ಕೃಷಿಹೊಂಡದಲ್ಲಿ ಕಾಲು ಜಾರಿ ಬಿದ್ದ ಅಭಯ್ ಆತನ ರಕ್ಷಸಲು ಹೊದ ಮಾಲ್ತೇಶ್ ನೀರನಲ್ಲಿ ಮುಳಗಿದ ಅವಘಡ ನಡೆದಿದೆ!?

ಶಿವಮೊಗ್ಗ: ತಾಲ್ಲೂಕಿನ ಆಯನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಹಳ್ಳಿ ಗ್ರಾಮದಲ್ಲಿ ಇಂದು ಅಶೋಕ ರವರಿಗೆ ಸೆರಿದ ಸುಮಾರು 12ಅಡಿ ಆಳವಿರುವ ಕೃಷಿಹೊಂಡದಲ್ಲಿ ಚನ್ನಹಳ್ಳಿ ಗ್ರಾಮದ ಮಹೇಶ್ ಅವರ ಮಗನಾದ ಅಭಯ್ 14 ವರುಷದ ಯುವಕ ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ಮೇಲಕ್ಕೆ ಬರುವಾಗ ಕಾಲು ಜಾರಿ ಪುನಃ ಕೃಷಿಹೊಂಡದ ನೀರಿಗೆ ಬಿದ್ದಿದ್ದಾನೆ ಮೊದಲೇ ಸುಸ್ತಾಗಿದ್ದ ಅಭಯ್ ನೀರಿನಿಂದ ಮೇಲಕ್ಕೆ ಬರಲಾಗದೆ ಜೋರಾಗಿ ಕಿರುಚಿಕೊಂಡಿದ್ದರಿಂದ ಅಲ್ಲೆ ಪಕ್ಕದ ಜಮೀನಿನಲ್ಲಿದ್ದ ನೀಲಣ್ಣ ನವರ ಮಗನಾದ ಮಾಲ್ತೇಶ್ 29ವರುಷ ಇವರು ಅಭಯ್ ಅವರನ್ನು ರಕ್ಷಣೆ ಮಾಡಲು ಕೃಷಿ ಹೊಂಡಕ್ಕೆ ಇಳಿದಿದ್ದಾರೆ ಅಷ್ಟರಲ್ಲೆ ಇವರ ಕಿರಾಚಟಾದ ಶಬ್ದ ಕೇಳಿ ಸ್ಥಳಕ್ಕೆ ಅಕ್ಕ ಪಕ್ಕದ ಜಮೀನಿನಲ್ಲಿದ್ದ ರೈತರು ಕೃಷಿ ಹೊಂಡದಲ್ಲಿ ಬಿದ್ದಿದ್ದ ಅಭಯ್ ಹಾಗೂ ಮಾಲ್ತೇಶನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತಿಸಿದರು ಅಷ್ಟರಲ್ಲೇ ಇಬ್ಬರು ಮತಪಟ್ಟಿರುವದಾಗಿ ಮೆಗ್ಗಾನ್ಆಸ್ಪತ್ರೆಯಡಾ.ಖಚಿತಪಡಿಸಿದ್ದಾರೆ

ಸ್ಥಳೀಯ ರೈತರ ಹೇಳಿಕೆ
ಅಭಯ್ ನೀರಿನಲ್ಲಿ ಮುಳುಗಿ ಸುಸ್ತಾಗಿ ಭಯಗೊಂಡಿರುವುದರಿಂದ ಮಾಲ್ತೇಶನನ್ನು ಬಿಗಿಯಾಗಿ ಅಪ್ಪಿ ಕೊಂಡಿರಬಹುದು ಎಂಬುದು ಸ್ಥಳೀಯರ ಮಾತಾಗಿದೆ ರಕ್ಷಿಸಲು ಹೋದ ಮಾಲ್ತೇಶ ನಿಗೆ ಈಜು ಬರುತ್ತಿದ್ದುಆದರೂ ಅವನು ಮುಳಗಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತಪಟ್ಟ ಯುವಕ ಅಭಯ್ 15 ವರ್ಷ
ಮಾಲ್ತೇಶ್ 29ವರ್ಷ ಮಾಲ್ತೇಶನಿಗೆ ಮದುವೆಯಾಗಿ ಈಗಾಗಲೇ ಎಂಟು ತಿಂಗಳಾಗಿದ್ದು ಅವರ ಹೆಂಡತಿ ತುಂಬು ಗರ್ಭಿಣಿಯಾಗಿದ್ದು ಸ್ಥಳೀಯರ ಅಕ್ರಂದನ ಮುಗಿಲು ಮುಟ್ಟಿತ್ತು.