ರೌಡಿ ಶೀಟ‌ರ್ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು!?

0
190

ರೌಡಿ ಶೀಟ‌ರ್ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು!

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲೆತ್ನಿಸಿದ ರೌಡಿ ಶೀಟರ್ ಓರ್ವನ ಕಾಲಿಗೆ ಪೊಲೀಸರು ಎಡಗಾಲಿಗೆ ಗುಂಡಿಕ್ಕಿ ಬಂಧಿಸಿದ ಘಟನೆ, ಶಿವಮೊಗ್ಗ ನಗರದ ಹೊರವಲಯ ಮಲ್ಲಿಗೇನಹಳ್ಳಿ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.

ಟಿಪ್ಪು ನಗರದ ಪರ್ವೀಜ್ ಯಾನೆ ಪರು (24) ಬಂಧಿತ ರೌಡಿ ಶೀಟರ್ ಎಂದು ಗುರುತಿಸಲಾಗಿದೆ.
307 ಪ್ರಕರಣದಲ್ಲಿ ಡ್ರ್ಯಾಗರ್ ನಿಂದ ಇರಿದಿದ್ದ ಆರೋಪಿ ಬಂಧನಕ್ಕೆ ತೆರಳಿದ್ದ ಪೊಲಿಸರ ಮೇಲೆ ಅಟ್ಯಾಕ್ ಮಾಡಲಾಗಿದೆ.
ಆತ್ಮರಕ್ಷಣೆಗಾಗಿ ಪೊಲೀಸರು ಎರಡು ಬಾರಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಮಾ.18 ರಂದು ಟಿಪ್ಪುನಗರದಲ್ಲಿ ನಾಸೀರ್, ಮೊಹ್ಮದ್ ತಂಜೀಮ್ ಮತ್ತು ಅಫ್ತಾಬ್ ಎಂಬುವರ ನಡುವೆ ಗಲಾಟೆಯಾಗಿರುತ್ತದೆ. ಈ ವೇಳೆ ಫರ್ವೇಜ್ ಅಲಿಯಸ್ ಫರು ಎಂಬಾತನು ತನ್ನ ನಾಲ್ಕೈದು ಜನ ಸ್ನೇಹಿತರೊಂದಿಗೆ ಬಂದು ಡ್ರ್ಯಾಗರ್ ನಿಂದ ತಂಜೀಮ್ ಗೆ ಮೂರು ಕಡೆ ಇರಿದಿರುತ್ತಾನೆ.

 

307 ಪ್ರಕರಣದಲ್ಲಿ ಡ್ರ್ಯಾಗರ್ ನಿಂದ ಇರಿದಿದ್ದ ಆರೋಪಿ ಬಂಧನಕ್ಕೆ ತೆರಳಿದ್ದ ಪೊಲಿಸರ ಮೇಲೆ ಅಟ್ಯಾಕ್ ಮಾಡಲಾಗಿದೆ. ಆತ್ಮರಕ್ಷಣೆಗಾಗಿ ಪೊಲೀಸರು ಎರಡು ಬಾರಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ತಂಜೀಮ್ ಮೇಲೆ ಆಯುಧದಿಂದ ಅಟ್ಯಾಕ್ ಮಾಡಿ ಫರು ಪರಾರಿಯಾಗಿರುತ್ತಾನೆ. ತಂಜೀಮ್ ಡ್ಯಾಗರ್ ಅಟ್ಯಾಕ್ ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾನೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ 307 ದಾಖಲಾಗಿರುತ್ತದೆ.

ಅರೊಪಿ ಫರುವಿನ ವಿರುದ್ಧ ಇದೇ ಮೊದಲ ಪ್ರಕರಣಗಳು ದಾಖಲಾಗಿಲ್ಲ.  1 ಮರ್ಡರ್ ಗಾಂಜಾ, ಹಾಫ್ ಮರ್ಡರ್, ರಾಬರಿ ಪ್ರಕರಣಗಳು ದಾಖಲಾಗಿವೆ. ತುಂಗನಗರ ಪೊಲೀಸ್ ಠಾಣೆ ಒಂದರಲ್ಲೇ ಈತನ ವಿರುದ್ಧ 6 ಪ್ರಕರಣಗಳು ದಾಖಲಾಗಿದೆ.

ಬಂಧನಕ್ಕೆ ತೆರಳಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಫರು ಕಾಲಿಗೆ ಗುಂಡು ಹಾರಿಸಿಲಾಗಿದೆ. ಫಾರು ಎಂಬಾತನ ಕಾಲಿಗೆ ಇಂದು ಬೆಳಗ್ಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿ ಫಾರು ಎಂಬಾತ ಮಲ್ಲಿಗೇನಹಳ್ಳಿ ಬಳಿ ಇರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.
ಆತನ ಬಂಧನಕ್ಕೆ ತೆರಳಿದ್ದ ವೇಳೆ ತುಂಗಾ ನಗರ ಠಾಣೆ ಸಿಬ್ಬಂದಿ ನಾಗಪ್ಪ ಅವರ ಮೇಲೆ ಆರೋಪಿ ಫಾರು ಚಾಕುವಿನಿಂದ ದಾಳಿ ನಡೆಸಿದ್ದನು.

ಆತ್ಮರಕ್ಷಣೆಗಾಗಿ ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್‌ ಸತ್ಯನಾರಾಯಣ ಅವರು ಆರೋಪಿ ಫಾರು ಕಾಲಿಗೆ ಗುಂಡು ಹಾರಿಸಿದ್ದಾರೆ
ಆರೋಪಿಯನ್ನು ಹಾಗೂ ಈತನ ದಾಳಿಯಿಂದ ಗಾಯಗೊಂಡ ಪೊಲೀಸ್ ಪೇದೆ ನಾಗಪ್ಪ ಎಂಬುವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.