Wednesday, September 25, 2024
spot_img

ಶಿವಮೊಗ್ಗದಲ್ಲಿ ಮತ್ತೆ ರೌಡಿಸಂ: ಯುವಕರಿಂದ ಗಾಂಜಾ ಅಮಲಿನಲ್ಲಿ ಮರ್ಡರ್ ಅಟ್ಯಾಕ್.. 4 ಘಂಟೆ ತಲೆಯಲ್ಲಿ ನೇತಾಡಿದ ತಲ್ವಾರ್

ವೈದ್ಯರು ಆತನನ್ನು ಬದುಕಿಸಲು ಎಲ್ಲ ರೀತಿಯ ಚಿಕಿತ್ಸೆ ನೀಡುತ್ತಿದ್ದಾರೆ. ಇಂತಹ ಘಟನೆಯಲ್ಲಿ ವ್ಯಕ್ತಿಯು ಬದುಕು ಉಳಿಯುವುದೇ ಅಪರೂಪ. ತಲೆಯಲ್ಲಿ ತಲ್ವಾರ್ ಸಿಕ್ಕಿ ನೇತಾಡುತ್ತಿದ್ದರು. ದಾಳಿಗೊಳಗಾದ ವ್ಯಕ್ತಿಯು ಸುಮಾರು ನಾಲ್ಕು ಘಂಟೆ ಚಿಕಿತ್ಸೆಗಾಗಿ ಮೂರು ಆಸ್ಪತ್ರೆಯಲ್ಲಿ ಅಲೆದಾಡಿದ್ದಾನೆ.ದಾಳಿಗೊಳಗಾದ ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತು. ಆತ ಇಂತಹ ದೊಡ್ಡ ಘಟನೆ ಬಳಿಕವೂ ಆತ ಬದುಕಿದ್ದೇ ಪವಾಡ.

 

ಶಿವಮೊಗ್ಗ ಮಲೆನಾಡಿನಲ್ಲಿ ರೌಡಿಸಂ ಎನ್ನುವುದು ಕಾಮನ್ ಆಗಿಬಿಟ್ಟಿದೆ. ಸಣ್ಣ ಪುಟ್ಟ ವಿಷಯಗಳಿಗೆ ಗಲಾಟೆ ಹೊಡೆದಾಟ ದ್ವೇಷಗಳು ಜಾಸ್ತಿ. ಉಪಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಯ ಕೊಲೆಗೆ ಪಾಪಿಗಳು ಯತ್ನಿಸಿದ್ದಾರೆ. ನಡು ರಸ್ತೆಯಲ್ಲೇ ತಲ್ವಾರ್ ನಿಂದ ಆತನ ತಲೆಗೆ ಅಟ್ಯಾಕ್ ಮಾಡಿದ್ದಾರೆ. ಆದರೆ ತಲ್ವಾರ್ ತಲೆಯಲ್ಲೇ ಸಿಕ್ಕಿಕೊಂಡಿತ್ತು.. ದಾಳಿಗೊಳಗಾದ ವ್ಯಕ್ತಿಯು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.. ಏನಿದು ತಲೆಯಲ್ಲೇ ತಲ್ವಾರ್ ಅಂತೀರಾ ಈ ಸ್ಟೋರಿ ನೋಡಿ.

 

ಶಿವಮೊಗ್ಗ ಭದ್ರಾವತಿಯ ಹೈವೇ ಬಳಿ ಇರುವ ಹರಿಗೆ ಗ್ರಾಮದ ಬಳಿ ಮಾರ್ಚ್​​​ 17 ಭಾನುವಾರ ರಾತ್ರಿ ನಡೆದ ಗಲಾಟೆ. ಪ್ರಶಾಂತ್ (40) ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದಾನೆ. ಶಿವಮೊಗ್ಗ ತಾಲೂಕಿನ ವಡ್ಡಿನಕೊಪ್ಪ ನಿವಾಸಿ. ಆ ದಿನ ರಾತ್ರಿ ತನ್ನ ಜೊತೆ ಕೆಲಸ ಮಾಡುವ ಯುವಕರ ಜೊತೆ ಊಟ ಮಾಡುತ್ತಿದ್ದರು.

 

ಈ ನಡುವೆ ಪ್ರಶಾಂತ್ ಮತ್ತು ಆತನ ಬಳಿ ಬಾರ್ ಬೆಂಡಿಂಗ್ ಕೆಲಸದ ಯುವಕರಾದ ದರ್ಶನ ಮತ್ತು ಅಮಿತ್ ಸೇರಿದಂತೆ ನಾಲ್ವರ ಜೊತೆ ಗಲಾಟೆ ಆಗಿದೆ. ಪ್ರಶಾಂತ್ ಇವರಿಗೆ ಬಾರ್ ಬೆಂಡಿಂಗ್ ಕೆಲಸ ಕಲಿಸಿಕೊಟ್ಟು, ಜೊತೆಗೆ ಕೆಲಸವನ್ನೂ ಕೊಟ್ಟಿದ್ದನು. ರಾತ್ರಿ ಎಣ್ಣೆ ಹೊಡೆದಿದ್ದ ಕೆಲಸ ಮಾಡುವ ಯುವಕರು ಮತ್ತು ಕೆಲಸ ಕೊಟ್ಟ ಪ್ರಶಾಂತ್ ನಡುವೆ ಮಾತಿನ ಚಕಮಕಿ ಆಗಿದೆ. ಪ್ರಶಾಂತ್ ಒಂದಿಷ್ಟು ಯುವಕರನ್ನು ಗದರಿಸಿದ್ದಾನೆ.

 

ಪದೇ ಪದೇ ಪ್ರಶಾಂತ್ ತಮಗೆ ಬೈಯತ್ತಾನೆ ಮತ್ತು ಅವಮಾನ ಮಾಡುತ್ತಾನೆ ಎನ್ನುವ ಆಕ್ರೋಶ ಯುವಕರಲ್ಲಿತ್ತು. ಹೀಗಾಗಿ ಗಲಾಟೆ ಶುರುವಾಗುತ್ತಿದ್ದಂತೆ ಯುವಕನೊಬ್ಬನು ತಲ್ವಾರ್ ತೆಗೆದುಕೊಂಡು ಬಂದಿದ್ದಾನೆ. ಬಳಿಕ ತಲ್ವಾರ್ ನಿಂದ ಪ್ರಶಾಂತ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಯುವಕರು ಗಾಂಜಾ ಮತ್ತು ಮದ್ಯದ ಅಮಲಿನಲ್ಲಿದ್ದರು. ಹೀಗಾಗಿ ಕೈಯಲ್ಲಿದ್ದ ತಲ್ವಾರ್ ನನ್ನು ಪ್ರಶಾಂತ್ ತಲೆ ಒಳಗೆ ಹಾಕಿದ್ದಾರೆ. ಬಳಿಕ ಆ ತಲ್ವಾರ್ ನ್ನು ತಲೆಯಲ್ಲೇ ಬಿಟ್ಟು, ದಾಳಿ ಮಾಡಿದ ಯುವಕರು ಎಸ್ಕೇಪ್ ಆಗಿದ್ದರು. ಈ ಘಟನೆ ತಿಳಿದ ಕುಟುಂಬಸ್ಥರಿಗೆ ಬಿಗ್ ಶಾಕ್ ಹಾಗಿತ್ತು.

 

ಹೀಗೆ ರಾತ್ರಿ ದಾಳಿ ನಡೆದ ಬಳಿಕ, ತಲೆಯಲ್ಲೇ ತಲ್ವಾರ್ ಸಿಕ್ಕಿಕೊಂಡು ನೇತಾಡುತ್ತಿತ್ತು. ತಲೆಯಿಂದ ಮತ್ತು ದೇಹದಿಂದ ತೀವ್ರ ರಕ್ತಸ್ರಾವ ಶುರುವಾಗಿತ್ತು. ಈ ಘಟನೆ ನೋಡಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ತಲೆಯಲ್ಲಿ ತಲ್ವಾರ್ ಇಟ್ಟುಕೊಂಡೇ ಬೈಕ್ ಮೇಲೆ ಗಾಯಾಳು ಪ್ರಶಾಂತ್ ನನ್ನು ಶಿವಮೊಗ್ಗದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು.

 

ತಲೆಯಲ್ಲಿ ತಲ್ವಾರ್ ನೋಡಿದ ಜಿಲ್ಲಾಸ್ಪತ್ರೆಯ ವೈದ್ಯರು ರೋಗಿ ಸ್ಥಿತಿ ಗಂಭೀರ ಇದ್ದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಅಲ್ಲಿಂದ ಜೈಲ್ ರೋಡ್ ನಲ್ಲಿರುವ ಖಾಸಗಿ ಆಸ್ಪತ್ರೆ, ಅಲ್ಲಿಂದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸಾಗಣೆ. ಈ ಎರಡು ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ತಲೆಯಲ್ಲಿ ತಲ್ವಾರ್ ಹಾಗೇ ಇತ್ತು. ಕೊನೆಗೆ ಚಂದ್ರಗಿರಿ ಎನ್ನುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಗಾಯಾಳುವನ್ನು ದಾಖಲಿಸಿದ್ದಾರೆ.

 

ಹೀಗೆ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆ ಅಂತಾ ಸುಮಾರು 3 ರಿಂದ 4 ಘಂಟೆ ಸಮಯ ವ್ಯರ್ಥವಾಗಿದೆ. ಕೊನೆಗೂ ಚಂದ್ರಗಿರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವೈದ್ಯರು ಆಪರೇಶನ್ ಮಾಡಿ ನಾಲ್ಕು ಘಂಟೆ ಬಳಿಕ ಪ್ರಶಾಂತ್ ತಲೆಯಲ್ಲಿದ್ದ ತಲ್ವಾರ್ ನನ್ನು ಹೊರಗೆ ತೆಗೆದಿದ್ದಾರೆ. ಸದ್ಯ ಪ್ರಶಾಂತ್ ಸ್ಥಿತಿ ಗಂಭೀರವಾಗಿದೆ.

 

ವೈದ್ಯರು ಆತನನ್ನು ಬದುಕಿಸಲು ಎಲ್ಲ ರೀತಿಯ ಚಿಕಿತ್ಸೆ ನೀಡುತ್ತಿದ್ದಾರೆ. ಇಂತಹ ಘಟನೆಯಲ್ಲಿ ವ್ಯಕ್ತಿಯು ಬದುಕು ಉಳಿಯುವುದೇ ಅಪರೂಪ. ತಲೆಯಲ್ಲಿ ತಲ್ವಾರ್ ಸಿಕ್ಕಿ ನೇತಾಡುತ್ತಿದ್ದರು. ದಾಳಿಗೊಳಗಾದ ವ್ಯಕ್ತಿಯು ಸುಮಾರು ನಾಲ್ಕು ಘಂಟೆ ಚಿಕಿತ್ಸೆಗಾಗಿ ಮೂರು ಆಸ್ಪತ್ರೆಯಲ್ಲಿ ಅಲೆದಾಡಿದ್ದಾನೆ. ದಾಳಿಗೊಳಗಾದ ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತು. ಆತ ಇಂತಹ ದೊಡ್ಡ ಘಟನೆ ಬಳಿಕವೂ ಆತ ಬದುಕಿದ್ದೇ ಪವಾಡ. ವೈದ್ಯರು ಕೂಡಾ ಈ ಪ್ರಕರಣ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೆಲಸ ಕಲಿಸಿಕೊಟ್ಟು ಹೊಟ್ಟೆ ಪಾಡಿಗೆ ಉದ್ಯೋಗ ಕೊಟ್ಟ ವ್ಯಕ್ತಿಯನ್ನೇ ಯುವಕರು ಮರ್ಡರ್ ಮಾಡಲು ಮುಂದಾಗಿದ್ದರು. ತಲ್ವಾರ್ ದಾಳಿಗೊಳಗಾದ ವ್ಯಕ್ತಿಯು ಸದ್ಯ ಸಾವು ಬದುಕಿನಲ್ಲಿ ಹೋರಾಡುತ್ತಿದ್ದಾನೆ. ಇಂತಹ ಘಟನೆಯಿಂದ ಶಿವಮೊಗ್ಗದ ಜನರು ಬೆಚ್ಚಿಬಿದ್ದಿದ್ದಾರೆ ಕೆಲಸ ಕಲಿಸಿಕೊಟ್ಟು ಹೊಟ್ಟೆ ಪಾಡಿಗೆ ಉದ್ಯೋಗ ಕೊಟ್ಟ ವ್ಯಕ್ತಿಯನ್ನೇ ಯುವಕರು ಮರ್ಡರ್ ಮಾಡಲು ಮುಂದಾಗಿದ್ದರು. ತಲ್ವಾರ್ ದಾಳಿಗೊಳಗಾದ ವ್ಯಕ್ತಿಯು ಸದ್ಯ ಸಾವು ಬದುಕಿನಲ್ಲಿ ಹೋರಾಡುತ್ತಿದ್ದಾನೆ. ಇಂತಹ ಘಟನೆಯಿಂದ ಶಿವಮೊಗ್ಗ ಜನರದ ಜನರು ಬೆಚ್ಚಿಬಿದ್ದಿದ್ದಾರೆ

Related Articles

Stay Connected

0FansLike
3,912FollowersFollow
0SubscribersSubscribe

Latest Articles