ವಿಧಾನಪರಿಷತ್‌ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೇಸ್ ಟಿಕೇಟ್ ಯಾರಿಗೆ!?

0
21

ವಿಧಾನಪರಿಷತ್‌ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೇಸ್ ಟಿಕೇಟ್ ಪಡೆಯುವಲ್ಲಿ ಆಯನೂರು ಮಂಜುನಾಥ್ ಕೊನೆಗೂ ಯಶಸ್ವಿಯಾಗಿದ್ದಾರೆ.

ಪಕ್ಷದ ಟಿಕೆಟ್ ಪಡೆಯುವಲ್ಲಿ ಎಸ್ ಪಿ ದಿನೇಶ್ ಮತ್ತು ಆಯನೂರು ಮಂಜುನಾಥ್‌ ನಡುವೆ ಪೈಪೋಟಿ ನಡೆದಿದ್ದು ಅಂತಿಮವಾಗಿ ಟಿಕೆಟ್ ಪಡೆಯುವಲ್ಲಿ ಆಯನೂರು ಮಂಜುನಾಥ್ ಮೇಲುಗೈ ಸಾಧಿಸಿದ್ದಾರೆ.

ಬಿಜೆಪಿ ಯಿಂದ ನೈರುತ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್ ಸದಸ್ಯತ್ವ ಅವಧಿ ಇನ್ನೂ ಒಂದು ವರ್ಷ ಇರುವಾಗಲೆ ರಾಜೀನಾಮೆ ನೀಡಿ ಜೆಡಿಎಸ್‌ ಅಭ್ಯರ್ಥಿಯಾಗಿ 2023 ರ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ ಕಾಂಗ್ರೇಸ್ ಸೇರ್ಪಡೆ ಗೊಂಡಿದ್ದರು.

ಎಸ್ ಪಿ ದಿನೇಶ್ ರವರು  ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿ ಹಲವು ವರ್ಷದಿಂದ ಪಕ್ಷಕ್ಕೆ ತಮ್ಮ ಸೇವೆಯನ್ನು ಅರ್ಪಿಸಿದ್ದಾರೆ ಆದರೂ ಕಾಂಗ್ರೆಸ್ ಪಕ್ಷವು  ಮಂಜುನಾಥ್ ರವರಿಗೆ ಪಕ್ಷದ ಸೀಟನ್ನು ನೀಡಿರಾಜಕೀಯ ತಂತ್ರಗಾರಿಕೆ ಮೆರೆದಿದೆ. 
ಎಸ್ ಪಿ ದಿನೇಶ್‍ರವರ ಮುಂದಿನ ನಡೆಯೆನು ಎಂದು ಕಾದು ನೋಡಬೇಕಾಗಿದೆ.