ಶಿವಮೊಗ್ಗದ ಖಾಸಗಿ ಶಾಲೆಗಳ ಡೊನೇಷನ್ ಹಾವಳಿ‌ ಸಾಮಾಜಿಕ ಹೋರಾಟಗಾರ ಶಶಿಕುಮಾರಗೌಡ.??

0
142
Oplus_0

ಸಾಮಾಜಿಕ ಹೋರಾಟಗಾರ ಶಶಿಕುಮಾರ ರವರು
ಉಪ ನಿರ್ದೇಶಕರು ಆಡಳಿತ ಶಾಲಾ ಶಿಕ್ಷಣ ಇಲಾಖೆ  ಶಿವಮೊಗ್ಗ ಜಿಲ್ಲೆ ಇವರಿಗೆ, ಶಿವಮೊಗ್ಗ ಜಿಲ್ಲೆಯ ಖಾಸಗಿ ಶಾಲೆಗಳಿಂದ ಡೊನೇಷನ್ ಹಾವಳಿ ಹೆಚ್ಚಾಗಿದ್ದು ಕಡಿವಾಣ ಹಾಕುವ ಬಗ್ಗೆ ಹಾಗೂ ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ದುರಸ್ತಿ ಮಾಡಿಸುವ ಬಗ್ಗೆ ಇಂದು ಮನವಿ ಮಾಡಿದರು

ಶಿವಮೊಗ್ಗ ಜಿಲ್ಲೆಯ ಶೇಕಡ 99 ರಷ್ಟು ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರು ಆತಂಕದಲ್ಲಿದ್ದಾರೆ ಕಾರಣ 1983 ಶಿಕ್ಷಣ ಕಾಯ್ದೆ ಹಾಗೂ ರೋಸ್ಟ‌ರ್ ನಿಯಮವನ್ನು ಅನುಸರಿಸದೇ ಎಲ್ಲ ಖಾಸಗಿ ಶಾಲೆಗಳು ಉಲ್ಲಂಘನೆ ಮಾಡಿ ಮನ ಬಂದಂತೆ ಶುಲ್ಕವನ್ನು ಹೆಚ್ಚಳ ಮಾಡುತ್ತಾ ವಸೂಲಿಗೆ ನಿಂತಿದ್ದಾರೆ ಎಂದು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೋಳಪಟ್ಟಿರುತ್ತದೆ ಈ ವಿಚಾರ ಸತ್ಯವು ಕೂಡ ಆಗಿರುತ್ತದೆ ಖಾಸಗಿ ಶಾಲೆಗಳು ತಮ್ಮ ತಮ್ಮ ಶಾಲೆಗಳ ನೋಟಿಸ್ ಬೋರ್ಡ್ ನಲ್ಲಿ ಡಿಸೆಂಬರ್ ತಿಂಗಳಿನಲ್ಲಿಯೇ ಕಡ್ಡಾಯವಾಗಿ ಯಾವ ಯಾವ ತರಗತಿಗೆ ಎಷ್ಟೆಷ್ಟು (ಶುಲ್ಕ) ಡೊನೇಷನ್ ನೀಡಬೇಕೆಂದು ನೋಟಿಸ್ ಬೋರ್ಡ್ ನಲ್ಲಿ ಪ್ರಕಟಿಸಬೇಕೆಂದು ಸರ್ಕಾರದ ಸ್ಪಷ್ಟ ಆದೇಶವಿದೆ ಆದರೆ ಯಾವುದೇ ಖಾಸಗಿ ಶಾಲೆಗಳ ನೋಟಿಸ್ ಬೋರ್ಡ್ ನಲ್ಲಿ ಶುಲ್ಕದ ವಿವರ ಪ್ರಕಟಿಸಿರುವುದಿಲ್ಲ ಆದ್ದರಿಂದ ಮಾನ್ಯರಾದ ತಾವುಗಳು ಡಿ.ಡಿ ಪಿ ಐ ರವರ ನೇತೃತ್ವದಲ್ಲಿ ರೆಗ್ಯುಲೇಟಿಂಗ್ ಪ್ರಾಧಿಕಾರ ರಚಿಸಿ ಸರ್ಕಾರದ ಆದೇಶವನ್ನು ಪಾಲನೆ ಮಾಡುವಂತೆ ಖಾಸಗಿ ಶಾಲೆಗಳಿಗೆ ಸೂಚಿಸಬೇಕು ಹಾಗೂ ತಪ್ಪಿತಸ್ಥ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಬೇಕೆಂದು ಸಾರ್ವಜನಿಕರ ಪರವಾಗಿ ಕೇಳಿಕೊಳ್ಳುತ್ತೇವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಇರುವ ಸರ್ಕಾರಿ ಶಾಲೆಗಳೆಲ್ಲವೂ ಕೂಡ ಸರಿಸುಮಾರು 50 ವರ್ಷಗಳ ಹಿಂದಿನ ಶಾಲೆಗಳಾಗಿದ್ದು ಈಗ ಶಾಲೆಗಳು ಪ್ರಾರಂಭವಾಗಿರುವುದರಿಂದ ಚಾವಣಿ ದುರಸ್ತಿ ಹಾಗೂ ಶೌಚಾಲಯಗಳ ದುರಸ್ತಿ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮಾನ್ಯರಾದ ತಮ್ಮಲ್ಲಿ ವಿನಯ ಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇವೆ ಎಂದು ಉಪ ನಿರ್ದೇಶಕರು ಆಡಳಿತ ಶಾಲಾ ಶಿಕ್ಷಣ ಇಲಾಖೆ ಮತ್ತು  ಡಿ.ಡಿ.ಪಿ.ಐ.ಅವರಿಗೆ ಮನವಿ ಸಲ್ಲಿಸಿದರು.