ತುಮಕೂರು: ನರೇಗಾ ಕೂಲಿ ಮಂಜೂರು ಮಾಡಲು ಲಂಚ:…

0
3

ಆರೋಪಿ ಅಧಿಕಾರಿಗೆ ಲಂಚ ಕೊಡಲು ಇಷ್ಟವಿಲ್ಲದ ರೈತ ಶ್ರೀ ರಂಗಯ್ಯ @ ರಂಗಪ್ಪ ರವರು ತುಮಕೂರು ಎ.ಸಿ.ಬಿ ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಘುಕುಮಾರ್, ಡಿ.ಎಸ್.ಪಿ ತುಮಕೂರು ಎ.ಸಿ.ಬಿ ಪೊಲೀಸ್‌ ಠಾಣೆಯಲ್ಲಿ ಮೊ.ನಂ:08/2019 ಕಲಂ-7(ಎ) ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ-1988 (ತಿದ್ದುಪಡಿ-2018) ರ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದು, ಶ್ರೀ ಹಾಲಪ್ಪ, ಪೊಲೀಸ್‌ ಇನ್ಸ್‌ಪೆಕ್ಟರ್ ರವರು ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪ್ರವೀಣ್‌ ಕುಮಾ‌ರ್, ಪೊಲೀಸ್ ಇನ್ಸ್‌ಪೆಕ್ಟರ್, ಎ.ಸಿ.ಬಿ, ತುಮಕೂರು ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ತುಮಕೂರು: ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದ ಮಧುಗಿರಿ ತಾಲ್ಲೂಕು ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿಯ ರೇಷ್ಮೆ ಪ್ರದರ್ಶಕ ಎಂ.ವಿ.ರಾಮಕೃಷ್ಣಯ್ಯಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.

 

ಪ್ರಕರಣದ ವಿವರ: ಹನಿ ನೀರಾವರಿ ಸಬ್ಸಿಡಿ ಮಂಜೂರು ಮಾಡಲು ಲಂಜ ಸ್ವೀಕರಿಸಿದ್ದ ಮಧುಗಿರಿ ತಾಲ್ಲೂಕು ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿ ರೇಷ್ಮೆ ಪ್ರದರ್ಶಕ ಎಂ.ವಿ.ರಾಮಕೃಷ್ಣಯ್ಯಗೆ ತುಮಕೂರು ಜಿಲ್ಲಾ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಅವರು ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತೊಂಭತ್ತಾರು ಸಾವಿರ ರೂ. ದಂಡವನ್ನು ವಿಧಿಸಿದ್ದು, ದಂಡ ಕಟ್ಟ- ವಿಫಲವಾದಲ್ಲಿ ಹೆಚ್ಚುವರಿ ಆರು ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ನೀರಿ ಆದೇಶಿಸಿದ್ದಾರೆ.

 

ಐದು ವರ್ಷಗಳ ಹಿಂದಿನ ಪ್ರಕರಣ: ಶಿಕ್ಷೆಗೆ ಗುರಿಯಾಗಿರುವ

 

ಎಂ.ವಿ.ರಾಮಕೃಷ್ಣಯ್ಯ ಬಿನ್ ಲೇಟ್ ವೀರಣ್ಣ, 54 ವರ್ಷ, ರೇಷ್ಮೆ ಪ್ರದರ್ಶಕರು, ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿ, ತಾಂತ್ರಿಕ ಸೇವಾ ಕೇಂದ್ರ, ರೇಷ್ಮೆ ಇಲಾಖೆ, ಮಧುಗಿರಿ ತಾಲ್ಲೂಕು ಅವರು ಮಧುಗಿರಿ ತಾಲ್ಲೂಕಿನ ಹೊಸಕೆರೆ ಗ್ರಾಮದ ರೈತ ಶ್ರೀರಂಗಯ್ಯ @ ಶ್ರೀರಂಗಪ್ಪ ರವ ಹೊಸಕೆರೆ ಗ್ರಾಮದ ಸರ್ವೆ ನಂಬರ್:155/1 ರಲ್ಲಿ ನರೇಗಾ ಯೋಜನೆಯಡಿಯಲ್ಲಿ ರೇಷ್ಮೆ ನಾಟಿ ಮತ್ತು ಹನಿ ನೀರಾವರಿ ಅಳವಡಿಸಿಕೊಳ್ಳಲು ಮತ್ತು ಕೂಲಿ ಮೊತ್ತ ಮಂಜೂರು ಮಾಡಿಕೊಡಲು 15,000 ರೂ. ಲಂಚವನ್ನು ಪಡೆದುಕೊಂಡು, ನಂತರ ಹನಿ ನೀರಾವರಿ ಮಂಜೂರು ಮಾಡಿಕೊಡಲು 20.000 ರೂ. ಮತ್ತು ಸಾಮಗ್ರಿ ವೆಚ್ಚವನ್ನು ಮಂಜೂರು ಮಾಡಿಕೊಡಲು 13,000 ರೂ. ಸೇರಿ ಒಟ್ಟು 33,000 ರೂಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದಿನಾಂಕ:18/03/2019 ರಂದು ರೈತ ಶ್ರೀರಂಗಯ್ಯ @ ಶ್ರೀರಂಗಪ್ಪ ರವರಿಂದ 33,000 ರೂ.ಗಳ ಲಂಚದ ಹಣ

 

ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರಿಂದ ಟ್ರ್ಯಾಪ್ ಗೆ ಆರೋಪಿ ಅಧಿಕಾರಿಗೆ ಲಂಚ ಕೊಡಲು ಇಷ್ಟವಿಲ್ಲದ ರೈತ ಶ್ರೀ ರಂಗಯ್ಯ @ ರಂಗಪ್ಪ ರವರು ತುಮಕೂರು ಎ.ಸಿ.ಬಿ ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಘುಕುಮಾರ್, ಡಿ.ಎಸ್.ಪಿ ತುಮಕೂರು ಎ.ಸಿ.ಬಿ ಪೊಲೀಸ್‌ ಠಾಣೆಯಲ್ಲಿ ಮೊ.ನಂ:08/2019 ಕಲಂ-7(ಎ) ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ-1988 (ತಿದ್ದುಪಡಿ-2018) ರ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದು, ಶ್ರೀ ಹಾಲಪ್ಪ, ಪೊಲೀಸ್‌ ಇನ್ಸ್‌ಪೆಕ್ಟರ್ ರವರು ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪ್ರವೀಣ್‌ ಕುಮಾ‌ರ್, ಪೊಲೀಸ್ ಇನ್ಸ್‌ಪೆಕ್ಟರ್, ಎ.ಸಿ.ಬಿ, ತುಮಕೂರು ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

 

ಈ ಪ್ರಕರಣವು ಗೌರವಾನ್ವಿತ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ, ತುಮಕೂರು ಇಲ್ಲಿನ ವಿಶೇಷ ಪ್ರಕರಣ ಸಂಖ್ಯೆ:346/2020 ರಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಗೌರವಾನ್ವಿತ ತುಮಕೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಅವರು ದಿನಾಂಕ:04/04/2024 ರಂದು ಪ್ರಕರಣದ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಕ ಬಸವರಾಜು.ಎನ್ ವಾದ ಮಂಡಿಸಿದ್ದರು.