ತುಮಕೂರು: ಗುಂಡು ಹಾರಿಸಿ ದರೋಡೆಗೆ ಯತ್ನ: ಪಿಸ್ತೂಲ್ ಸ…

0
24

ತುಮಕೂರು: ಗುಂಡು ಹಾರಿಸಿ ದರೋಡೆಗೆ ಯತ್ನ: ಪಿಸ್ತೂಲ್ ಸಹಿತ ಇಬ್ಬರ ಬಂಧನ

 

Tumkurnews

 

ತುಮಕೂರು: ಪಿಸ್ತೂಲ್’ನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕುಣಿಗಲ್‌ ಪೊಲೀಸರು ಬಂಧಿಸಿದ್ದಾರೆ.

 

ಕಳೆದ ಮಾರ್ಚ್ 26ರಂದು ಜಿಲ್ಲೆಯ ಕುಣಿಗಲ್ ತಾಲ್ಲೂಕು ಉರ್ಕೆಹಳ್ಳಿ ಗ್ರಾಮದ ಪುಷ್ಪಲತಾ ಎಂಬುವರ ಮನೆಗೆ ಇಬ್ಬರು ಅಪರಿಚಿತರು ನೀರು ಕೇಳುವ ನೆಪದಲ್ಲಿ ಬಂದಿದ್ದರು. ನೀರು ಕುಡಿಯುವ ನೆಪದಲ್ಲಿ ಏಕಾಏಕಿ ಮನೆಯೊಳಗೆ ನುಗ್ಗಿದ್ದು, ಪುಷ್ಪಲತಾ ಅವರ ತಂದೆ ಟಿ.ರಂಗಣ್ಣ ಅವರ ಕಡೆಗೆ ಪಿಸ್ತೂಲ್’ನಿಂದ ಫೈರ್ ಮಾಡಿ ದರೋಡೆಗೆ ಯತ್ನಿಸಿದ್ದರು.

ಆಗ ಮನೆಯಲ್ಲಿದ್ದ ಪುಷ್ಪಲತಾ ಅವರ ತಂದೆ ಮತ್ತು ತಾಯಿ ಜೋರಾಗಿ ಕಿರುಚಿಕೊಂಡು ದರೋಡೆಕೋರರನ್ನು ಹಿಡಿಯಲು ಯತ್ನಿಸಿದ್ದರು. ಆದರೆ ದರೋಡೆಕೋರರು ತಪ್ಪಿಸಿಕೊಂಡು ಬೈಕ್’ನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಜಾರ್ಖಾಂಡ್ ರಾಜ್ಯದ ಲೋಹರ್ದ ಜಿಲ್ಲೆಯ ಮುಸ್ಲಿಂ ಧರ್ಮದ ಏಜಾಸ್ ಮಿರ್ದಹ(30) ಹಾಗೂ ಸಹಿಬುಲ್ ಅನ್ಸಾರಿ(30) ಎಂಬಿಬ್ಬ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ತನಿಖಾ ತಂಡವನ್ನು ಎಸ್‌.ಪಿ ಅಶೋಕ್‌ ಕೆ.ವಿ ಶ್ಲಾಘಿಸಿದ್ದಾರೆ.