ಡಿಜೆ ಮತ್ತು ರೈನ್ ವಾಟರ್ ನ ಹೋಳಿ ಹಬ್ಬದ ಸಡಗರದಲ್ಲಿ ಶಿವಮೊಗ್ಗ!

0
291

ಡಿಜೆ ಮತ್ತು ರೈನ್ ವಾಟರ್ ನ ಹೋಳಿ ಹಬ್ಬದ ಸಡಗರದಲ್ಲಿ ಶಿವಮೊಗ್ಗ

ಮಲೆನಾಡಿನ ಶಿವಮೊಗ್ಗದಲ್ಲಿ ಲೋಕಸಭೆ ಚುನಾವಣೆ ಮಾದರಿ ನೀತಿಸಂಹಿತೆ, ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮಧ್ಯೆಯೂ ವಿಶೇಷವಾಗಿ ಶಿವಮೊಗ್ಗ ನಗರದಲ್ಲಿ ದುರ್ಗಮ್ಮ ದೇವಿಯ ತೇರಿನ ನಂತರ ಮಂಗಳವಾರ ಇಂದು ಬೆಳಗ್ಗೆಯಿಂದಲೇ   ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಯಿತು.
ಇಲ್ಲಿನ ವಿವಿಧ ಬಡಾವಣೆಗಳು, ಪ್ರಮುಖ ವೃತ್ತಗಳಲ್ಲಿ ಹೋಳಿ ಹುಣ್ಣಿಮೆ ಪ್ರಯುಕ್ತ, ಮಂಗಳವಾರ ರಾತ್ರಿ ಕಾಮಣ್ಣನ ಮೂರ್ತಿ ದಹಿಸಲಾಯಿತು.

ಮಂಗಳವಾರ ಮುಂಜಾನೆಯಿಂದಲೇ ಬಣ್ಣದಾಟಕ್ಕೆ ‘ಮಲೆನಾಡು’ ತೆರೆದುಕೊಂಡಿತು. ಮಕ್ಕಳು, ಯುವಕ-ಯುವತಿಯರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರೂ ಉತ್ಸಾಹದಿಂದ ಬಣ್ಣದೋಕುಳಿಯಲ್ಲಿ ಮಿಂದೆದ್ದರು.

ಸೀನಪ್ಪ ಶೆಟ್ಟಿ ವೃತ್ತದ(ಗೋಪಿ ಸರ್ಕಲ್) ನಲ್ಲಿ ಬಾನೆತ್ತರಕ್ಕೆ ಹಾರಿದ ಬಣ್ಣಗಳು, ಮತ್ತೊಂದೆಡೆ ಸಂಗೀತದ ಝಲಕ್‌, ಇನ್ನೊಂದೆಡೆ ಕುಣಿದು ಕುಪ್ಪಳಿಸಿದ ಯುವ ಮನಸ್ಸುಗಳು; ಹೀಗೆ… ಹತ್ತಾರು ಸಂಭ್ರಮದ ಕ್ಷಣಗಳಿಗೆ ಶಿವಮೊಗ್ಗ ಇ ದಿನ ಸಾಕ್ಷಿಯಾಯಿತು.

ಎಸ್ಸೆಸ್ಸೆಲ್ಸಿ  ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಇಂದು ರಜೆ ಇರುವದರಿಂದ ಕೆಲವು ವಿದ್ಯಾರ್ಥಿಗಳು ಹೋಳಿ ಆಚರಿಸುವತ್ತಾ ಮುಖಮಾಡಿದರು. ಉಳಿದ ಮಕ್ಕಳು ಕೈಯಲ್ಲಿ ಪಿಚಕಾರಿ ಹಿಡಿದುಕೊಂಡು, ಬಣ್ಣದಾಟ ಆರಂಭಿಸಿದರು. ಹಲಗೆ ವಾದನ, ತಮಟೆ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ, ಬಣ್ಣ ಎರಚುತ್ತ ಸಂಭ್ರಮಿಸಿದರು. ಇನ್ನು ಯುವಕ-ಯುವತಿಯರು ಗಲ್ಲಿ-ಗಲ್ಲಿಗಳಲ್ಲಿ ವೇಗವಾಗಿ ಬೈಕ್‌ ಓಡಿಸುತ್ತ, ಕರ್ಕಶವಾಗಿ ಬೈಕ್ ಹಾರನ್ ಮಾಡುತ್ತಾ ನಗರಪೂರ್ತಿ ಸುತ್ತಾಡಿದರು.

ಗೋಪಿ ಸರ್ಕಲ್ ನಲ್ಲಿ ಹಿಂದೂ ಮಮಹಾಸಭಾದ ನಗರ  ಹಿಂದು ಅಲಂಕಾರ ಸಮಿತಿಯಿಂದ ನಡೆದ ‘ಹೋಳಿ ಮಿಲನ್‌’ ಕಾರ್ಯಕ್ರಮಕ್ಕೆ ರೈನ್ ವಾಟರ್ ಅಂಡ್ ಡಿಜೆ ವ್ಯವಸ್ಥೆ ಮಾಡಲಾಗಿತ್ತು ಯುವತಿಯರು ಯುವಕರು ಮಕ್ಕಳು ಮಹಿಳೆಯರು ಕುಣಿದು ಕುಪ್ಪಳಿಸಿದರು

ಶಾಲಾ-ಕಾಲೇಜುಗಳು, ವಸತಿ ಶಾಲೆಗಳು, ಹಾಸ್ಟೆಲ್‌ಗಳು ಮಾತ್ರವಲ್ಲದೆ ಸರ್ಕಾರಿ ಕಚೇರಿಗಳು ವರ್ಣಮಯವಾಗಿದ್ದವು. ಹಲವು ಬಡಾವಣೆಗಳಲ್ಲಿ ಡಿ.ಜೆ. ಅಬ್ಬರ ಕಂಡುಬಂತು. ಅಲ್ಲಲ್ಲಿ ಬಣ್ಣಗಳು, ಪಿಚಕಾರಿಗಳು ಮತ್ತು ಮಕ್ಕಳು ಹಾಗೂ ಯುವಕರು ಬಳಸುವ ಮುಖವಾಡಗಳ ಮಾರಾಟ ನಡೆದಿತ್ತು. ಮಧ್ಯಾಹ್ನ 3 ಗಂಟೆಯವರೆಗೂ ಬಣ್ಣದಾಟ ಮುಂದುವರಿಯುವ ಸಾಧ್ಯತೆ ಹೆಚ್ಚು

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ  ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಬವಣೆ ತಲೆದೋರಿದೆ. ಹಾಗಾಗಿ ಹೋಳಿ ಆಚರಣೆಯಲ್ಲಿ ಪ್ರತಿವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರು ಬಳಕೆಯಾಯಿತು.

ಕಣ್ಮನ ಸೆಳೆದ ‘ಹೋಳಿ ಮಿಲನ್
ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ನಗರ ಹಿಂದು ಅಲಂಕಾರ ಸಮಿತಿಯ ನೇತೃತ್ವದಲ್ಲಿ ‘ಹೋಳಿ ಮಿಲನ್‌’ ಕಾರ್ಯಕ್ರಮ ನಡೆಯಿತು. ಬಣ್ಣವಾಡಲು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಬಣ್ಣವಾಡಿ ಸಂಭ್ರಮಿಸಿದರು ಡಿಜೆ ಮತ್ತು ರೈನ್ ವಾಟರ್ ಸಂಗೀತದ ಅಬ್ಬರಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.  ಶಿವಮೊಗ್ಗ ಶಾಸಕ ಚನ್ನಬಸಪ್ಪ, ಸಂಸದರು by ರಾಘವೇಂದ್ರ   ಹಾಗೂ ಅಲಂಕಾರ ಸಮಿತಿಯ ಹಿಂದೂ ಕಾರ್ಯಕರ್ತರು ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.