ಉಪವಾಸ ಮುಗಿಸಿ ನದಿಗೆ ಸ್ನಾನಕ್ಕೆ ತೆರಳಿದ ಮೂವರು ಬಾಲಕರು ನೀರು ಪಾಲು

0
19

 

ಶಿವಮೊಗ್ಗ:

ರಂಜಾನ್‌ ಉಪವಾಸ ಮುಗಿಸಿ ಈಜಲು ಹೋಗಿದ್ದ ಮೂವರು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ತುಂಗಾ ನದಿಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿದ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ.

ಮೂವರು ಬಾಲಕರ ಶವ ಪತ್ತೆಯಾಗಿದೆ. ಸತತವಾಗಿ ಒಂದು ಘಂಟೆಯಿಂದ ತುಂಗಾ ನದಿಯ ತೀರದಲ್ಲಿ ಅಗ್ನಿ ಶಾಮಕ ದಳ ಮತ್ತು ಪೊಲೀಸರು ಹುಡುಕಾಟ ನಡೆಸಿ ಮೃತದೇಹ ಹೊರ ತೆಗೆದಿದ್ದಾರೆ.

 

ರಫನ್, ಇಯನ್, ಸಮ್ಮರ್ ಎಂಬ ಬಾಲಕರು ಈಜಲು ಹೋದಾಗ ಈ ಘಟನೆ ಜರುಗಿದೆ.

 

ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹುಡುಗರು ರಂಜಾನ್‌ ಉಪವಾಸ ಮುಗಿಸಿ ಸ್ನಾನಕ್ಕೆ ಈಜಲು ಹೋಗಿ ನಾಪತ್ತೆಯಾಗಿದ್ದರು.