Wednesday, September 25, 2024
spot_img

ಮುಖ್ಯಮಂತ್ರಿಗಳ ಖ್ಯಾತಿಗೆ ಚ್ಯುತಿ ಬರುವಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್-ಸುಮೊಟೊ ಪ್ರಕರಣ ದಾಖಲು

ಮುಖ್ಯಮಂತ್ರಿಗಳ ಖ್ಯಾತಿಗೆ ಚ್ಯುತಿ ಬರುವಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್-ಸುಮೊಟೊ ಪ್ರಕರಣ ದಾಖಲ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಖ್ಯಾತಿಗೆ ಕುಂದುಂಟು ಮಾಡುವ ಉದ್ದೇಶದಿಂದ ಅವರ ಫೋಟೊವನ್ನ ಮಾರ್ಫಿಂಗ್ ಮಾಡಿ ಲೇವಡಿ ರೀತಿ ಬಿಂಬಿಸಿದ ವ್ಯಕ್ತಿಯ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.

ಇನ್ಸಟಾಗ್ರಾಂ ಹಾಗೂ ಫೇಸ್ ಬುಕ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಫೋಟೋಗಳನ್ನು ಮಾರ್ಫಿಂಗ್ ಮಾಡಿ ಪೋಸ್ಟ್ ಮಾಡಿದ್ದು, ಇನ್ ಸ್ಟಾಗ್ರಾಂ ಹಾಗೂ ಪೇಸ್ ಬುಕ್ ನ್ನು ಪರಿಶೀಲನೆ ಮಾಡಿದ ಪೊಲೀಸರಿಗೆ ಮಾ.16 ರಂದು ಹುಂಚಾ ಗ್ರಾಮದ ಸುಬ್ರಹ್ಮಣ್ಯ @ ಸುಬ್ಬು @ ಕನ್ನಡದ ಜಾಗ್ವಾರ್ ಎಂಬುವವರು ತಮ್ಮ ಸೋಷಿಯಲ್ ಮೀಡಿಯಾದ ಐಡಿಯಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿರುವ ಬಗ್ಗೆ ತಿಳಿದುಬಂದಿದೆ.

ಸಿಎಂ ಸಿದ್ದರಾಮಯ್ಯ ರವರ ಬೆತ್ತಲೆ ಭಾವಚಿತ್ರ ಹಾಗೂ ಟಿಪ್ಪು ಸುಲ್ತಾನ್ ರ ಬೆತ್ತಲೆ ಭಾವಚಿತ್ರವಿದ್ದು ಭಾವಚಿತ್ರಗಳನ್ನು ಮಾಡಿದ್ದು, ಅದರಲ್ಲಿ ಸಿದ್ದರಾಮಯ್ಯ ರವರು ಟಿಪ್ಪುಸುಲ್ತಾನ್ ರ ಗಲೀಜ್ ತೊಳೆಯುತ್ತಿರುವ ಹಾಗೆ ಇರುವ ಭಾವಚಿತ್ರವಿರುತ್ತದೆ.‌

ಅದರ ಮೇಲ್ಭಾಗದಲ್ಲಿ “ನಂಗೇನ್ ಗೊತ್ತಿಲ್ಲಪ್ಪ ” ಅಂತ ಬರೆಯಲಾಗಿದೆ. ಇನ್ನೊಂದು ಭಾವಚಿತ್ರದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರು ಕಪ್ಪನೆ ಬಣ್ಣದ ಬುರ್ಕಾ ಧರಿಸಿರುವಂತಹ ಭಾವಚಿತ್ರವಿದ್ದು ಇವುಗಳನ್ನು ಫೇಸ್ ಬುಕ್ ತಮ್ಮ ಐಡಿಯಲ್ಲಿ ಫೋಸ್ಟ್ ಮಾಡಲಾಗಿತ್ತು.

ಹುಂಚಾ ಗ್ರಾಮದ ಸುಬ್ರಹ್ಮಣ್ಯ @ ಸುಬ್ಬು @ ಕನ್ನಡದ ಜಾಗ್ವಾರ್ ಎಂಬುವವರು ಸಿದ್ದರಾಮಯ್ಯ ರವರು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯೆಂದು ಗೊತ್ತಿದ್ದರೂ ಸಹಾ ಅವರ ಖ್ಯಾತಿಗೆ ಕುಂದುಂಟು ಮಾಡುವ ಉದ್ದೇಶದಿಂದ ಸರ್ಕಾರದ ಪ್ರಜಾ ಪ್ರತಿನಿಧಿಗಳ ವಿರುದ್ಧ ಅಶ್ಲೀಲ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ಇನ್ನಾಟಗ್ರಾಂ ಗಳಲ್ಲಿ ಪೋಸ್ಟ್ ಮಾಡಿ ಅವಹೇಳನಗೊಳಿಸಿರುತ್ತಾರೆ.

ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಮುಂದಿನ ಕ್ರಮಕ್ಕಾಗಿ ಸುಮೊಟೋ ಕ್ರಮ ಜರುಗಿಸಲಾಗಿದೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles