Wednesday, September 25, 2024
spot_img

Bitcoin case: DySP ಶ್ರೀಧರ್ ಪೂಜಾರ್​​​ ಹಿಡಿದುಕೊಟ್ಟವರಿಗೆ ಬಹುಮಾನ; ತಲೆಮರೆಸಿಕೊಂಡ ಆರೋಪಿ ಪತ್ತೆಗೆ ಎಸ್‌ಐಟಿ ಮ

ಬೆಂಗಳೂರು: ಬಿಟ್ ಕಾಯಿನ್ ಕೇಸ್​ಗೆ (Bitcoin case) ಸಂಬಂಧಿಸಿದಂತೆ ಆರೋಪಿ ಡಿವೈಎಸ್​ಪಿ ಶ್ರೀಧರ್ (DYSP Sridhar Pujar) ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕಟಣೆ (Police announcement) ಹೊರಡಿಸಿದ್ದು, ಬಿಟ್ ಕಾಯಿನ್ ಕೇಸ್​ನ DySP ಶ್ರೀಧರ್ ಪೂಜಾರ್ 5ನೇ ಆರೋಪಿಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ನೀಡಿದರೆ ಅಥವಾ ಹಿಡಿದುಕೊಟ್ಟವರಿಗೆ ಬಹುಮಾನ (Reward) ಮತ್ತು ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು. DySP ಶ್ರೀಧರ್ ಪೂಜಾರ್​​ ಬಗ್ಗೆ ಮಾಹಿತಿಯಿದ್ದರೆ ಸಿಐಡಿ ಫೈನಾನ್ಷಿಯಲ್ ಇಂಟೆಲಿಜೆನ್ಸ್ (CID Financial Intelligence**) ಡಿವೈಎಸ್​ಪಿ ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.**

 

ಬಿಟ್ ಕಾಯಿನ್ ಹಗರಣ ಸಂಬಂಧ ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಪ್ರಕಟಣೆ ನೀಡಿದ್ದು, ನಾಪತ್ತೆಯಾದ ಡಿವೈಎಸ್ಪಿ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿದೆ. ಡಿವೈಎಸ್​​ಪಿ, ಫೈನಾಕ್ಷಿಯಲ್​ ಇಂಟೆಲಿಜೆನ್ಸ್ ವಿಭಾಗ, ಸಿಐಡಿ, ಬೆಂಗಳೂರು. ದೂರವಾಣಿ ಸಂಖ್ಯೆ; 080 22094485, 22094498 (ಸಿಐಡಿ ಕಂಟ್ರೋಲ್ ರೂಂ), ಮೊಬೈಲ್ ಸಂಖ್ಯೆ 9480800181, ತನಿಖಾಧಿಕಾರಿಗಳು; 94481 49915 ನಂಬರ್​​ಗೆ ಸಂಪರ್ಕಿಸಬಹುದು.
ಎಸ್​ಐಟಿ ಅಧಿಕಾರಿಗಳ ಮೇಲೆ ಕಾರು ಹತ್ತಿಸಿ ಎಸ್ಕೇಪ್
ಈ ಹಿಂದೆ ಆರೋಪಿ ಶ್ರೀಧರ್ ಪೂಜಾರ್ ನನ್ನು ಬಂಧಿಸಲು ಎಸ್​ಐಟಿ ಪೊಲೀಸರು ತೆರಳಿದ ಸಂದರ್ಭದಲ್ಲಿ ಅವರ ಮೇಲೆಯೇ ಕಾರು ಹತ್ತಿಸಿ ಎಸ್ಕೇಪ್ ಆಗಿದ್ದ. ಘಟನೆಯಲ್ಲಿ ಎಎಸ್​​ಐ ಭಾಸ್ಕರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಸಲಿಗೆ ಆಗಿದ್ದೇನು?

ಆರೋಪಿ ಶ್ರೀಧರ್ ಅವರು ಆಂತರಿಕ ಭದ್ರತಾ ವಿಭಾಗದ ಡಿವೈಎಸ್​ಪಿ ಆಗಿದ್ದು, ಅವರನ್ನು ಬಂಧಿಸಲು ಫೆಬ್ರವರಿ 27ರಂದು ಎಸ್​ಐಟಿ ಟೀಂ ಮುಂದಾಗಿತ್ತು. ಬೆಂಗಳೂರಿನ ಸೆಂಟ್ರಲ್ ಕಾಲೇಜು ಬಳಿಯ ಮೆಟ್ರೋ ನಿಲ್ದಾಣದ ಬಳಿ ವಕೀಲರ ಜೊತೆಯಲ್ಲಿದ್ದ ಅವರನ್ನು ಬಂಧಿಸಲು ಮುಂದಾಗಿದ್ದರು. ಆದರೆ ಎಸ್​ಐಟಿ ಟೀಂ ಅಧಿಕಾರಿಗಳನ್ನು ನೋಡುತ್ತಿದ್ದಂತೆ ಶ್ರೀಧರ್ ಅವರು ಎಸ್ಕೇಪ್ ಆಗಲು ಯತ್ನಿಸಿದ್ದರು. ಈ ವೇಳೆ ಬೆನ್ನಟ್ಟಿದ್ದ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಎಸ್​ಐಟಿ ಅಧಿಕಾಗಳ ಮೇಲೆಯೇ ಕಾರು ಹತ್ತಿಸಿ ಪರಾರಿಯಾಗಿದ್ದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles