ನವುಲೆಯಲ್ಲಿ ಭೀಕರ ಅಪಘಾತ ಸ್ಥಳದಲ್ಲಿ ಬೈಕ್ ಸವಾರ ಸಾವು!?

0
901

ನವುಲೆಯಲ್ಲಿ ಭೀಕರ ಅಪಘಾತ ಸ್ಥಳದಲ್ಲಿ ಬೈಕ್ ಸವಾರ ಸಾವು.

ಶಿವಮೊಗ್ಗ: ನಗರದ ನವುಲೆಯ ಬಳಿ ಭೀಕರ ಅಪಘಾತ ಒಂದು ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಕೆಟಿಎಂ ಗಾಡಿಯಲ್ಲಿ ಬರುತ್ತಿದ್ದ ಕಾಶಿಪುರದ ನಿವಾಸಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಎದುರಿಗೆ ಪ್ಯಾಶನ್ ಪ್ರೊ ನಲ್ಲಿ ಬರುತ್ತಿದ್ದ ಇನ್ನರ್ವ ಬೈಕ್ ಸವಾರನ ನಡುವೆ ಮುಖಮುಖಿ ಡಿಕ್ಕಿಯಾಗಿದ್ದು ಕಾಶಿಪುರದ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಪ್ಯಾಶನ್ ಪ್ರೊ ನಲ್ಲಿ ಬರುತ್ತಿದ್ದ ಬೈಕ್ ಸವಾರನಿಗೆ ಮೊದಲು ಗುದ್ದಿ ನಂತರ ಕೆಎಂಎಫ್ ಹಾಲಿನ ಗಾಡಿಗೆ ಗುದ್ದಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಇನ್ನೋರ್ವ ಬೈಕ್ ಸವಾರ ನಿಗೆ ತಲೆಗೆ ಪೆಟ್ಟು ಬಿದ್ದಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.