Wednesday, September 25, 2024
spot_img

ಬಿಬಿಎಂಪಿ ನಿರ್ಲಕ್ಷ್ಯ; ಮರದ ಕೊಂಬೆ ಮುರಿದು ಬಿದ್ದು ಬೈಕ್ ಸವಾರನ ಬೆನ್ನು ಮೂಳೆ ಮುರಿತ

ಮರದ ಕೊಂಬೆ ಮುರಿದು ಬಿದ್ದು ಬೈಕ್ ಸವಾರನ ಬೆನ್ನು ಮೂಳೆ ಮುರಿದ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಗರವಾಸಿಗಳು ಬಲಿಯಾಗುವುದು ಮಾತ್ರ ನಿಲ್ಲುತ್ತಿಲ್ಲ. ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚದೆ ಬಿಟ್ಟಿದ್ದರಿಂದ ಈ ಹಿಂದೆ ಅನೇಕ ಸಾವು-ನೋವುಗಳು ಸಂಭವಿಸಿದ್ದವು. ಇದೀಗ ರಸ್ತೆಗೆ ಬಾಗಿದ ಮರಗಳ ಕೊಂದೆಗಳನ್ನು ತೆರವು ಮಾಡದ ಪರಿಣಾಮ ವಾಹನ ಸವಾರರು ಭೀತಿಯಿಂದ ಹೋಗುವಂತಾಗಿದೆ.

ಬೆಂಗಳೂರು, ಮಾ.22: ಮರದ ಕೊಂಬೆ ಮುರಿದು ಬಿದ್ದು ಬೈಕ್ ಸವಾರನ ಬೆನ್ನು ಮೂಳೆ ಮುರಿದ ಘಟನೆ ಬೆಂಗಳೂರು (Bengaluru) ನಗರದಲ್ಲಿ ನಡೆದಿದೆ. ಮರದ ಕೊಂಬೆ ರಸ್ತೆಗೆ ಬೀಳುವಂತಿದ್ದರು ತೆರವು ಮಾಡದ ಆರೋಪ ಪ್ರಕರಣ ಸಂಬಂಧ ಖಾಸಗಿ ಶಾಲೆ ಮತ್ತು ಬಿಬಿಎಂಪಿ (BBMP) ವಿರುದ್ಧ ಆಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನಾಗರಬಾವಿ ನಿವಾಸಿ ಚಂದನ್ ಬೆನ್ನು ಮೂಳೆ ಮುರಿತಕ್ಕೊಳಗಾದ ಬೈಕ್ ಸವಾರ. ರಿಚ್ಮಂಡ್ ರಸ್ತೆಯ ಫೈನಾನ್ಸ್ ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಮಾರ್ಚ್ 7 ರಂದು ಬೆಳಗ್ಗೆ ಕಚೇರಿಗೆ ಹೋಗುತ್ತಿದ್ದರು. ಈ ವೇಳೆ ರಸ್ತೆಗೆ ಚಾಚುಕೊಂಡಿದ್ದ ಮರದ ಕೊಂಬೆ ಚಂದನ್ ಮೇಲೆ ಮುರಿದು ಬಿದ್ದಿದೆ

 

 

 

 

ಕೊಂಬೆ ಮೈ ಮೇಲೆ ಬೀಳುತ್ತಿದ್ದಂತೆ ರಸ್ತೆ ಮೇಲೆ ಬಿದ್ದ ಚಂದನ್​ನ ಕುತ್ತಿಗೆ ಗಾಯವಾಗಿದೆ. ಅಲ್ಲದೆ, ಬೆನ್ನು ಮೂಳೆ ಮುರಿದಿದೆ. ಏಳೆಂಟು ನಿಮಿಷಗಳ ಕಾಲ ರಸ್ತೆಯಲ್ಲಿ ನರಳಾಡಿದ್ದ ಚಂದನ್​ನನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 14 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಂದನ್​ಗೆ ಚಿಕಿತ್ಸೆ ನೀಡಲಾಗುತ್ತಿದ್ದಾರೆ. ಈ ನಡುವೆ ಆಶೋಕನಗರ ಪೊಲೀಸರಿಗೆ ಚಂದನ್​ ದೂರು ನೀಡಿದ್ದಾರೆ

ಖಾಸಗಿ ಶಾಲೆ, ಬಿಬಿಎಂಪಿ ವಿರುದ್ಧ ಎಫ್ಐಆರ್

ಮರದ ಕೊಂಬೆ ರಸ್ತೆಗೆ ಬೀಳುವಂತಿದ್ದರೂ ಅದನ್ನು ತೆರವು ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಖಾಸಗಿ ಶಾಲೆ ಹಾಗೂ ಬಿಬಿಎಂಪಿ ವಿರುದ್ಧ ಪ್ರಕರಣ ದಾಖಲುಸಿಕೊಂಡ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles