ತಾರಿಕೆರೆ ಲಕ್ಕವಳ್ಳಿ ಬಾವಿಕೆರೆಯಲ್ಲಿ ಕ್ರೈನ ಮತ್ತು ದ್ವಿಚಕ್ರ ವಾಹನದ ಅಪಘಾತದಲ್ಲಿ ಒಬ್ಬರ ಸಾವು!?

0
195

ಬಾವಿಕೆರೆ ರಸ್ತೆ ಕ್ರೈನ ಮತ್ತು ದ್ವಿಚಕ್ರ ವಾಹನದ ಅಪಘಾತದಲ್ಲಿ ಒಬ್ಬರ ಸಾವು!?

ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಸಂಭವಿಸಿದ ಈ ಘಟನೆ ಅತ್ಯಂತ ದುಃಖದ ಸಂಗತಿ. ಮಾರಕಂಡಯ್ಯ ಹಾಗೂ ಯೋಗಿಶ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಬಾವಿಕೆರೆ ರಸ್ತೆಯಲ್ಲಿ ಹೋಗುವಾಗ, ಎದುರುನಿಂದ ಬರುವ ಕ್ರೈನ್‌ ವಾಹನವು ಅಜಾಗರೂಕತೆಯಿಂದ ಡಿಕ್ಕಿ ಹೊಡೆದು, ಪರಿಣಾಮ ಅರಣ್ಯ ಇಲಾಖೆಯ ನಿವೃತ್ತ ನೌಕರ ಯೋಗಿಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾರ್ಕಂಡಯ್ಯ ಅವರನ್ನು ಗಂಭೀರ ಗಾಯಗಳೊಂದಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ, ಅವರು ಸಾವು ಬದುಕಿನ ಹೋರಾಟದಲ್ಲಿದ್ದಾರೆ

ಘಟನೆಯ ನಂತರ, ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕ್ರೈನ್ ಚಾಲಕ ಪೊಲೀಸರಿಗೆ ಶರಣಾಗಿದ್ದಾನೆ. ಹೆಚ್ಚಿನ ಮಾಹಿತಿ ತನಿಖೆಯ ನಂತರ ಲಭ್ಯವಾಗಲಿದೆ.