Wednesday, September 25, 2024
spot_img

ನಿಮ್ಮ ಕೃಷಿ ಜಮೀನಿಗೆ ಹೋಗಲು ಅಕ್ಕಪಕ್ಕದವರು ದಾರಿ ಬಿಡುತ್ತಿಲ್ವಾ? ಬಂತು ಹೊಸ ರೂಲ್ಸ್

ಸಾಮಾನ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ನೀವು ಈ ಸಮಸ್ಯೆಯನ್ನು ಹೆಚ್ಚಾಗಿ ಕಾಣುತ್ತೀರಿ. ಒಂದು ಜಮೀನಿನಿಂದ (Property) ಇನ್ನೊಂದು ಜಮೀನಿಗೆ ಹೋಗಲು ಬೇಕಾಗಿರುವ ಸಣ್ಣ ಕಾಲು ದಾರಿಯನ್ನು ಕೂಡ ಕೊಡದೆ ಜಗಳ ಆಡುವ ಪರಿಸ್ಥಿತಿ ಎದುರಾಗುತ್ತದೆ. ಜಗಳ ಮಾಡಿಕೊಳ್ಳುತ್ತಾ ವೈಮನಸ್ಸು ಉಂಟಾಗಿರುವುದು ಸಾಮಾನ್ಯವಾಗಿದೆ.

ಹೌದು, ಒಂದು ಜಮೀನಿನ ಸುತ್ತ ನಾಲ್ಕೈದು ಬೇರೆ ಬೇರೆ ಮಾಲೀಕರ ಜಮೀನು ಇದ್ದು ತನ್ನ ಜಮೀನಿಗೆ ರೈತ (Agriculture Land) ಹೋಗಲು ಸಾಧ್ಯವಾಗದೆ ಇದ್ದಲ್ಲಿ ಆಗ ತನ್ನ ಜಮೀನಿಗೆ ಹೋಗಲು ದಾರಿಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕಾನೂನು ಪ್ರಕಾರವಾಗಿ ತಿಳಿದುಕೊಳ್ಳಬೇಕು

ಸಾಮಾನ್ಯವಾಗಿ ಮುಂಭಾಗದ ಜಮೀನು ಹೊಂದಿರುವ ರೈತ ಅಥವಾ ಖಾಸಗಿ ಮಾಲೀಕತ್ವ ಹೊಂದಿರುವವರು ಹಿಂದುಗಡೆ ಇರುವ ಜಮೀನಿಗೆ ಹೋಗಲು ರೈತರಿಗೆ ದಾರಿ ಕೊಡದೆ ಇರಬಹುದು.

ಈ ರೀತಿ ದಾರಿ ಇಲ್ಲದೆ ಇದ್ದಾಗ ರೈತ ತನ್ನ ಜಮೀನಿಗೆ ಹೋಗಿ ನಾಟಿ ಮಾಡುವುದು ಅಥವಾ ಬೆಳೆಯನ್ನು ಜಮೀನಿನಿಂದ ಮಾರುಕಟ್ಟೆಗೆ ಸಾಗಿಸುವುದು ಈ ಯಾವ ಕೆಲಸವು ಆಗುವುದಿಲ್ಲ. ಹೀಗಾಗಿ ದಾರಿ ಬಹಳ ಅಗತ್ಯವಾಗಿರುವ ವಿಷಯವಾಗಿದೆ.

ಎಸೆಸ್ಮೆಂಟ್ ಆಕ್ಟ್! (Easement act)

ನಿಮಗೆ ಯಾವಾಗ ನಿಮ್ಮ ಜಮೀನಿಗೆ ಹೋಗಲು ದಾರಿ ಸಿಗುವುದಿಲ್ಲವೋ ಆಗ ಎಸೆಸ್ಸ್ಮೆಂಟ್ ಆಕ್ಟ್ ಅಡಿಯಲ್ಲಿ ದಾರಿ ಕೊಡದೆ ಇರುವವರ ವಿರುದ್ಧ ದೂರು ಸಲ್ಲಿಸಬಹುದು. ಎಸೆಸ್ಮೆಂಟ್ ಆಕ್ಟ್ ನಲ್ಲಿ ಬೇರೆ ಬೇರೆ ಪ್ರಕಾರಗಳು ಇದ್ದು ಅದರ ಅನ್ವಯ ನೀವು ದಾರಿ ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ.

Easement of necessity: ಇಲ್ಲಿ ಒಂದು ಜಮೀನಿನ ಎದುರು ಇನ್ನೊಂದು ಜಮೀನು ಹೊಂದಿರುವ ಮಾಲೀಕ ಆ ಹಿಂದಿನ ಜಮೀನಿಗೆ ಹೋಗಲು ರೈತನಿಗೆ ದಾರಿ ಕೊಡಬೇಕು ಒಂದು ವೇಳೆ ಕೊಡದೆ ಇದ್ದರೆ ಈ ಕಾಯ್ದೆ ಅಡಿಯಲ್ಲಿ ನೀವು ಕೇಸ್ ದಾಖಲಿಸಬಹುದು.

* Easement of prescription: ಸುಮಾರು 15 ರಿಂದ 20 ವರ್ಷಗಳಿಂದ ಇದ್ದ ಕಾಲುದಾರಿಯನ್ನು ಏಕೈಕ ಮುಚ್ಚಿ ಅದರಲ್ಲಿ ನಾಟಿ ಮಾಡುವುದು ಅಥವಾ ಬೆಳೆ ಬೆಳೆಯುವುದು ಮಾಡಿದರೆ ಇಲ್ಲದಂತೆ ಆಗಬಹುದು. ಇಂತಹ ಸಂದರ್ಭದಲ್ಲಿ ಇಸ್ಸ್ಮೆಂಟ್ ಪ್ರಿಸ್ಕ್ರಿಪ್ಷನ್ ಅಡಿಯಲ್ಲಿ ಕೇಸ್ ದಾಖಲಿಸಬಹುದು

* Easement of custom: ಬಹಳ ವರ್ಷಗಳಿಂದ ಅಂದರೆ ತಲೆತಲಾಂತರದಿಂದ ಯಾವುದಾದರೂ ಜಮೀನಿಗೆ ಹೋಗಲು ಕಾಲು ದಾರಿ ಇದ್ದರೆ ಅದನ್ನ ತಮ್ಮ ಜಾಗ ಎಂದು ಏಕಾಏಕಿ ಯಾರು ತಮ್ಮ ವಶಕ್ಕೆ ತೆಗೆದುಕೊಳ್ಳುವಂತೆ ಇಲ್ಲ.

ಒಂದು ಜಮೀನಿಗೆ ಹೋಗುವ ದಾರಿ ಸರ್ಕಾರದಲ್ಲದೆ ಇದ್ದರೆ, ಖಾಸಗಿದಾರರದ್ದಾರೆ ಅದು ಬಹಳ ವರ್ಷಗಳಿಂದಲೂ ದಾರಿಯಾಗಿಯೇ ಉಪಯೋಗಿಸಲ್ಪಟ್ಟಿದ್ದರೆ ಅಂತಹ ದಾರಿಯನ್ನು ಯಾರು ಮುಚ್ಚುವಂತಿಲ್ಲ. ಒಂದು ವೇಳೆ ಆ ರೀತಿ ಮಾಡಿದರೆ ಕಸ್ಟಮ್ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಬಹುದು.

ಈ ರೀತಿಯಾಗಿ ನೀವು ಕಾನೂನನ್ನು ತಿಳಿದುಕೊಂಡರೆ ನಿಮ್ಮ ಜಮೀನಿಗೆ ಹೋಗಲು ದಾರಿ ಕೊಡದೆ ತೊಂದರೆ ಮಾಡುವವರ ವಿರುದ್ಧ ಕೇಸ್ ದಾಖಲಿಸಬಹುದು ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಇದ್ದಲ್ಲಿ ಕಾನೂನಾತ್ಮಕವಾಗಿ ನಿಮಗೆ ದಾರಿ ಸಿಗುವಂತೆ ಮಾಡಿಕೊಡುತ್ತಾರೆ.

 

 

Related Articles

Stay Connected

0FansLike
3,912FollowersFollow
0SubscribersSubscribe

Latest Articles