ಪೆಟ್ರೋಲ್ ಬಂಕ್ ಕ್ಯಾಷಿಯರ್ ನಿಂದ 41 ಲಕ್ಷ ವಂಚನೆ ಆರೋಪಿ ಬಂಧನ.

0
18
      • ಮಳವಳ್ಳಿ :


  •  ಕಿರುಗಾವಲು ರಾಧಾಶ್ರೀ ಸರ್ವಿಸ್ ಸ್ಟೇಷನ್‌(ಪೆಟ್ರೋಲ್ ಬಂಕ್) ಮಾಲೀಕರಿಗೆ ಕ್ಯಾಷಿಯರ್ 41 ಲಕ್ಷ ರೂ.ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

 

ತಾಲೂಕಿನ ಅಕ್ಕಮ್ಮನಕೊಪ್ಪಲು ಗ್ರಾಮದ ಎನ್‌.ಶಿವಕುಮಾರ್ ಎಂಬಾತ ವಂಚನೆ ಪ್ರಕರಣದಲ್ಲಿ ಬಂಧಿತವಾಗಿರುವ ವ್ಯಕ್ತಿ. ಕಳೆದ 15 ವರ್ಷಗಳಿಂದ ಕಿರುಗಾವಲಿನಲ್ಲಿ ಪೆಟ್ರೋಲ್ ಬಂಕ್ ನಡೆಸುತ್ತಿರುವ ವೆಂಕಟಾಚಲಪತಿ ಅವರ ಬಳಿ ಏಳೆಂಟು ವರ್ಷಗಳಿಂದ ಆರೋಪಿ ಎನ್‌.ಶಿವಕುಮಾ‌ರ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದನು.

 

2023ರ ಸೆಪ್ಟೆಂಬರ್ ನಲ್ಲಿ ಲೆಕ್ಕಪತ್ರ ಪರಿಶೀಲನೆ ವೇಳೆ ಎನ್‌.ಶಿವಕುಮಾರ್ ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಮಾಲೀಕರು ಸಂಪೂರ್ಣವಾಗಿ ಲೆಕ್ಕ ಪರಿಶೋಧನೆ ನಡೆಸಿದ ಸಂದರ್ಭದಲ್ಲಿ ಬರೋಬರಿ 41 ಲಕ್ಷ ರೂ.ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

 

ಈ ಸಂಬಂಧ ಮಳವಳ್ಳಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಲೀಕ ಮಾಲೀಕ ವೆಂಕಟಾಚಲಪತಿ, ಯಾವುದೇ ಸಣ್ಣ ಅನುಮಾನ ಬಾರದ ರೀತಿಯಲ್ಲಿ ಆರೋಪಿ ಏಳೆಂಟು ವರ್ಷಗಳಿಂದ ವಂಚಿಸುತ್ತಿದ್ದ 2023ರ ಸೆಪ್ಟೆಂಬರ್ ನಲ್ಲಿ ನನ್ನ ಮಗ ಪೆಟ್ರೋಲ್ ಬಂಕ್ ಗೆ ಬಂದು ಲೆಕ್ಕ ಪರಿಶೀಲನೆ ನಡೆಸಿದ ವೇಳೆ

ನಮಗೆ ವಂಚನೆ ಮಾಡಿರುವುದು ಗೊತ್ತಾಗಿದೆ ಎಂದು ಹೇಳಿದರು.

 

ನಂತರ ಕಿರುಗಾವಲು ಪೊಲೀಸ್ ಠಾಣೆಗೆ ದೂರು ನೀಡಿದ್ದವು. ಮೂರು ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಳೆದೊಂದು ವಾರದ ಹಿಂದೆ ಪೊಲೀಸರ ಕಾರ್ಯಾಚರಣೆಯಿಂದ ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತನಗೆ ಆದ ವಂಚನೆ ಮತ್ತೊಬ್ಬರಿಗೆ ಆಗಬಾರದು ಎಂದು.  ಎಲ್ಲ ಪೆಟ್ರೋಲ್ ಬಂಕ್ ಮಾಲೀಕರು ಜಾಗೃತಿ ವಹಿಸಬೇಕು ಎಂದು ಹೇಳಿದರು.