0
49

 

 

ನಟ ಯಶ್ ಅಭಿನಯದ ‘ಕಿರಾತಕ’ ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ನಟ ಪ್ರಕಾಶ್ ಹೆಗ್ಗೋಡು ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

 

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಇಂದು ಸಾಗರದ ಪುರಪ್ರೇಮನೆಯ (ಕಲ್ಲುಕೊಪ್ಪ) ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಂತ್ಯಕ್ರಿಯೆಯು ನಾಳೆ ಸ್ವಗ್ರಾಮ ಕಲ್ಲುಕೊಪ್ಪದಲ್ಲಿ ನೆರವೇರಲಿದೆ. ಮೃತರು ಇಬ್ಬರು ಪುತ್ರಿಯರು, ಓರ್ವ ಪುತ್ರ & ಪತ್ನಿಯನ್ನು ಅಗಲಿದ್ದಾರೆ.