಹುದು  ಶಬ್ದ ಮಾಲಿನ್ಯ ಕಡಿಮೆ ಇದ್ದರೆ ಸೂಕ್ತ ನೀರು ಹಾಗೂ ಹೂವಿನ ಗಿಡಗಳು ಇರುವ ಕಡೆ ಜೇನು ಕೃಷಿ ಮಾಡುವುದು ಒಳ್ಳೆಯದು ಎಂದರು.

ಸಂಪನ್ಮೂಲ ವ್ಯಕ್ತಿ ಹಿರಿಯ ವಿಜ್ಞಾನಿ ಡಾ. ಆರ್ ಗಿರೀಶ್ ಅವರ ವಿಶ್ಲೇಷಣೆ

oplus_0

ಒಂದೇ ಉದ್ಯೋಗದಿಂದ ರೈತರಿಗೆ ನಷ್ಟ ಜಾಸ್ತಿ ಇರುತ್ತದೆ ಆದ್ದರಿಂದ ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು

oplus_0

ಈಗ ಪಂಚಾಮೃತದಲ್ಲೂ ಜೇನು ಬಳಸುತ್ತಾರೆ ಕಿತ್ತಲೆ ಹಣ್ಣು ಬೆಳೆಯುವವರು ಜೇನುಪರಗ ಸ್ಪರ್ಶದಿಂದ ಹೆಚ್ಚು ಇಳುವರಿ ಜಾಸ್ತಿ ಇರುತ್ತದೆ 88% ಬೆಳೆಗಳು ಪರಾಗಪ ಸ್ಪರ್ಶ ಅವಲಂಬಿಸುರೂತ್ತವೆ ರೈತರ ಅಡಿಕೆ ಬೆಳೆ ತೋಟಗಳಲ್ಲಿ 60% ನಿಂದ 65 ಪರ್ಸೆಂಟ್ ವರೆಗೆ ಜೇನುನೊಣ ಸ್ಪರ್ಶದಿಂದ ಇಳವರಿ ಜಾಸ್ತಿ ಆಗಿರುವುದು ವೈಜ್ಞಾನಿಕ ಸಮೀಕ್ಷೆಯಿಂದ ಧೃಡಪಟ್ಟಿದೆ ಒಂದು ಜೇನು ಪೆಟ್ಟಿಗೆಯಿಂದ 3000 ದಿಂದ 3500ವರೆಗೆ ಜೇನುತುಪ್ಪದಿಂದ ಆದಾಯ ಗಳಿಸಬಹುದು ಒಬ್ಬ ರೈತ 50 ಬಾಕ್ಸ್ ಕಾರ್ಯನಿರ್ವಹಿಸಬಹುದು ಹಾಗೂ ಅವನಿಗೆ ಸ್ವಂತ ಉದ್ಯೋಗ ಹಳ್ಳಿಯಲ್ಲಿ ದೊರಕುವಂತಾಗುತ್ತದೆ, ಇದಲ್ಲದೆ ರೈತ ಮೀನು ಕೃಷಿ ಎರೆಹುಳು ಗೊಬ್ಬರ ಒಟ್ಟಿಗೆ ಮಾಡಿದರೆ ಆದಾಯ ಇನ್ನಷ್ಟು ಹೆಚ್ಚು ಗಳಿಸಬಹುದು ಇದಕ್ಕೆ ತಾಜಾ ಉದಾಹರಣೆಯಂತೆ ಶಿರಸಿಯ ಮಧುಕೇಶ್ವರ್ ಮುದುಕೇಶ್ವರ್ ಹೆಗಡೆಯವರು ಜೇನು ಕೃಷಿ ಮಾಡಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ  ದೇಶದಲ್ಲಿ ಕರೋನಾ ಎಂಬ ಮಹಾಮಾರಿಯೋ ಜನತೆಗೆ ಕಾಡಿದಾಗ ಜೇನು ಕೃಷಿ ಮಾಡುವವರಲ್ಲಿ ಜೇನು ಕಡಿತದಿಂದ ಕರೋನವು ಅವರ ಹತ್ತಿರ ಸುಳ್ಯದೆ ಇರುವುದನ್ನು ದೇಶದಲ್ಲೆಲ್ಲ ವೈಜ್ಞಾನಿಕ ಸಮೀಕ್ಷೆ ಮಾಡಿ ದೃಢಪಡಿಸಿದ್ದಾರೆ. ಹಾಗಾಗಿ ಜೇನು ಕೃಷಿಯಿಂದ ಇರುವ ಲಾಭವನ್ನು ನೆರೆದಿದ್ದ ರೈತರಿಗೆ ಸಂಕ್ಷಿಪ್ತವಾಗಿ ಒಂದು ದಿನ ತರಬೇತಿಯನ್ನು ನೀಡಿದರು. ತರಬೇತಿಯಲ್ಲಿ ಭಾಗವಹಿಸಿದ್ದ ರೈತರು ಹಲವು ಪ್ರಶ್ನೆಗಳನ್ನು ಕೇಳಿದರು ಅದಕ್ಕೆ ಡಾ. ಗಿರೀಶ್ ಅವರು ಸರಿಯಾದ ಉತ್ತರವನ್ನು ರೈತರಿಗೆ ಮನದಟ್ಟು ಮಾಡಿದರು ರಘು ರೈತರು ಒಂದು ದಿನದ ತರಬೇತಿಗಿಂತ ಮೂರು ದಿನದ ತರಬೇತಿ ನೀಡಿದರೆ ಉತ್ತಮ ಎಂಬ ಸಲಹೆಯನ್ನು ನೀಡಿದರು ಮುಂದಿನ ದಿನದಲ್ಲಿ ಮೂರು ದಿನ ತರಬೇತಿ ಹಮ್ಮಿಕೊಳ್ಳುವ ಭರವಸೆಯೊಂದಿಗೆ ಮಧ್ಯಾಹ್ನದ ಭರ್ಜರಿ ಊಟದೊಂದಿಗೆ ತರಬೇತಿ ಮುಕ್ತಾಯವಾಯಿತು.