Wednesday, September 25, 2024
spot_img

ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಬಳಿ ವಾಹನಗಳ ನಿಲುಗಡೆ ಜಾಗಕ್ಕೆ ಶೀಟ್ ಷೆಲ್ಟರ್ ನಿರ್ಮಿಸಿ ರಸ್ತೆ ಬ್ಲಾಕ್ ಮಾಡಿರುವ ಬಗ್ಗೆ ಪರ ವಿರೋಧ ಪ್ರತಿಭಟನೆ..!?

ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಬಳಿ ವಾಹನಗಳ ನಿಲುಗಡೆ ಜಾಗಕ್ಕೆ ಶೀಟ್ ಷೆಲ್ಟರ್ ನಿರ್ಮಿಸಿ ರಸ್ತೆ ಬ್ಲಾಕ್ ಮಾಡಿರುವ ಬಗ್ಗೆ ಪರ ವಿರೋಧ ಪ್ರತಿಭಟನೆ

ಭಗತ್‌ಸಿಂಗ್‌ ಹೋರಾಟ ಸಮಿತಿ ಹಾಗೂ ವಿನೋಬನಗರ ನಾಗರಿಕರು ಮತ್ತು ಶಿವಮೊಗ್ಗ ನಾಗರಿಕ ಹಿತರಕ್ಷಣ ವೇದಿಕೆ

ನಗರಾಭಿವೃದ್ದ ಪ್ರಾಧಿಕಾರದ ಕಚೇರಿಯ ಬಳಿ ವಾಹನಗಳ ನಿಲುಗಡೆ ಜಾಗಕ್ಕೆ ಶೀಟ್ ಷೆಲ್ಟರ್ ನಿರ್ಮಿಸಿದ್ದು ಈ ಜಾಗ ಸೂಡಕ್ಕೆ ಸಂಬಂಧಿಸಿದಾಗಿದ್ದು
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಒಳ ಆವರಣದಲ್ಲಿರುವ ಸಬ್ ರಿಜಿಸ್ಟರ್ ಕಚೇರಿ, ಶಿವಮೊಗ್ಗ ಒನ್ ಕಚೇರಿ,  ಹಲವು ಪತ್ರ ಬರಹಗಾರರ ಮಳಿಗೆಗಳು ಹಾಗು ಹೋರಬಾಗಕ್ಕೆ ಸಂಬಂಧಿಸಿದಂತೆ 5 ವಾಣಿಜ್ಯ ಮಳಿಗೆಗಳಗೆ ಬಾಡಿಗೆಗೆ ನೀಡಾಲಾಗಿದ್ದು ರಾಜ್ಯ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಬಾಡಿಗೆ ನೀಡಿದ್ದಾರೆ ಇಲ್ಲಿ ಹಲವಾರು ಜಾತಿಯ ಸಮುದ್ರದ ಮೀನುಗಳ ವ್ಯಾಪಾರ ಮಾಡುತ್ತಾರೆ

ಇಡಿ  ಶಿವಮೊಗ್ಗಕ್ಕೆ ಪ್ರಸಿದ್ಧಿಯ ಮುಳಿಗೆಯಾಗಿದ್ದು ಮಹಿಳೆಯರು ಹಾಗೂ ವಯಸ್ಸಾದವರು ಮೀನಿನ ಮಳಿಗೆಯಲ್ಲಿ ಮೀನು ಕರಿದಿಸುತ್ತಾರೆ ಹೀಗೆ ಹಲವು ಸರ್ಕಾರಿ ಕಚೇರಿಗಳು ಈ ವ್ಯಾಪ್ತಿಯಲ್ಲಿ ಇರುವುದರಿಂದ ಸದಾ ರಸ್ತೆಗಳು ಟ್ರಾಫಿಕ್ನಿಂದ ಕೂಡಿರುತ್ತವೆ.
ಇಲ್ಲೇ ಕೂದಲಳತೆಯ ದೂರದಲ್ಲಿರುವ ಭಗತ್ ಸಿಂಗ್ ವೃತ್ತದಲ್ಲಿ   ವಿನೋಬನಗರ (ಪೊಲೀಸ್ ಚೌಕಿಯ) ಸಿಗ್ನಲ್ ಲೈಟ್ಸ್ ಮತ್ತು ಟ್ರಾಫಿಕ್ ಕಂಟ್ರೋಲ್‌ಗಾಗಿ ಸಿ.ಸಿ. ಕ್ಯಾಮರಾ ಅಳವಡಿಕೆ ನಂತರ ಹೆಲ್ಮೆಟ್ ಹಾಕದವರು, ಟೂ ವೀಲರಲ್ಲಿ ಮೂರು ಜನ ಕೂತಿರುವವರು, ಹೆಚ್ಚಿನ ಸಂಖ್ಯೆಯ ದ್ವಿಚಕ್ರ ವಾಹನಗಳು ಮತ್ತು ಕಾರ್‌ಗಳ ಚಾಲಕರು ತಮ್ಮ ವಾಹನಗಳನ್ನು ನಗರಾಭಿವೃದ್ಧಿ ಕಚೇರಿಯ ಕಾಂಪ್ಲೆಕ್ಸ್‌ನ ಪಾರ್ಕಿಂಗ್ ಜಾಗದ ಪಕ್ಕದಲ್ಲಿರುವ ಕಿರಿದಾದ ರಸ್ತೆಯಲ್ಲಿ ಓಡಾಡಲು ಪ್ರಾರಂಭಿಸಿದ್ದು, ಚಾಲನಾ ನಿಯಮಗಳನ್ನು ಉಲ್ಲಂಘಿಸಿ ಈ ಕಿರಿದಾದ ರಸ್ತೆಯಲ್ಲಿ ವಾಹನ ಚಾಲಕರು ಓಡಾಡುತ್ತಿದ್ದರಿಂದ ಹಲವಾರು ಅಪಘಾತಗಳು ಸಂಭವಿಸಿ ಪಾದಚಾರಿಗಳು ಹಾಗೂ ಕಚೇರಿಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗಿದ್ದರಿಂದ ಸೂಡ ಕಚೇರಿಯ ತಮ್ಮದೇ ಆಸ್ತಿಯಾದ ರಸ್ತೆಯ ಪಾರ್ಕಿಂಗ್ ಜಾಗದಲ್ಲಿ ಗ್ರಿಲ್ ಗೇಟ್ ಅಳವಡಿಸಿ ವಾಹನಗಳ ಓಡಾಟವನ್ನು ತಪ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.

ವಾಹನಗಳ ನಿಲುಗಡೆ ಜಾಗಕ್ಕೆ ಶೀಟ್ ಷಲ್ಟರ್ ಹಾಕಿರುವುದರಿಂದ ವಾಹನಗಳನ್ನು ಸುರಕ್ಷಿತವಾಗಿ ನಿಲುಗಡೆ ಮಾಡಲು ಮತ್ತು ಕಚೇರಿಗೆ ಬರುವ ಸಾರ್ವಜನಿಕರಿಗೆ ಮಳೆ ಗಾಳಿ, ಬಿಸಿಲಿನಿಂದ ರಕ್ಷಣೆ ಪಡೆಯಲು ಸಹ ಅನುಕೂಲಕರವಾಗಿದೆ.

ಆದರೆ ಕೆಲವು ತಮ್ಮ ವೈಯಕ್ತಿಕ ಉಪಯೋಗವನ್ನು ಮಾತ್ರ ಗಮನದಲ್ಲಿರಿಸಿಕೊಂಡು ಪ್ರಾಧಿಕಾರದಿಂದ ಅಳವಡಿಸಿರುವ ಶೀಟ್ ಶೆಲ್ಟರ್ ಮತ್ತು ಗ್ರಿಲ್ ಗೇಟ್ ಗಳನ್ನು ತೆಗೆಸಲು ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಇದನ್ನು ತೆಗೆದಲ್ಲಿ ಪುನಹ ವಾಹನ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ಅನಾನುಕೂಲ ವಾಗುವುದರಿಂದ ಕೇವಲ ಒಬ್ಬಿಬ್ಬರ ಅನುಕೂಲವನ್ನು ಪರಿಗಣಿಸದೆ ಸಾರ್ವಜನಿಕರ ಹಿತಾಸಕ್ತಿಗೆ ಆದ್ಯತೆ ನೀಡಬೇಕಾಗಿ ಯಾವುದೇ ಕಾರಣಕ್ಕೂ ಶೀಟ್ ಶೆಲ್ಟರ್ ಮತ್ತು ಗ್ರಿಲ್ ಗೇಟ್‌ಗಳನ್ನು ತೆಗೆಸಬಾರದಾಗಿ ಮತ್ತು ಶೀಟ್ ಶೆಲ್ಟರ್ ಮತ್ತು ಗ್ರಿಲ್ ಗೇಟ್‌ಗಳನ್ನು ತೆಗೆದಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದು ಭಗತ್‌ಸಿಂಗ್‌ ಹೋರಾಟ ಸಮಿತಿ ಹಾಗೂ ವಿನೋಬ ನಗರ ನಾಗರಿಕರು
ಶಿವಮೊಗ್ಗ  ಸೂಡ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಶಿವಮೊಗ್ಗ ನಾಗರೀಕ ಹಿತರಕ್ಷಣ ವೇದಿಕೆಗಳ ಒಕ್ಕೂಟದ ವಾದವೇನು ?

ನಾಗರಿಕ ಹಿತ ರಕ್ಷಣಾ ವೇದಿಕೆಗೆ ಸಾರ್ವಜನಿಕ ಹಿತಾಸಕ್ತಿ ಇದ್ದರೆ ಭಗತ್ ಸಿಂಗ್ ವೃತ್ತದಲ್ಲಿ ಸರ್ಕಾರಿ ಪಾರ್ಕ್ ಜಾಗವಿದ್ದು ಹಲವು ಖಾಸಗಿ ಮಳಿಗೆಗಳಿಗೆ ಅನುಕೂಲ ಮಾಡಲು 15 ಅಡಿ ಜಾಗದಲ್ಲಿ ಸರ್ಕಾರದಿಂದಲೇ ರಸ್ತೆ ನಿರ್ಮಿಸಿಕೊಡುವ ಸಂದರ್ಭದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪ್ರತಿಬಟಸಿದ್ದರು, ಸ್ಥಳೀಯ ವಾಣಿಜ್ಯ ಮಳಿಗೆಯ ಮಾಲೀಕರು ಮಹಾನಗರ ಪಾಲಿಕೆ ಸದಸ್ಯರ ನೆಂಟರು ಆಗಿದ್ದರಿಂದ ರಾಜಕೀಯ ಪ್ರಭಾವ ಬಳಸಿ ಪ್ರತಿಭಟನೆ ಮಾಡುತ್ತಿದ್ದವರಿಗೆ ಸ್ಥಳೀಯ ಪೊಲೀಸ್ ಠಾಣೆಯಿಂದ ಕರೆ ಮಾಡಿಸಿ ಬೆದರಿಕೆ ಒಡ್ಡಿ ಪ್ರತಿಭಟನೆಯನ್ನು ಹತ್ತಿಕ್ಕಲಾಯಿತು ಆಗ ಎಲ್ಲಿ ಹೋಗಿತ್ತು ನಾಗರಿಕ ಹಿತ ರಕ್ಷಣಾ ವೇದಿಕೆ ಎಂದು ಸ್ಥಳೀಯರ ದೂರಾಗಿದೆ.

ಸೂಡಾ ಕಚೇರಿ ಎದುರು ಶಿವಮೊಗ್ಗ ನಾಗರೀಕ ಹಿತರಕ್ಷಣ ವೇದಿಕೆಗಳ ಒಕ್ಕೂಟ ಪ್ರತಿಭಟನೆ ನಡೆಸಿದೆ.

ಒಕ್ಕೂಟಗಳ ಅಧ್ಯಕ್ಷ ವಸಂತ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಸ್ತೆಯನ್ನ ಬ್ಲಾಕ್ ಮಾಡಿಕೊಂಡಿರುವ ಅಧಿಕಾರಿಗಳಿಗೆ ದಿಕ್ಕಾರವನ್ನ‌ ಕೂಗಿ ಪ್ರತಿಭಟನೆ ನಡೆಸಲಾಗಿದೆ.

ಶಿವಮೊಗ್ಗ ನಗರ ಮಹಾನಗರ ಯೋಜನೆ 2023 ರ ನಕ್ಷೆಯ ಪ್ರಕಾರ ಈ ಜಾಗ ಸಾರ್ವಜನಿಕರಿಗೆ ಓಡಾಡುವ ಜಾಗ ಆಗಿದೆ. ಆದರೆ ಸೂಡ ಅಧಿಕಾರಿಗಳು ರಸ್ತೆಯನ್ನ ಕಬಳಿಸಿ ವಾಹನ ನಿಲುಗಡೆಯ ಶೆಡ್ ನ್ನ ನಿರ್ಮಿಸಿಕೊಂಡಿದ್ದಾರೆ ಎಂದು ದೂರಾಗಿದೆ.
.
2030 ರ ಮಹಾನಗರ ಯೋಜನೆ/ಸಿಡಿಪಿ ಪ್ರಕಾರ ರಸ್ತೆ ಬಿಟ್ಟ ಮೇಲೆ ಮತ್ತೆ ಶೆಡ್ ನಿರ್ಮಿಸುಬುದು ಕಾನೂನು ಬಾಹಿರ ಮತ್ತು ಅಪರಾಧಗಳು ಎಂದು ಒಕ್ಕೂಟ ಆರೋಪಿಸಿದೆ. ಒಂದು ವಾರದೊಳಗೆ ಶೆಡ್ ತೆರವುಗೊಳಿಸದಿದ್ದರೆ ಇನ್ಬಷ್ಟು ಕಾನೂನು ಹೋರಾಟಗಳು ಅನಿವಾರ್ಯ ಎಂದು ಒಕ್ಜೂಟ ಎಚ್ಚರಿಸಿದೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles