ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನಡೆದ ಬಹುಕೋಟಿ
ಹಗರಣಕ್ಕೆ ಹೋಯಿತಾ ಒಂದು ಜೀವ ..!?

ಬೆಂಗಳೂರು ಸಮಾಜ ಕಲ್ಯಾಣ ಇಲಾಖೆಯಲ್ಲಿ ,
ನಿಗಮ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ಅಧೀಕ್ಷಕರಾದ ಚಂದ್ರಶೇಖರನ್ ಪಿ. ರವರು ನಿನ್ನೆ ಮಧ್ಯಾಹ್ನ ಶಿವಮೊಗ್ಗದ ಕೆಂಚಪ್ಪ ಬಡಾವಣೆಯ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅವರು ಆತ್ಮಹತ್ಯೆಗೆ ಮೊದಲು ಡೆತ್ ನೋಟನ್ನು ಬರೆದಿಟ್ಟಿದ್ದು ನಿಗಮದ ಹಲವರ ಬಗ್ಗೆ ನನ್ನ ಆತ್ಮಹತ್ಯೆಗೆ ಇವರೇ ಕಾರಣ ಎಂದು ಹೆಸರುಗಳನ್ನು ಬರೆದಿಟ್ಟು ಮತ್ತು ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ಅವರ ಮೇಲೆಯೇ ಹೋರಿಸಲು ನಡೆದಿರುವ ಸಂಚಿನ ಬಗ್ಗೆ ಎಳೆ ಎಳೆಯಾಗಿ ಡೆತ್ ನೋಟ್ ಅಲ್ಲಿ ವಿವರಿಸಿದ್ದಾರೆ,

ಕೊನೆಯಲ್ಲಿ ನಾನು ಹೆಡಿಯಲ್ಲ ಆದರೂ ಅವಮಾನ ಸಹಿಸಲಾಗದೆ, ನನಗೆ ಬೇರೆ ದಾರಿ ಇಲ್ಲ ಕ್ಷಮಿಸಿ ಸಾಯುತ್ತಿದ್ದೇನೆ ಕ್ಷಮಿಸಿ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟು ಸಾವನ್ನಪ್ಪಿದ್ದಾರೆ, ಪ್ರಕರಣ ವಿನೋಬನಗರ ಸ್ಟೇಷನ್ನಲ್ಲಿ ದಾಖಲಾಗಿದ್ದು ಪ್ರಕರಣದ ತನಿಖೆ ಮುಂದುವರೆದು ಹೆಚ್ಚಿನ ಮಾಹಿತಿ ಬರಬೇಕಾಗಿದೆ..!?