ಶಿವಮೊಗ್ಗ ದುರ್ಗಮ್ಮ ದೇವಿಯ ತೇರಿನ ವಿಶೇಷ!?

0
142
  1. ಹೋಳಿ ಹುಣ್ಣಿಮೆ ಪ್ರಯುಕ್ತ ಇಂದು ದುರ್ಗಿಗುಡಿಯಲ್ಲಿ ದುರ್ಗಮ್ಮ ಮತ್ತು ಮರಿಯಮ್ಮ ದೇವಿಯರ ತೇರು.

  2. ದೇಶದಾದ್ಯಂತ ಹೋಳಿ ಹುಣ್ಣಿಮೆಗೆ ಹೋಳಿ ಆಡಿದರೆ ಶಿವಮೊಗ್ಗದಲ್ಲಿ ದುರ್ಗಮ್ಮ ತೇರು ಎಳೆದು ಮರುದಿನ ಹೋಳಿ ಆಡುವುದು ಆದರೆ ಗಾಂಧಿಬಜರಲ್ಲಿ ಸ್ವಲ್ಪಮಟ್ಟಿಗೆ  ಹೋಳಿ ಹಬ್ಬ ಆಚರಿಸುತ್ತಾರೆ ಆದರೆ ಈಡಿ ಶಿವಮೊಗ್ಗದ ಜನತೆ ನಾಳೆ ಬಣ್ಣ ಹಚ್ಚಿ ಹೋಳಿ ಆಡಲಾಗುತ್ತದೆ

  3.  

    ಹೋಳಿ ಹುಣ್ಷಿಮೆಗೆ ದೇವಿಯ ತೇರು ಎಳೆದು‌ ಭಕ್ತರು ಭಕ್ತಿ ಭಾವದಿಂದ ಪಾಲ್ಗೊಂಡರು. ಹೋಳಿ ಹುಣ್ಣಿಮೆಗೆ ತೇರು ಎಳೆಯುವುದಕ್ಕೆ ಶಿವಮೊಗ್ಗ ದಲ್ಲಿ ಹುಟ್ಟಿ ಬೆಳೆದು
    ಮದುವೆ ಆಗಿ ಜಿಲ್ಲೆ, ಬೇರೆ ರಾಜ್ಯದಲ್ಲಿ ವಾಸ ವಿದ್ದರು ಈ  ತೇರು ಎಳೆದು ಹಣ್ಣು ಕಾಯಿ ಮಾಡಿಸಿ ದೇವಿಯ ಪಾತ್ರದಲ್ಲಿ ಹರಕೆಯನ್ನು ಸಲ್ಲಿಸುತ್ತಾರೆ, ದುರ್ಗಮ್ಮ ದೇವಿಯ ತೇರಿಗೆ ಸಾವಿರ ವರ್ಷದ ಸಂಪ್ರದಾಯವಿದೆ. ನಾನಾ ಭಾಗಗಳಿಂದ ತೇರು ಎಳೆಯಲು ಭಕ್ತರು ತಪ್ಪದೇ ಭಾಗಿಯಾಗುತ್ತಾರೆ.
    ಈ ವರ್ಷದ ದುರ್ಗಮ್ಮನ ತೇರುಗೆ ಅತಿ ಹೆಚ್ಚಿನ ಭಕ್ತಾದಿಗಳು ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು

    ದುರ್ಗಿಗುಡಿ ಮುಖ್ಯ ರಸ್ತೆಯಿಂದ ಶನೇಶ್ವರ ದೇವಸ್ಥಾನದ ವರೆಗೂ ತೇರನ್ನ ಎಳೆದು ನಂತರ ದೇವಿಯ ಗುಡಿಯ ಮುಂದೆ ತೇರನ್ನ‌ ನಿಲ್ಲಿಸಲಾಗುವುದು.

  4. ದುರ್ಗಪರಮೇಶ್ವರಿ ಸೇವಾ ಸಮಿತಿಯ ವತಿಯಿಂದ ನಡೆದ ತೇರು ಸುಡುಬಿಲಸಿನ್ನು ಲೆಕ್ಕಿಸದೆ ಮಕ್ಕಳು ಹಾಗೂ ವಯಸ್ಸಾದವರು ಬರಿಗಾಲಲ್ಲೇ ದುರ್ಗಮ್ಮ ತೆರಿಗೆ ನಮಸ್ಕರಿಸುವುದು ಅತ್ಯಂತ ವಿಶೇಷವಾಗಿತ್ತು.