Wednesday, September 25, 2024
spot_img

ಡಿಸಿಸಿ ಬ್ಯಾಂಕ್ 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಗೆದ್ದು ಬಿಗಿದವರು ಯಾರು !?

 

ಡಿಸಿಸಿ ಬ್ಯಾಂಕ್ 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆಯಲ್ಲಿನಡೆ ಡಿಸಿಸಿ ಬ್ಯಾಂಕ್ ನ ಹೊಸನಗರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರಮೇಶ್ವರಪ್ಪ ಅವಿರೀಧ ಆಯ್ಕೆಯಾಗಿದ್ದರು.
ಉಳಿದ 12 ಸ್ಥಾನಕ್ಕೆ ಚುನಾವಣೆ ನಡೆದಿದ್ದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಶಿವಮೊಗ್ಗ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ ದುಗ್ಗಪ್ಪಗೌಡ ಮತ್ತು ಶಿವನಂಜಪ್ಪ.ಜೆ ನಡುವಿನ ಜಿದ್ದಾಜಿದ್ದಿಲ್ಲಿ ದುಗ್ಗಪ್ಪ ಗೌಡ ಗೆದ್ದು ಬೀಗಿದ್ದಾರೆ.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಭದ್ರಾವತಿ ತಾಲ್ಲೂಕು ಕ್ಷೇತ್ರದಿಂದ ಹೆಚ್.ಎಲ್. ಷಡಾಕ್ಷರಿ vs ಸಿ.ಹನುಮಂತಪ್ಪ ನುಡುವಿನ ಸಿ ಹನುಮಂತ ಹಣಾಹಣಿಯಲ್ಲಿ ಗೆದ್ದು ಬೀಗಿದ್ದಾರೆ. ಇವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ತೀರ್ಥಹಳ್ಳಿ ತಾ. ಕ್ಷೇತ್ರದಿಂದ ಬಸವಾನಿ ವಿಜಯದೇವ್, ಮತ್ತು ಕೆ.ಎಸ್.ಶಿವಕುಮಾರ್ ನಡುವಿನ ಫೈಟ್ ನಲ್ಲಿ ವಿಜಯದೇವ್ ಗೆಲವು ಸಾಧಿಸಿದ್ದಾರೆ.

ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಆನಂದ ಡಿ, ಕೆ.ಎಲ್.ಜಗದೀಶ್ವರ್, ಹೆಚ್.ಬಿ ದಿನೇಶ್, ಮಹಾಲಿಂಗಯ್ಯ ಶಾಸ್ತ್ರಿ ಎಸ್.ಎನ್, ಜೆ.ಪಿ ಯೋಗೇಶ್, ಟಿ. ಶಿವಶಂಕರಪ್ಪ, ಹರೀಶ್ ಎನ್.ಡಿ ನಡುವಿನ ಫೈಟ್ ನಲ್ಲಿ ರಾಷ್ಟ್ರಭಕ್ತ ಬಳಗದ ಮಹಲಿಂಗ ಶಾಸ್ತ್ರಿ ಗೆದ್ದಿದ್ದಾರೆ.

ಪ್ರಾ ಕೃ ಪ ಸ ಸಂಘ ನಿ ಸಾಗರ ತಾಲ್ಲೂಕು ಕ್ಷೇತ್ರದಿಂದ ಗೋಪಾಲಕೃಷ್ಣ ಬೇಳೂರು, ರತ್ನಾಕರ ಹೊನಗೋಡು ನಡುವಿನ ಬಿಗ್ ಫೈಟ್ ನಲ್ಲಿ ಶಾಸಕ ಬೇಳೂರು ಗೋಪಾಲ ಕೃಷ್ಣ ಗೆದ್ದು ಬೀಗಿದ್ದಾರೆ.ಪ್ರಾ ಕೃ ಪ ಸ ಸಂಘ ನಿ ಶಿಕಾರಿಪುರ ತಾಲ್ಲೂಕು ಕ್ಷೇತ್ರದಿಂದ ಅಗಡಿ ಅಶೋಕ, ಎಸ್.ಪಿ ಚಂದ್ರಶೇಖರಗೌಡ ನಡುವಿನ ಫೈಟ್ ನಲ್ಲಿ ಚಂದ್ರಶೇಖರ್ ಗೌಡ ಗೆದ್ದು ಬೀಗಿದ್ದಾರೆ.ಪ್ರಾ ಕೃ ಪ ಸ ಸಂಘ ನಿ ಸೊರಬ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ. ರುದ್ರಗೌಡ, ಶಿವಮೂರ್ತಿಗೌಡ‌ ನಡುವೆ ಸಚಿವ ಮಧು ಅವರ ಆಪ್ತ ಕೆ.ಪಿ ರುದ್ರೇಗೌಡ ಗೆದ್ದು ಬೀಗಿದ್ದಾರೆ.
ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಶಿವಮೊಗ್ಗ ಉಪ ವಿಭಾಗದಿಂದ ಆರ್.ಎಂ. ಮಂಜುನಾಥಗೌಡ ಮತ್ತು ವಿರೂಪಾಕ್ಷಪ್ಪ ಜಿ.ಈ ನಡುವೆ ಬಿಗ್ ಫೈಟ್ ನಲ್ಲಿ ಮಂಜುನಾಥ್ ಗೌಡ  ಬೀಗಿದ್ದಾರೆ.
ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಸಾಗರ ಉಪ ವಿಭಾಗದಿಂದ ಬಿ.ಡಿ ಭೂಕಾಂತ್, ಜಿ.ಎಸ್.ಸುಧೀರ್ ನಡುವಿನ ಜಿದ್ದಾ ಜಿದ್ದಿನಲ್ಲಿ ಜಿ.ಎಸ್ ಸುಧೀರ್ ಗೆದ್ದಿದ್ದಾರೆ.
ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಎಸ್.ಪಿ.ದಿನೇಶ, ಮರಿಯಪ್ಪ ನಡುವಿನ ಫೈಟ್ ನಲ್ಲಿ ಮರಿಯಪ್ಪ ಗೆದ್ದಿದ್ದಾರೆ.
ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಸಾಗರ ಉಪವಿಭಾಗದಿಂದ ಎಸ್.ಕೆ, ಬಸವರಾಜ್ ಡಿ.ಎಲ್, ರವೀಂದ್ರ ಹೆಚ್.ಎಸ್ ನಡುವಿನ ಫೈಟ್13 ಕ್ಷೇತ್ರದಲ್ಲಿ , ಮತ್ತೆ ಆರ್ ಎಂ‌. ಮಂಜುನಾಥ್ ಗೌಡರ ಮೇಲುಗೈ ಸಾಧಿಸಿದ್ದಾರೆ.
ಬ್ಯಾಂಕಿನ ಕಾರ್ಯ ವ್ಯಾಪ್ತಿಯಲ್ಲಿ ಬರುವ ಇನ್ನಿತರ
  ಈ ಹಿನ್ನಲೆಯಲ್ಲಿ ಆರ್ ಎಂ ಎಂ ಮತ್ತೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles