ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಅಧ್ಯಕ್ಷ ತಾಲೂಕು ಅಧ್ಯಕ್ಷ ಚುನಾವಣೆ  ಜು.21…! ಯಾರಾಗ್ತಾರೆ ಆಯ್ಕೆ..!?

0
67

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಅಧ್ಯಕ್ಷ ತಾಲೂಕು ಅಧ್ಯಕ್ಷ ಚುನಾವಣೆ  ಜು.21…! ಯಾರಾಗ್ತಾರೆ ಆಯ್ಕೆ..!?

1909ರಲ್ಲಿ ವೀರಶೈವ ಲಿಂಗಾಯತ ಸಮಾಜದ ಒಳತಿಗಾಗಿ ಹಾನಗಲ್ ಕುಮಾರಸ್ವಾಮಿಯವರು ಅಖಿಲ ಭಾರತ ವೀರಶೈವ ಮಹಾಸಭಾ ಸಂಘಟನೆ ಹುಟ್ಟು ಹಾಕಿದ್ದರು ಮಹಾಸಭಾ ಸಂಘಟನೆಯಲ್ಲಿ ಸಮಾಜದ ಅತಿ ದೊಡ್ಡ ವ್ಯಕ್ತಿಗಳು ಸಮಾಜದ ಒಳತಿಗಾಗಿ ಕಾರ್ಯ ನಿರ್ವಹಿಸಿದ್ದಾರೆ,

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಜ್ಯದ ಎಲ್ಲಾ ಅಧ್ಯಕ್ಷರ ಸ್ಥಾನಕ್ಕೆ ಜು.21 ರಂದು ಚುನಾವಣೆ ನಡೆಯಲಿದೆ. ಅದರಂತೆ ಶಿವಮೊಗ್ಗದಲ್ಲಿ ಅಧ್ಯಕ್ಷಸ್ಥಾನಕ್ಕೆ ಅವಿರೋಧ ಆಯ್ಕೆಗಾಗಿ ಸಮಾಜದ ಹಿರಿಯರು ಪ್ರಯತ್ನ ಪಟ್ಟರು ಪಲ ನೀಡದೆ ಕೋನೆ ಹಂತದಲ್ಲಿ ಚುನಾವಣೆಗೆ ಸಜ್ಜಾಗಿದೆ

ಜಿಲ್ಲೆಯಲ್ಲಿ 3115 ಜನ ಮತದಾರರಿದ್ದು ಇವರುಗಳು ನಿರ್ದೇಶಕರನ್ನ ಆಯ್ಕೆ ಮಾಡಲಿದ್ದಾರೆ. 3115 ಜನರಲ್ಲಿ 20 ಪುರುಷರು 10 ಮಹಿಳೆಯರು ಆಯ್ಕೆಯಾಗಲಿದ್ದು ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಹಾಗೂ ತಾಲೂಕು ಅಧ್ಯಕ್ಷರ ಒಟ್ಟು 31 ಜನ ಆಯ್ಕೆಯಾಗಲಿದ್ದಾರೆ. ಈಗಾಗಲೇ 30 ಜನ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ.

ಜಿಲ್ಲೆ ಮತ್ತು ತಾಲೂಕು ಅಧ್ಯಕ್ಷರ ಸ್ಥಾನಕ್ಕೆ   ಜು.21 ರಂದು ಚುನಾವಣೆ ನಡೆಯಲಿದೆ. ಜಿಲ್ಲೆಯ ಅಧ್ಯಕ್ಷರ ಸ್ಥಾನಕ್ಕೆ ರುದ್ರಮುನಿ ಸಜ್ಜನ್, ಅಶ್ವಿನ್ ಕೆಪಿ, ನಂಜಪ್ಪ ಈ ಮೂವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

ಇದರಲ್ಲಿ ರುದ್ರಮುನಿ ಸಜ್ಜನ್ ಸಮಾಜದ ಉಳತಿಗಾಗಿ ಹಗಲಿರಳು ಶ್ರಮಿಸಿದ್ದಾರೆ ಹಾಗಾಗಿ ಮತದಾರರ ಒಲವು ಸಜ್ಜನವರ ಪರವಾಗಿದ್ದು ಆಯ್ಕೆ ಬಹುತೇಕ ಖಚಿತವಾಗಿದೆ ಅದರಂತೆ ತಾಲೂಕು ಅಧ್ಯಕ್ಷರ ಚುನಾವಣೆಗೆ ಮಲ್ಲಿಕಾರ್ಜುನ್ ಸ್ವಾಮಿ ಸಂಗಮೇಶ್ ಮಠದ್ ನಡುವೆ ಚುನಾವಣೆ ಏರ್ಪಟ್ಟಿದ್ದು ಬಹುತೇಕ ಮತದಾರರು ಮಲ್ಲಿಕಾರ್ಜುನ್ ಸ್ವಾಮಿ ಪರ ಒಲವಿದೆ,

ವೀರಶೈವ ಕಲ್ಯಾಣ ಮಂದಿರದ ಪಕ್ಕವಿರುವ ಬಸವೇಶ್ವರ ಸ್ಕೂಲ್ ಆಫ್ ಎಜುಕೇಷನ್ ಸೊಸೈಟಿಯಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹಾಗೂ ತಾಲೂಕು ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಹೊಸನಗರ ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾಕ್ಕೆ ಶಿಕಾರಿಪುರದಲ್ಲಿ ಅಧ್ಯಕ್ಷರ ಆಯ್ಕೆಯಾಗಿದೆ. ತೀರ್ಥಹಳ್ಳಿಯಲ್ಲಿ ಯಾರು ಸ್ಪರ್ಧಿಸುತ್ತಿಲ್ಲ. ಭದ್ರಾವತಿ, ಸಾಗರದಲ್ಲಿ ಚುನಾವಣೆ ನಡೆಯಬೇಕಿದೆ. ಜಿಲ್ಲೆಗೆ ಚುನಾವಣೆ ಅಧಿಕಾರಿಯಾಗಿ ವಿಶ್ವನಾಥಯ್ಯ, ತಾಲೂಕಿಗೆ ಉಜ್ಜನಪ್ಪ ಬಸಯ್ಯ ನೇಮಕರಾಗಿದ್ದಾರೆ.