Wednesday, September 25, 2024
spot_img

ನಾಲ್ವರು ವನ್ಯಜೀವಿ ಬೇಟೆಗಾರರ ಬಂಧನ: 7 ಕಾಡು ಹಂದಿಗಳ ರಕ್ಷಣೆ!

ಕೊರಟಗೆರೆ: ಸುರಪುರ ಅರಣ್ಯದಲ್ಲಿ ಅಕ್ರಮವಾಗಿ ಕಾಡಿನ ಹಂದಿಗಳನ್ನು ಬೇಟೆಯಾಡಿ ಯಾದಗಿರಿಯಿಂದ ಕೊರಟಗೆರೆ ಪಟ್ಟಣಕ್ಕೆ ತಂದು ಮಾರಾಟಕ್ಕೆ ಯತ್ನಿಸುವ ವೇಳೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ 4 ಮಂದಿ ಆರೋಪಿಗಳನ್ನು ಬಂಧಿಸಿ, 7 ಕಾಡುಹಂದಿಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.

ಖಚಿತ ಮಾಹಿತಿ ಆಧರಿಸಿ ರವಿ.ಸಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಕೊರಟಗೆರೆ ಪಟ್ಟಣದ ವಿನಾಯಕ ನಗರದ ಮಾರುತಿ ಎಂಬಾತನ ಅಂಗಡಿಯಲ್ಲಿ ಮಾರಾಟಕ್ಕೆ ಯತ್ನಿಸುವ ವೇಳೆ ಬೊಲೆರೋ ವಾಹನ ವಶಕ್ಕೆ ಪಡೆದಿದ್ದಾರೆ. ಕೊರಟಗೆರೆ ಅರಣ್ಯ ಇಲಾಖೆಯಲ್ಲಿ 5 ಮಂದಿ ಆರೋಪಿಗಳ ಮೇಲೆ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೂಲ್‌ಪೇಟೆಯ ಸುರೇಶ(28), ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಗಾಂಧಿನಗರದ ಮಂಜುನಾಥ(28), ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ರಂಗಮಪೇಟೆಯ ಪರಶುರಾಮ(22), ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ವಿನಾಯಕ ನಗರದ ಮಾರುತಿ(39) ಬಂಧಿತರು ಇನ್ನೋರ್ವ ದೂಲ್‌ಪೇಟೆಯ ಆರೋಪಿ ಭೀಮಾ(38)ನಿಗೆ ಶೋಧ ಕಾರ್ಯ ನಡೆದಿದೆ.

ತುಮಕೂರು ಉಪಅರಣ್ಯ ಸಂರಕ್ಷಣಾಧಿಕಾರಿ ಅನುಪಮ.ಹೆಚ್, ಮಧುಗಿರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ್ ಮಾರ್ಗದರ್ಶನದಲ್ಲಿ ಕೊರಟಗೆರೆ ವಲಯ ಅರಣ್ಯಾಧಿಕಾರಿ ರವಿ.ಸಿ, ಉಪ ವಲಯ ಅರಣ್ಯಾಧಿಕಾರಿ ದಿಲೀಪ್‌ಕುಮಾರ್,ಸಿಬಂದಿಗಳಾದ ವಿಜಯಕುಮಾರ್, ಮಂಜುನಾಥ, ಚಾಂದುಪಾಷ, ಕಾವ್ಯಶ್ರೀ, ನರಸರಾಜು, ಬಾಬು ಸೇರಿದಂತೆ ಇತರರು ದಾಳಿಯಲ್ಲಿ ಭಾಗವಹಿಸಿದ್ದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles