Wednesday, September 25, 2024
spot_img

ಲಾ ಎಂಡ್ ಆರ್ಡರ್ ಕಾಪಾಡೋ ಪ್ರೊಬೇಷನರಿ ಕಾಮುಕ ಪಿಎಸ್ಐ ಜಗದೀಶ್ ನಿಂದ ವಿದ್ಯಾರ್ಥಿನಿಯರಿಗೆ ಕಿರುಕುಳ

ಚಾಮರಾಜನಗರ ಮಾರ್ಚ್​.21: ಲಾ ಎಂಡ್ ಆರ್ಡರ್ ಕಾಪಾಡೋ ಪ್ರೊಬೇಷನರಿ ಪಿಎಸ್‌ಐನಿಂದಲೇ (Probationary PSI) ವಿದ್ಯಾರ್ಥಿನಿಯರಿಗೆ (Students) ಕಿರುಕುಳ ಆರೋಪ ಕೇಳಿ ಬಂದಿದೆ.

ಚಾಮರಾಜನಗರದ ಜಗದೀಶ್ ಎಂಬ ಕಾಮುಕ ಪಿಎಸ್‌ಐ ಮರ್ಮಾಂಗದ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಾನೆ ಎಂಬ ಬಗ್ಗೆ ದೂರು ದಾಖಲಾಗಿದ್ದು ಚಾಮರಾಜನಗರ (Chamarajanagar) ಎಸ್​ಪಿ ಕಚೇರಿಗೆ ತನಿಖೆ ನಡೆಸುವಂತೆ ಐಜಿ ಕಚೇರಿಯಿಂದ ತಾಕೀತು ಬಂದಿದೆ.ಸದ್ಯ ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಚಾಮರಾಜನಗರ ಡಿವೈಎಸ್ಪಿಗೆ ತನಿಖೆ ಹೊಣೆ ನೀಡಿದ್ದಾರೆ. ಪಿಎಸ್‌ಐ ಜಗದೀಶ್ […]

ಚಾಮರಾಜನಗರ, ಮಾರ್ಚ್​.21: ಲಾ ಎಂಡ್ ಆರ್ಡರ್ ಕಾಪಾಡೋ ಪ್ರೊಬೇಷನರಿ ಪಿಎಸ್‌ಐನಿಂದಲೇ (Probationary PSI) ವಿದ್ಯಾರ್ಥಿನಿಯರಿಗೆ (Students) ಕಿರುಕುಳ ಆರೋಪ ಕೇಳಿ ಬಂದಿದೆ. ಪಿಎಸ್‌ಐ ಜಗದೀಶ್ ಎಂಬ ಕಾಮುಕ ಮರ್ಮಾಂಗದ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಾನೆ ಎಂಬ ಬಗ್ಗೆ ದೂರು ದಾಖಲಾಗಿದ್ದು ಚಾಮರಾಜನಗರ (Chamarajanagar) ಎಸ್​ಪಿ ಕಚೇರಿಗೆ ತನಿಖೆ ನಡೆಸುವಂತೆ ಐಜಿ ಕಚೇರಿಯಿಂದ ತಾಕೀತು ಬಂದಿದೆ. ಸದ್ಯ ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಚಾಮರಾಜನಗರ ಡಿವೈಎಸ್ಪಿಗೆ ತನಿಖೆ ಹೊಣೆ ನೀಡಿದ್ದಾರೆ.

ಪಿಎಸ್‌ಐ ಜಗದೀಶ್ ಫೇಸ್ ಬುಕ್ ಮೂಲಕ ಮೈಸೂರು ಮೂಲದ ಕಾಲೇಜು ವಿದ್ಯಾರ್ಥಿನಿಯರಿಗೆ ಗಾಳ ಹಾಕುತ್ತಿದ್ದ. ಮೊದಲಿಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದ. ವಿದ್ಯಾರ್ಥಿನಿಯರು ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿದ ತಕ್ಷಣ ವಿದ್ಯಾರ್ಥಿನಿಯರಿಗೆ ಮೊಬೈಲ್ ನಂಬರ್ ಕೇಳಿ ಪಡೆಯುತ್ತಿದ್ದ. ಬಳಿಕ ವಾಟ್ಸಪ್ ಮೂಲಕ ದಿನ ನಿತ್ಯ ವಿದ್ಯಾರ್ಥಿನಿಯರಿಗೆ ಟಾರ್ಚರ್ ಮಾಡುತ್ತಿದ್ದ. ಲವ್ ಮಾಡು ಔಟಿಂಗ್​ಗೆ ಹೋಗೋಣ ಮಜಾ ಮಾಡೋಣ ಅಂತ ಸಂದೇಶ ಕಳಿಸುತ್ತಿದ್ದ. ಆಚೆ ಬರದೆ ಹೋದ್ರೆ ಸರಿ ಇರುವುದಿಲ್ಲವೆಂದು ಬ್ಲಾಕ್ ಮೇಲ್ ಮಾಡುತ್ತಿದ್ದ.

ಬ್ಲಾಕ್ ಮೇಲ್ ಮಾಡಿ ಹಣವನ್ನ ಸಹ ಪೀಕಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಚಾಮರಾಜನಗರದ ಎಸ್ಪಿ ಕಚೇರಿಯಲ್ಲಿ ಪ್ರೊ ಪಿಎಸ್‌ಐ ಆಗಿ ಜಗದೀಶ್ ಕಾರ್ಯನಿರ್ವಹಿಸುತ್ತಿದ್ದಾನೆ. ಮೈಸೂರಿನ ಖಾಸಗಿ ಕಾಲೇಜ್​ನಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ಗಿರಿಜನ ವಿದ್ಯಾರ್ಥಿನಿಯರಿಗೆ ಮೆಸೇಜ್ ಮಾಡಿ ಟಾರ್ಚರ್ ಮಾಡಿದ್ದಾನೆ. ಮೈ ಜಿ ಬುಡಕಟ್ಟು ಸೋಲಿಗಅಭಿವೃದ್ಧಿ ಸಂಘದವರು ಮೈಸೂರಿನ ಐಜಿ ಕಚೇರಿಗೆ ವಿದ್ಯಾರ್ಥಿನಿಯರ ಪರ ದೂರು ನೀಡಿದ್ದಾರೆ. ಚಾಮರಾಜನಗರ ಎಸ್​ಪಿ ಕಚೇರಿಗೆ ತನಿಖೆ ನಡೆಸುವಂತೆ ಐಜಿ ಕಚೇರಿಯಿಂದ ತಾಕೀತು ಬಂದಿದೆ. ಸದ್ಯ ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಚಾಮರಾಜನಗರ ಡಿವೈಎಸ್ಪಿಗೆ ತನಿಖೆ ಹೊಣೆ ನೀಡಿದ್ದಾರೆ.

 

Related Articles

Stay Connected

0FansLike
3,912FollowersFollow
0SubscribersSubscribe

Latest Articles