Wednesday, September 25, 2024
spot_img

ಪಿಡಬ್ಲ್ಯೂಡಿ,ಲೋಕೋಪಯೋಗಿ ಇಲಾಖೆಯ ನಿರ್ಲಕ್ಷದಿಂದ ರೈತ ನವೀನ ಕುಮಾರ್ ಕಾಲು ಮುರಿದುಕೊಂಡ್ರ.!?

 

ನೆನ್ನೆ ರಾತ್ರಿ ಭದ್ರಾವತಿ ಸಮೀಪದ ಮೊಸರಹಳ್ಳಿ, ಸುಣ್ಣದಹಳ್ಳಿ ರಸ್ತೆಯಲ್ಲಿ ನಡೆದ ದುರಂತವು ಲೋಕೋಪಯೋಗಿ ಇಲಾಖೆಯ ನಿರ್ಲಕ್ಷವನ್ನು ಮತ್ತೊಮ್ಮೆ ಮುಂದಿಟ್ಟಿದೆ.  ರಸ್ತೆ ಅಗಲೀಕರಣ ಕಾಮಗಾರಿಯ ಸಂದರ್ಭದಲ್ಲಿ ಗುತ್ತಿಗೆದಾರನ ನಿರ್ಲಕ್ಷದಿಂದ ಸೂಕ್ತ ಸೂಚನಾ ಫಲಕ ಮತ್ತು ಬ್ಯಾರಿಕೆಟ್‌ಗಳನ್ನು ಅಳವಡಿಸದೇ ಕಾಮಗಾರಿ ಮುಂದುವರಿದಿತ್ತು.

ನೆನ್ನೆ ರಾತ್ರಿ ಭದ್ರಾವತಿ ಮೊಸರಹಳ್ಳಿ, ಸುಣ್ಣದಹಳ್ಳಿ ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಗುತ್ತಿಗೆದಾರನ ನಿರ್ಲಕ್ಷದಿಂದ ಸೂಚನಾ ಫಲಕ ಹಾಗೂ ಬ್ಯಾರಿಕೆಟ್ ಅಳವಡಿಸಿದೆ ಕಾಮಗಾರಿ ನಡೆಸುತ್ತಿದ್ದು ದ್ವಿಚಕ್ರ ವಾಹನದಲ್ಲಿ ರೈತ ನವೀನ್ ಕುಮಾರ್ ಹೋಗುವಾಗ ರಸ್ತೆಯಲ್ಲಿ ಕಾಮಗಾರಿ ನಡೆಸಲು ತೆಗೆದ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ  ತುರ್ತು ಶಸ್ತ್ರಚಿಕಿತ್ಸೆ ಮಾಡಲಾಯಿತು. 

ಘಟನೆ ನಡೆದು ಸ್ವಲ್ಪ ಸಮಯದ ನಂತರ ಇದೆ ಜಾಗದಲ್ಲಿ ಗಾಂಧಿನಗರ ಗ್ರಾಮದ ರೈತ ಮಧು ಸಹ ಬಿದ್ದು ಸಣ್ಣಪುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ, ನಮ್ಮ ಸರ್ಕಾರ ಸಣ್ಣಪುಟ್ಟ ತಪ್ಪು ಮಾಡುವ ದ್ವಿಚಕ್ರ ವಾಹನ ಸವಾರರಿಗೆ ದಂಡದ ಮೇಲೆ ದಂಡ ವಿಧಿಸುತ್ತಾರೆ ಯಾವುದೇ ಮುನ್ಸೂಚನೆ ಫಲಕವಿಲ್ಲದ ಕಾರಣ ಅಮಾಯಕರಿಬ್ಬರು ಅನಾವಥಕ್ಕೊಳಗಾಗಿ ನವೀನ್ ಎಂಬುವವರ ಕಾಲು ಮೂಳೆ ಕಟ್ಟಾಗಿಯೇ ಹೋಗಿದ್ದು ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿ ಪ್ರಕಾರ ಗುತ್ತಿಗೆದಾರ ನೀಲಕಂಠ ಎಂಬುದು ತಿಳಿದು ಬಂದಿದ್ದು ಮೊಸರಹಳ್ಳಿ ವ್ಯಾಪ್ತಿಯ ಪೊಲೀಸ್ ಠಾಣೆ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಯಾವುದೇ ಮುಲಾಜಿಗೂ ಒಳಗಾಗದೆ ಗುತ್ತಿಗೆದಾರಿನ ಮೇಲೆ ಪ್ರಕರಣ ದಾಖಲಿಸಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ  ಸೇರ್ಪಡೆಗೊಳಿಸಬೇಕು ಎಂದು ಸ್ಥಳೀಯ ರೈತರು ಮತ್ತು ಸಾರ್ವಜನಿಕರು ಸಹ ಈ ದುರಂತದ ನಂತರ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.  ಸ್ಥಳೀಯ ಜನರು ಮತ್ತು ರೈತರು ಆಕ್ರೋಶ ವ್ಯಕ್ತಪಡಿಸುತ್ತಾ, ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರ ಮೇಲಿನ ಕ್ರಮವನ್ನು ತಕ್ಷಣ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

Related Articles

Stay Connected

0FansLike
3,912FollowersFollow
0SubscribersSubscribe

Latest Articles