ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ!?

0
378

ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿಯ ಬರ್ಬರ ಹತ್ಯೆಯನ್ನು ಖಂಡಿಸಿ ಬಿಳಿಕಿ ಮಠದ ಪರಮ ಪೂಜ್ಯರಾದ ಶ್ರೀ ಶ್ರೀ ಶ್ರೀ ರಾಚೋಟೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ವೀರಶೈವದ ಹಲವು ಸಂಘ ಸಂಸ್ಥೆ ಮರಾಠ ಸಮಾಜ ಕುರುಬ ಸಮಾಜದವರು ಪಾಲ್ಗೊಂಡು ಘಟನೆಯ ಕುರಿತು ಉಗ್ರವಾಗಿ ಖಂಡಿಸಿದರು.

ಈ ಸಮಯದಲ್ಲಿ ಮಾತನಡಿದ ಸಂಸದ ರಾಘವೇಂದ್ರ ಅವರು ರಾಜ್ಯ ಸರ್ಕಾರ ಈ ಒಂದು ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡದೆ ವಿಶೇಷ ಪ್ರಕರಣ ಎಂದು ಭಾವಿಸಿ ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತ ತನಿಖೆ ನಡೆಸಿ ಕೊಲೆ ನಡೆಸಿರುವ ಆರೋಪಿಗಳಿಗೆ ಕಾನೂನು ರೀತ್ಯಾ ಕಠಿಣ ಶಿಕ್ಷೆ ವಿಧಿಸಲು ಕ್ರಮಕೈಗೊಳ್ಳುವಂತೆ ಈ ಮೂಲಕ ಕಣ್ಣೀರಿನಲ್ಲಿ ದಿನದೂಡುತ್ತಿರುವ ಕುಟುಂಬದ ಸದಸ್ಯರಿಗೆ ರೇಣುಕಾ ಸ್ವಾಮಿಯ ಗರ್ಭಿಣಿ ಹೆಂಡತಿಗೆ ಸರ್ಕಾರಿ ನೌಕರಿ ನೀಡಿ
ಸೂಕ್ತ ನ್ಯಾಯ ಕೊಡಿಸುವಂತೆ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಆಗ್ರಹ ಪಡಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ರುದ್ರೇಗೌಡ ಅವರು, ರುದ್ರಮುನಿ ಸಜ್ಜನ್ ಜ್ಯೋತಿಪ್ರಕಾಶ್ ರವರು,  ಜಗದೀಶ್ ಮರುಳೇಶ್ ಅವರು,  ಚಂದ್ರಪ್ಪ ಅವರು,  ಬಳ್ಳೇಕೆರೆ ಸಂತೋಷ ಎಚ್ ಕೆ ರಾಜಶೇಖರ್ ಸ್ಪೋರ್ಟ್ಸ್ ಪರಮೇಶ್ ಮಲ್ಲಿಕಾರ್ಜುನ ಸ್ವಾಮಿ ಆಯನೂರು ಮಂಜುನಾಥ್, ಎಸ್ ಪಿ ದಿನೇಶ್  ರೇಣುಕಾರಾಧ್ಯ, ಶ್ರೀಮತಿ ರೇಣುಕಾ ನಾಗರಾಜ್  ಶ್ರೀಮತಿ ಅನಿತಾ ರವಿಶಂಕರ್ ಅವರು ಸೇರಿದಂತೆ ಸಮಾಜದ ಅನೇಕ ಗಣ್ಯರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.