Wednesday, September 25, 2024
spot_img

ಪಕ್ಷಾತೀತವಾಗಿ ಗಂಧದ ಮನೆ ನರಸಿಂಹ ಹುಟ್ಟುಹಬ್ಬ ಆಚರಣೆ

ಪಕ್ಷಾತೀತವಾಗಿ ಜೆಡಿಎಸ್ ಯುವನಾಯಕ ಗಂಧದಮನೆ ನರಸಿಂಹ ಹುಟ್ಟುಹಬ್ಬ ಆಚರಣೆ

ಶಿವಮೊಗ್ಗ ಜಿಲ್ಲಾ ಜಾತ್ಯತೀತ ಜನತಾದಳದ ಜಿಲ್ಲಾ ವಕ್ತಾರ, ಯುವ ಮುಖಂಡ ನರಸಿಂಹ ಗಂಧದಮನೆ ಅವರ ಹುಟ್ಟುಹಬ್ಬವನ್ನು ಮಂಗಳವಾರ ‘ಗಂಧದ ಗುಡಿ’ ಬಳಗದಿಂದ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

Oplus_131072

ಗಂಧದಮನೆ ನರಸಿಂಹ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ಮುಖಂಡರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮಂಗಳವಾರ ಸಂಜೆ ಇಲ್ಲಿನ ಸೂರ್ಯ ಕಂಫರ್ಟ್ನ ಸಭಾಭವನದಲ್ಲಿ ‘ಗಂಧದ ಗುಡಿ’ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಂಧದಮನೆ ನರಸಿಂಹ ಅವರ ಅಭಿಮಾನಿಗಳು ಅವರಿಗೆ ಹಾರ ಹಾಕಿ, ಪೇಟ ತೊಡಿಸಿ, ಬೃಹತ್ ಗಾತ್ರದ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್,  ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮಾಜಿ ಮೇಯರ್ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಹೆಚ್.ಫಾಲಾಕ್ಷಿ, ಪ್ರಮುಖರಾದ ಡಾ. ಧನಂಜಯ ಸರ್ಜಿ, ದೀಪಕ್ ಸಿಂಗ್, ವಿನ್ಸೆಂಟ್ ರೋಡ್ರಿಗಸ್, ಹಿರಣ್ಣಯ್ಯ, ಸಮಾಜಸೇವಕರಾದ ಸುಧಾಕರ್, ಗೋಪಿ ಮೊದಲಿಯಾರ್, ಸಾಧುಚೆಟ್ಟಿ ಸಮಾಜದ ಮುಖಂಡರಾದ ಕಿರಣ್, ಶಿವಾನಂದ್ ಸೇರಿದಂತೆ ಸಮಾಜದ ಹಲವು ಯುವಕರು ಭಾಗವಹಿಸಿದ್ದರು.
ನರಸಿಂಹ ಗಂಧದ ಮನೆ ಅವರು, ಶಿವಮೊಗ್ಗದ ಪ್ರತಿಷ್ಠಿತ ದುರ್ಗಿಗುಡಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇದೀಗ ಹಾಲಿ ನಿರ್ದೇಶಕರಾಗಿದ್ದಾರೆ.
ವಿವಿಧ ಸಂಘ-ಸAಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಇವರು, ಶಿವಮೊಗ್ಗದ ಪ್ರಭಾವೀ ಯುವನಾಯಕರಲ್ಲಿ ಓರ್ವರಾಗಿದ್ದಾರೆ. ಶಿವಮೊಗ್ಗದ ಪ್ರತಿಷ್ಠಿತ ದುರ್ಗಿಗುಡಿ ಕನ್ನಡ ಸಂಘದ ಅಧ್ಯಕ್ಷರಾದ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶಿವಮೊಗ್ಗ ಮೂಲದ ನಟರಾದ ಸುದೀಪ್‌ರವರನ್ನು ಕರೆತಂದು ಸನ್ಮಾನಿಸಿದ್ದು ಇವರ ಹೆಗ್ಗಳಿಕೆಯಾಗಿದೆ.

ಪ್ರಜಾ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷರು, ಜೆಡಿಎಸ್ ಜಿಲ್ಲಾ ವಕ್ತಾರರಾಗಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಸಂಕಷ್ಟ ಎದುರಾದ ಸಂದರ್ಭಲ್ಲಿ ಹಲವು ನಾಯಕರು ಪಕ್ಷ ತೊರೆದು ಅನ್ಯ ಪಕ್ಷಗಳ ಸೇರ್ಪಡೆಯಾದರೂ ಸಹ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರು, ಮುಖಂಡರು ಆದ ನರಸಿಂಹ ಗಂಧದಮನೆ ಪಕ್ಷ ತೊರೆಯದೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಪಕ್ಷದ ಸಂಘಟನೆಗೆ ಬೆನ್ನೆಲುಬಾಗಿ ನಿಂತಿರುವ ನರಸಿಂಹ ಗಂಧದಮನೆ ಅವರು ಹೊಸ ಹೊಸ ಯುವಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಅವಿರತ ಶ್ರಮಿಸುತ್ತಿದ್ದಾರೆ.
ಜಿಲ್ಲಾ ವಕ್ತಾರರಾಗಿ ಜೆಡಿಎಸ್ ಪಕ್ಷವನ್ನು ಜಿಲ್ಲೆಯಲ್ಲಿ ಬಲಿಷ್ಠವಾಗಿ ಕಟ್ಟುವ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕೈ ಬಲಪಡಿಸಲು ಶ್ರಮಿಸುತ್ತಿರುವ ಇವರು, ಪ್ರಸ್ತುತ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಟರ ಅಣತಿಯಂತೆ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಗೆಲುವಿಗೆ ತಮ್ಮದೇ ಟೀಂನೊAದಿಗೆ ಶ್ರಮಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ವಿವಿಧ ಪಕ್ಷಗಳ ಪ್ರಮುಖರು, ಸ್ನೇಹಿತರು, ಅಭಿಮಾನಿಗಳು ನರಸಿಂಹ ಗಂಧದಮನೆ ಅವರನ್ನು ಅಭಿನಂದಿಸಿ, ಶುಭಾಶಯ ಕೋರಿದ್ದಾರೆ. ‘ಸಾತ್ವಿಕ ನುಡಿ’ ಪತ್ರಿಕಾ ಬಳಗವೂ ಹೃತ್ಪೂರ್ವಕವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದೆ..

Related Articles

Stay Connected

0FansLike
3,912FollowersFollow
0SubscribersSubscribe

Latest Articles