Wednesday, September 25, 2024
spot_img

ಅತ್ತೆ-ಅಳಿಯನ‌ ಮಧ್ಯೆ ಅನೈತಿಕ ಸಂಬಂಧದ ಕಟ್ಟು ಕಥೆ ಕಟ್ಟಿದ ಮಂತ್ರವಾದಿ: ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ

ಅತ್ತೆ-ಅಳಿಯನ‌ ಮಧ್ಯೆ ಅನೈತಿಕ ಸಂಬಂಧದ ಕಥೆ ಕಟ್ಟಿ ಹಣ ಸುಲಿಗೆ ಮಾಡಲು ಮಂತ್ರವಾದಿ ಮುಂದಾಗಿದ್ದು, ಆತನ ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮಾರ್ಚ್​ 9ರಂದು ಕನಕಪುರದ ಟಿ ಬೇಕುಪ್ಪೆ ಸರ್ಕಲ್​​ನ‌ ಅರ್ಕಾವತಿ ನದಿ ಬಳಿ ಘಟನೆ ನಡೆದಿದೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌‌ ಯುಡಿಆರ್​​​ ಅಡಿ ಪ್ರಕರಣ ದಾಖಲಿಸಿದ್ದಾರೆ.

ರಾಮನಗರ, ಮಾರ್ಚ್​​ 22: ಅತ್ತೆ-ಅಳಿಯನ‌ ಮಧ್ಯೆ ಅನೈತಿಕ ಸಂಬಂಧದ ಕಥೆ ಕಟ್ಟಿ ಹಣ ಸುಲಿಗೆ ಮಾಡಲು ಮಂತ್ರವಾದಿ (mantravadi) ಮುಂದಾಗಿದ್ದು, ಆತನ ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮಾರ್ಚ್​ 9ರಂದು ಕನಕಪುರದ ಟಿ ಬೇಕುಪ್ಪೆ ಸರ್ಕಲ್​​ನ‌ ಅರ್ಕಾವತಿ ನದಿ ಬಳಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುತ್ತುರಾಜು (25) ಮೃತ ‌ಯುವಕ. ಮೊದಲಿಗೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ ಮೃತ ಯುವಕನ ಮೊಬೈಲಿನಲ್ಲಿ ಮಂತ್ರವಾದಿಯ ಬೆದರಿಕೆ ವಾಯ್ಸ್ ನೋಟ್ ಪತ್ತೆ ಬಳಿಕ ಮಂತ್ರವಾದಿಯೇ ಕಾರಣವೆನ್ನಲಾಗುತ್ತಿದೆ. ಪಂಡಿತ್ ಸರಕಾರ​ ಪ್ರಸಾದ್ ಹೆಸರಿನ ಫೇಸ್ಬುಕ್ ಪೇಜ್ ಹೊಂದಿದ್ದ ವಿಷ್ಣು ಎಂಬಾತನನ್ನು ಬಂಧಿಸಿದ್ದು, ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌‌ ಯುಡಿಆರ್​​​ ಅಡಿ ಪ್ರಕರಣ ದಾಖಲಿಸಿದ್ದಾರೆ.

ಫೆಸ್​​ಬುಕ್​ನಲ್ಲಿ ಪಂಡಿತ್​​ ಸರಕಾರ ಪ್ರಸಾದ್ ಸಂಪರ್ಕ​​

ದೊಡ್ಡ ಆಲಹಳ್ಳಿಯಲ್ಲಿ ಸಾಮಿಲ್ ನಡೆಸುತ್ತಿದ್ದ ಮುತ್ತುರಾಜ್​, ಕಳೆದ ಕೆಲ ದಿನಗಳಿಂದ ಉದ್ಯೋಗದಲ್ಲಿ ನಷ್ಟ ಉಂಟಾಗಿದೆ. ಹೀಗಾಗಿ ಇದರಿಂದ ಹೊರಬರಲು ಪ್ರಯತ್ನಿಸುತ್ತಿರುವಾಗ ಫೆಸ್​​ಬುಕ್​ನಲ್ಲಿ ಪಂಡಿತ್​​ ಸರಕಾರ ಪ್ರಸಾದ್​ ಎಂಬ ಹೆಸರಿನ ಮಂತ್ರವಾದಿಯ ಸಮಸ್ಯೆ ನಾಶ, ವಶೀಕರಣ,‌ ಜಿಗುಪ್ಸೆಗೆ ಪರಿಹಾರ ಎಂಬ ಪ್ರೊಫೈಲ್​​ ನೀಡಿ ಸಂಪರ್ಕ ಮಾಡಿದ್ದಾನೆ.

ಸಾಮಿಲ್ ನಡೆಯುತ್ತಿಲ್ಲ. ಜಿಗುಪ್ಸೆ ಆಗುತ್ತಿದೆ‌ ಎಂದು ಮುತ್ತುರಾಜ್​ ಕಷ್ಟ ಹೇಳಿಕೊಂಡಿದ್ದ. ನಿನಗೆ ಒಳ್ಳೆಯ ಯೋಗವಿದೆ. ನಾನು ಹೇಳಿದಂತೆ ಮಾಡು. ನಿನ್ನ ಮನೆಯವರೆಲ್ಲರ ಫೋಟೋ ಕಳುಹಿಸಿಕೊಡು ಎಂದು ಮಂತ್ರವಾದಿ ಹೇಳಿದ್ದಾನೆ. ಅದಕ್ಕೆ ತನ್ನ ಹಾಗೂ ಪತ್ನಿ, ಮಗಳು, ಹಾಗೂ ಅತ್ತೆಯ ಫೋಟೋವನ್ನು ಮುತ್ತುರಾಜ್ ಕಳುಹಿಸಿದ್ದಾನೆ. ಇತ್ತ ಫೋಟೋ ಕಳುಹಿಸಿದ ಬಳಿಕ ಮಂತ್ರವಾದಿ ತನ್ನ ಕುಕೃತ್ಯ ಶುರು ಮಾಡಿಕೊಂಡಿದ್ದಾನೆ.

ಮಂತ್ರವಾದಿಯ ಬೆದರಿಕೆ

ಅತ್ತೆಯ ಹಾಗೂ ನಿನ್ನ ಮಧ್ಯೆ ಅನೈತಿಕ‌ ಸಂಬಂಧದ ಬಗ್ಗೆ ಪೋಸ್ಟ್ ಹಾಕ್ತೀನಿ ಅಂತ‌ ಬೆದರಿಕೆ ಹಾಕಲು ಶುರುಮಾಡಿದ್ದಾನೆ. ಒಂದು ಕಡೆ ಮುತ್ತುರಾಜ್,‌‌ ಇನ್ನೊಂದು ಕಡೆ ಅತ್ತೆಯ ಫೋಟೋ ಹಾಕಿ ಎಡಿಟ್ ಮಾಡಿದ್ದಾನೆ. ತನ್ನ ಸ್ವಂತ ಅತ್ತೆಯನ್ನು ಲೈಂಗಿಕವಾಗಿ ಬಳಿಸಿಕೊಳ್ಳಲು 15 ಸಾವಿರ ರೂ. ಕೊಟ್ಟಿದ್ದಾನೆ ಅಂತ ಮಂತ್ರವಾದಿ ಪೊಸ್ಟ್ ಕ್ರಿಯೆಟ್ ಮಾಡಿದ್ದಾನೆ. ಅದನ್ನು ಮುತ್ತುರಾಜ್​​ಗೆ ಕಳುಹಿಸಿ ಬ್ಲ್ಯಾಕ್​ಮೇಲ್​​ ಮಾಡಿದ್ದಾನೆ. ನೀನು ಹಣ ಕೊಡು, ಇಲ್ಲದಿದ್ರೆ ಇದನ್ನು ಫೇಸ್​​ಬುಕ್​​ನಲ್ಲಿ ಹಾಕುತ್ತೇನೆ ಅಂತ ಬೆದರಿಕೆ ಹಾಕಿದ್ದಾನೆ.

ಪದೇ ಪದೇ ಮಂತ್ರವಾದಿಯ ವಾಟ್ಸಪ್ ಮೆಸೆಜ್, ವಾಯ್ಸ್ ನೋಟ್​ಗಳ ಬೆದರಿಕೆಗೆ ಕುಗ್ಗಿ ಹೋಗಿದ್ದ ಮುತ್ತುರಾಜ್​​, ಮಾರ್ಚ್​ 9ರಂದು ಅರ್ಕಾವತಿ ನದಿ ಬಳಿ ಬೈಕ್‌ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಮಿಲ್ ನಷ್ಟದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಮಾರ್ಚ್​ 18 ಎಂದು ಮುತ್ತುರಾಜ್ ಮೊಬೈಲ್ ಗಮನಿಸಿದ ಬಾಮೈದ ಶಶಿಕುಮಾರ್​​, ಈ‌ ವೇಳೆ ಮುತ್ತುರಾಜ್ ಮೊಬೈಲಿನಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಮಂತ್ರವಾದಿ ವಾಯ್ಸ್ ನೋಟ್, ಆತ್ಮಹತ್ಯೆಗೂ ಮುನ್ನ ಮಾತನಾಡಿದ್ದು, ಮುತ್ತುರಾಜ್ ಹಾಗೂ ಅತ್ತೆಯ ಮಧ್ಯೆ ಕಟ್ಟಿದ್ದ ಸುಳ್ಳು ಸಂಬಂಧದ ಕಥೆಯ ಗುಟ್ಟು ರಟ್ಟಾಗಿತ್ತು.

ಕೂಡಲೇ ಕನಕಪುರ ಪೊಲೀಸರಿಗೆ ಮುತ್ತುರಾಜ್ ಪತ್ನಿ ಶಿಲ್ಪಾ ಮಾಹಿತಿ ನೀಡಿದ್ದು, ತನ್ನ ಗಂಡ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಕಾರಣ ಮಂತ್ರವಾದಿ ಎಂದು ದೂರು ನೀಡಿದ್ದಾರೆ. ಮುತ್ತುರಾಜ್ ಮೊಬೈಲ್ ಪಡೆದುಕೊಂಡು ವಿಚಾರಣೆ ಕೈಗೆತ್ತಿಕೊಂಡ ಕನಕಪುರ ಪೊಲೀಸರು, ಕೇಸ್ ವಿಚಾರಣೆ ಮಾಡುತ್ತಿದ್ದಂತೆ ಶಾಕ್​ ಆಗಿದ್ದಾರೆ. ಕಾರಣ ಆ ಮಂತ್ರವಾದಿ ‌22 ವರ್ಷದ ಪದವಿ ಓದುತ್ತಿದ್ದ ಯುವಕ. ಆತನ ಹೆಸರು ವಿಷ್ಣು ಶಾಸ್ತ್ರಿ. ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮುತ್ತುರಾಜ್​​ಗೆ ಬ್ಲ್ಯಾಕ್​​ಮೇಲ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles