ಶಿವಮೊಗ್ಗ ಐಸಿಸ್ ಮ್ಯಾಡ್ಯುಲ್ ಗ್ಯಾಂಗ್‌!?

0
137

ಬೆಂಗಳೂರು ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಸಂಚಿನಲ್ಲಿ ಹಿಂದೂ ಸಮುದಾಯದ ವ್ಯಕ್ತಿ ಗಳ ಹೆಸರಿಟ್ಟುಕೊಂಡು ‘ಶಿವಮೊಗ್ಗ ಐಸಿಸ್ ಮ್ಯಾಡ್ಯುಲ್ ಗ್ಯಾಂಗ್‌’ ಸಂಚು ರೂಪಿಸಿತ್ತು ಎಂಬ ಸಂಗತಿ ರಾಷ್ಟ್ರೀಯ ತನಿಖಾ ದಳದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ವಿಧ್ವಂಸಕ ಕೃತ್ಯದ ಪ್ರಮುಖ ಸಂಚುಕೋರನಾಗಿ ರುವ ಶಂಕಿತ ಐಸಿಸ್ ಉಗ್ರ ಶಿವಮೊಗ್ಗಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಬ್ದುಲ್ ಮತೀನ್ ತಾಹಾ, ಹೊರರಾಜ್ಯಗಳಲ್ಲಿ ತನ್ನ ಹೆಸರನ್ನು ‘ವಿಪ್ಪೇಶ್ ಮತ್ತು ಸುಮಿತ್’ ಎಂದು ಹೇಳಿಕೊಂಡು ಆಶ್ರಯ ಪಡೆದಿದ್ದ. ಈ ಹೆಸರಿನಲ್ಲಿ ನಕಲಿ ಆಧಾರ್‌ಕಾರ್ಡ್ ಸಹ ಪಡೆದು ಸಿಮ್ ಖರೀದಿಸಿ ಆತ ವ್ಯವಹರಿಸಿದ್ದಾನೆ ಎನ್ನಲಾಗಿದೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ಆರೋಪಿಗಳಾದ ಅಬ್ದುಲ್ ಮತೀನ್ ಅಹಮದ್ ತಾಹ ಹಾಗೂ ಆತನ ಸಹಚರ ಮುಸಾವಿರ್ ಹುಸ್ಸೇನ್ ಅವರ ಫೋಟೋವನ್ನು ಎನ್‌ಐಎ ಬಿಡುಗಡೆ ಮಾಡಿದೆ. ಆರೋಪಿಗಳ ಸುಳಿವು ನೀಡುವವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ

ಹೀಗಾಗಿ ಕೆಫೆ ವಿಧ್ವಂಸಕ ಕೃತ್ಯದಲ್ಲಿ ಶಿವಮೊಗ್ಗ ಐಸಿಸ್ ತಂಡ ಪಾತ್ರವಿರುವುದುಖಚಿತವಾದ ಕೂಡಲೇ ಎನ್‌ಐಎ ಅಧಿಕಾರಿಗಳು, ಶಿವಮೊಗ್ಗ ತಂಡದ ಕಮಾಂ ಡರ್‌ಗಳಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್‌ಹುಸೇನ್ ಶಾಜಿಬ್ ಸಂಪರ್ಕ ಜಾಲ ವನ್ನು ಜಾಲಾಡಿದ್ದರು. ಆಗ ಮೊಬೈಲ್ ಕರೆಗಳ ಪರಿಶೀಲನೆಯಲ್ಲಿ (ಸಿಡಿಆರ್) ವಿಶ್ವೇಶ್ ಹೆಸರು ಕೇಳಿಬಂದಿದೆ. ಈ ಸುಳಿವು ಬೆನ್ನತ್ತಿದಾಗ ತನಿಖಾ ತಂಡಕ್ಕೆ ಮತೀನ್ ಕುರಿತು ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾಗ ತಮ್ಮ ಮೇಲೆ ತಾವು ನೆಲೆಸಿದ್ದ ಪ್ರದೇಶ ಜನರಲ್ಲಿ ಅನುಮಾನ ಮೂಡದಂತೆ ಎಚ್ಚರಿಕೆ ವಹಿಸಿದ್ದ ಶಿವಮೊಗ್ಗ ಐಸಿಸ್ ತಂಡವು, ತನ್ನನ್ನು ಹಿಂದೂ ಎಂದುಬಿಂಬಿಸಿಕೊಳ್ಳುತ್ತಿತ್ತು. ಇದಕ್ಕಾಗಿ ಹಿಂದೂ ವ್ಯಕ್ತಿಗಳ ಹೆಸರನ್ನೇಶಂಕಿತ ಉಗ್ರರು ಇಟ್ಟುಕೊಂಡಿದ್ದರು. ಅಂತೆಯೇ ಕೆಫೆ ಪ್ರಕರಣದ ಸಂಚುಕೋರ ಮತೀನ್ ವಿಶ್ವೇಶ್ ಮತ್ತು ಸುಮಿತ್ ಆಗಿದ್ದರೆ, ಮಂಗಳೂರು ಕುಕ್ಕರ್‌ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಉಗ್ರ ಮಹಮ್ಮದ್ ಶಾಕೀರ್ ಪ್ರೇಮಚಂದ್ರ ಹುಟ್ಟಗಿ ಆಗಿದ್ದನು. ಅಲ್ಲದೆ ಮಂಗ ಳೂರು ಸ್ಫೋಟಕ್ಕೂ ಮುನ್ನ ತಮಿಳುನಾಡಿನ ಕೊಯ ಮತ್ತೂರಿನಲ್ಲಿ ಕೆಲ ದಿನಗಳು ಅರುಣ್ ಗೌಳಿ ಹೆಸರಿನಲ್ಲಿ ಶಾಕೀರ್‌ನೆಲೆಸಿದ್ದ ಎಂದು ಮೂಲಗಳು ವಿವರಿಸಿವೆ.

ಮುಜಾಮಿಲ್ 7 ದಿನ ಕಸ್ಟಡಿಗೆ

ಕೆಫೆ ಸ್ಫೋಟ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಸಲುವಾಗಿ ಗುರುವಾರ ಬಂಧಿತನಾಗಿದ್ದ ಶಂಕಿತ ಉಗ್ರ ಮುಜಾಮಿಲ್ ಷರೀಫ್‌ನನ್ನು ಎನ್‌ಐಎ ಏಳು ದಿನ ಕಸ್ಟಡಿಗೆ ಪಡೆದಿದೆ. ನಗರದ ಎನ್‌ಐಎ ಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಎನ್ ವಿಶೇಷ ಐಎ ತಂಡವು, ಆರೋಪಿಯನ್ನು ಹೆಚ್ಚಿನ ತನಿಖೆ ಸಲುವಾಗಿ ವಶಕ್ಕೆ ನೀಡುವಂತೆ ಕೋರಿತು. ಈ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಿದೆ.

ಚಿಕನ್ ಅಂಗಡಿಯಲ್ಲಿ ವ್ಯವಸ್ಥಾಪಕನಾಗಿದ್ದ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕಳಸದ ಮುಜಾಮಿಲ್, ಈ ಮೊದಲು ಬೆಂಗಳೂರಿನ ಬಸವೇಶ್ವರ ನಗರದ ಹಾವನೂರು ಸರ್ಕಲ್ ಬಳಿ ಚಿಕನ್ ಮಾರಾಟ ಮಳಿಗೆಯಲ್ಲಿ ವ್ಯವ ಸ್ಥಾಪಕನಾಗಿದ್ದ. ಬಸವೇಶ್ವರ ನಗರ ಸಮೀಪದಲ್ಲೇ ಆತ ನೆಲೆಸಿದ್ದ. ಕೆಲ ತಿಂಗಳ ಹಿಂದಷ್ಟೇ ಕೆಲಸ ತೊರೆದು ತನ್ನೂರಿಗೆ ಮುಜಾಮಿಲ್ ಮರಳಿದ್ದ ಎಂದು ತಿಳಿದುಬಂದಿದೆ.