ಸಂತೇಮರಹಳ್ಳಿ ಆಸ್ಪತ್ರೆಯಲ್ಲಿ ಪ್ರತಿ ಹೆರಿಗೆಗೂ ಹಣ ಪಡೆಯುವ ಆರೋಪ; ಡಿಹೆಚ್​ಒ ಹೇಳಿದ್ದೇನು?

0
25

ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಸಮಯದಾಯ ಆರೋಗ್ಯ ಕೇಂದ್ರದಲ್ಲಿ ಅಲ್ಲಿನ ಸಿಬ್ಬಂದಿಯೊಬ್ಬರು ಹಣ ಪಡೆಯುವ ವಿಡಿಯೋ ವೈರಲ್​ ಆಗಿದೆ

ಸಂತೇಮರಹಳ್ಳಿ ಆಸ್ಪತ್ರೆಯಲ್ಲಿ ಪ್ರತಿ ಹೆರಿಗೆಗೂ ಹಣ ಪಡೆಯುವ ಆರೋಪ; ಡಿಹೆಚ್​ಒ ಹೇಳಿದ್ದೇನು?

 

ಸಂತೇಮರಹಳ್ಳಿ ಸಮಯದಾಯ ಆರೋಗ್ಯ ಕೇಂದ್ರ

ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಸಮಯದಾಯ ಆರೋಗ್ಯ ಕೇಂದ್ರದಲ್ಲಿ ಅಲ್ಲಿನ ಸಿಬ್ಬಂದಿಯೊಬ್ಬರು ಹಣ ಪಡೆಯುವ ವಿಡಿಯೋ ವೈರಲ್​ ಆಗಿದೆ.

 

 

ಚಾಮರಾಜನಗರ:ಹೆರಿಗೆಗೆ ಇಂತಿಷ್ಟು ಎಂದು ಆಸ್ಪತ್ರೆ ಸಿಬ್ಬಂದಿ ಹಣ ಪಡೆಯುತ್ತಿರುವ ಲಂಚಾವತಾರದ ವಿಡಿಯೋ ವೈರಲ್ ಆಗಿದ್ದು, ಉತ್ತಮ ಆಸ್ಪತ್ರೆ ಎಂದು ಹೆಸರು ಪಡೆದಿದ್ದ ಸಂತೇಮರಹಳ್ಳಿ ಸಮಯದಾಯ ಆರೋಗ್ಯ ಕೇಂದ್ರದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.

ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಹಣ ಪಡೆಯುತ್ತಿರುವ ದೃಶ್ಯವನ್ನು ಆಶಾ ಕಾರ್ಯಕರ್ತೆವೊಬ್ಬರು ಸೆರೆ ಹಿಡಿದಿದ್ದಾರೆ. ಒಂದೊಂದು ಚಿಕಿತ್ಸೆಗೆ ಇಲ್ಲಿ ಒಂದೊಂದು ರೇಟ್ ಫಿಕ್ಸ್ ಆಗಿದ್ದು, ನಾರ್ಮಲ್ ಡೆಲವರಿಗೆ 3 ಸಾವಿರ ರೂ., ಸಿಜೆರಿಯನ್ ಹೆರಿಗೆಗೆ 20 ಸಾವಿರ ರೂ., ಸಂತಾನಹರಣ ಶಸ್ತ್ರ ಚಿಕಿತ್ಸೆಗೆ 3 ರಿಂದ 8 ಸಾವಿರ ರೂ. ಗರ್ಭಕೋಶದ ಆಪರೇಷನ್​ಗೆ ಇಲ್ಲಿ 35 ಸಾವಿರ ರೂ. ಕೊಡಬೇಕಿದೆ ಎಂದು ಅರೋಪಿಸಲಾಗಿದೆ.

ಡಿಹೆಚ್​ಒ ಹೇಳಿದ್ದು ಹೀಗೆ;

ಈ ಕುರಿತಂತೆ ಪ್ರತಿಕ್ರಿಯಿಸಿರುವ ಡಿಎಚ್ಒ‌ ಡಾ. ಚಿದಂಬರ ಅವರು, ಆಸ್ಪತ್ರೆ ಸಿಬ್ಬಂದಿ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 2 ದಿನಗಳಲ್ಲಿ ವರದಿ ತಯಾರಿಸಿ ಡಿಸಿಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.