Wednesday, September 25, 2024
spot_img

ಬಂದಿದೆ ಚುನಾವಣೆ ಎಂಬ ಪ್ರಜಾಪ್ರಭುತ್ವದ ಹಬ್ಬ!

ಬಂದಿದೆ ಚುನಾವಣೆ ಎಂಬ ಪ್ರಜಾಪ್ರಭುತ್ವದ ಹಬ್ಬ

ಭಾರತ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಇಂದು ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಒಂದು ಯಶಸ್ವಿ ಪ್ರಭುತ್ವ ಮಾದರಿ ಎನ್ನುವುದಕ್ಕೆ ಮೂಲ ಕಾರಣ ಭಾರತದಂತಹ ದೇಶದಲ್ಲಿ ಪ್ರಜಾಪ್ರಭುತ್ವ ಮಾದರಿ ಸಫಲವಾಗಿರುವುದು ಮತ್ತು ಭಾರತೀಯರು ಈ ಮಾದರಿಯನ್ನು ಒಪ್ಪಿಕೊಂಡಿರುವುದರಿಂದ ಎನ್ನುವುದು ಅತಿಶಯೋಕ್ತಿ ಅಲ್ಲ.

ಇಂದು ಕೇಂದ್ರ ಚುನಾವಣಾ ಆಯೋಗ, ನಾವೆಲ್ಲರೂ ಕೂತುಹಲದಿಂದ ಕಾಯುತ್ತಿದ್ದ 2024ರ ಲೋಕಸಭೆ ಚುನಾವಣೆಗೆ ಶನಿವಾರ ಮುಹೂರ್ತ ನಿಗದಿ ಮಾಡಿದೆ. ಈ ಬಾರಿಯ ಚುನಾವಣೆ ಏಪ್ರಿಲ್ 19 ರಿಂದ, 7 ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಘೋಷಣೆ ಮಾಡಿದೆ. ಇದೆ ಸಂದರ್ಭದಲ್ಲಿ ಚುನಾವಣಾ ಆಯೋಗ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ವಿಧಾನಸಭೆಗಳಿಗೆ ಅವಧಿಪೂರ್ಣ ಚುನಾವಣೆಯನ್ನು ಘೋಷಣೆ ಮಾಡಿದೆ.

ಇಂದಿನ ಲೆಕ್ಕಾಚಾರದ ಪ್ರಕಾರ ದೇಶದಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದಾರೆ. ಇದು 2019 ಕ್ಕೆ ಹೋಲಿಸಿದರೆ ಏಳು ಕೋಟಿ ಇಪ್ಪತೆಂಟು ಲಕ್ಷಕ್ಕೂ ಅಧಿಕ. ಇದರಲ್ಲಿ ಮಹಿಳಾ ಮತದಾರ ಸಂಖ್ಯೆ 47.1 ಕೋಟಿ ಸುಮಾರು 1.8 ಕೋಟಿ ಮತದಾರರಿಂದ ಮೊದಲ ಬಾರಿಗೆ ಮತ ಚಲಾವಣೆ ಮಾಡಲಿದ್ದಾರೆ. ಒಟ್ಟು ಮತದಾರ ಪಟ್ಟಿಯಲ್ಲಿ ತೃತೀಯ ಲಿಂಗಿ ಮತದಾರರು ಎಂದುನೋಂದಾವಣೆ ಮಾಡಿದವರು48 ಸಾವಿರಕ್ಕೂ ಅಧಿಕ. 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಮತದಾರರಿದ್ದರೆ 18ರಿಂದ 19ನೇ ವಯಸ್ಸಿನ 1.8 ಕೋಟಿ ಗೂ ಅಧಿಕ ಮತದಾರರು ಮತ ಚಲಾಯಿಸಲಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ವಿದೇಶದಲ್ಲಿರುವ ಭಾರತೀಯರು ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.

ದೇಶದಾದ್ಯಂತ ಒಟ್ಟು 88,35,449 ವಿಶೇಷಚೇತನ ಮತದಾರರಿದ್ದು , ಇದರಲ್ಲಿ 52,65,076 ಪುರುಷ ವಿಶೇಷಚೇತನ ಮತದಾರರು, 35,69,933 ಮಹಿಳಾ ವಿಶೇಷಚೇತನ ಮತದಾರರು ಮತ್ತು 440 ತೃತೀಯಲಿಂಗಿ ವಿಶೇಷಚೇತನ ಮತದಾರರು ಇದ್ದಾರೆ. ಮಾರ್ಚ್ 10, 2024 ರಂತೆ, ಒಟ್ಟು 81,87,999 ಹಿರಿಯ ನಾಗರಿಕ ಮತದಾರರು 85 ವರ್ಷಕ್ಕೆ ಮೇಲ್ಪಟ್ಟವರಾದರೆ ಆದರಲ್ಲಿ 2,18,442 ಮತದಾರರು 100 ವರ್ಷಕ್ಕೆ ಮೇಲ್ಪಟ್ಟವರು.

ದೇಶದಾದ್ಯಂತ  ಗೊಂಡಾರಣ್ಯ, ಗಿರಿ ಶಿಖರ , ಕಣಿವೆ ಕಂದರಗಳಾಚೆಯೂ ಸೇರಿದಂತೆ 10.5 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಿ ಲೋಕತಂತ್ರದ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಸರ್ವರಿಗೂ ಅವಕಾಶ ನೀಡಲಿದೆ. ದೇಶದಾದ್ಯಂತ  ಸುಮಾರು 1.5 ಕೋಟಿಗೂ ಅಧಿಕ ಸಿಬ್ಬಂದಿಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ದೇಶದ ವಿರೋಧ ಪಕ್ಷಗಳು ತಮ್ಮ ಪ್ರತಿ ಸೋಲಿನ ನಂತರ ದೂಷಣೆ ಮೊದಲಿಗೆ ಮಾಡುವುದು EVM ಗಳ ಮೇಲೆ. ಸುಪ್ರೀಂ ಕೋರ್ಟಿನ ಆದೇಶದಂತೆ EVEM ಗಳ ದೃಢತೆ ಮತ್ತು ಖಚಿತತೆಯ ಪರೀಕ್ಷೆ ಮಾಡಿಸಿ, ಕೊಂಕು ಮಾತನಾಡುವವರಿಗೆ ಸವಾಲು ಹಾಕಿ ಚುನಾವಣಾ ಆಯೋಗ ಅಲ್ಲು ಸಫಲವಾಗಿದೆ. EVM ಬಗ್ಗೆ ಸುಖಾಸುಮ್ಮನೆ ಮಾತನಾಡುವ ದೇಶದ ವಿರೋಧ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು EVM ಪರೀಕ್ಷೆಗೆ ಕಳುಹಿಸದೆ ಸೋಲೊಪ್ಪಿಕೊಂಡಿದ್ದು ಚುನಾವಣಾ ಆಯೋಗ ಮತ್ತು ಪ್ರಜಾಪ್ರಭುತ್ವದ ಗೆಲುವು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 55 ಲಕ್ಷಕ್ಕೂ ಅಧಿಕ ಇವಿಎಂಗಳನ್ನು ಉಪಯೋಗ ಮಾಡುವ ಮುಖಾಂತರ  ಚುನಾವಣ ಕಾರ್ಯವನ್ನು ನಡೆಸಲಾಗುತ್ತದೆ.

ಚುನಾವಣಾ ಆಯೋಗ ದೇಶದ ಪ್ರತಿಯೊಬ್ಬ ಮತದಾರನಿಗೆ ಮತದಾನದ ಹಕ್ಕನ್ನು ಚಲಾಯಿಸಲು ಎಷ್ಟು ಸಿದ್ಧತೆ ಮಾಡಿಕೊಳ್ಳುತ್ತದೆ ಎಂದರೆ ಎನ್ನುವ ಮಾತಿನಂತೆ ಗುಜರಾತಿನ ಗಿರ್ ಅಭಯಾರಣ್ಯದ ಮಧ್ಯೆ ನೆಲೆಸಿರುವ ಏಕೈಕ ಮತದಾರನಿಗೆ ಚುನಾವಣಾ ಬೂತ್ ತೆರೆದು ಮತ ಚಲಾಯಿಸುವಂತೆ ಪ್ರೇರೇಪಿಸುತ್ತದೆ. ಮತದಾನ ಕಟ್ಟೆಯನ್ನು ಪ್ರವೇಶಿಸಲು 12 ವಿಧದ ಗುರುತಿನ ಚೀಟಿಯಲ್ಲಿ ಒಂದನ್ನು ನೀಡಿ ಮತದಾನ ಮಾಡಬಹುದಾಗಿದೆ.

ಬಹಳಷ್ಟು ಸಂಕೀರ್ಣತೆ ಹೊಂದಿರುವ ಭಾರತ ದೇಶದಲ್ಲಿ ಚುನಾವಣೆ ನಡೆಸುವುದು ಚುನಾವಣಾ ಆಯೋಗಕ್ಕೆ ಅತಿದೊಡ್ಡ ಸವಾಲಾಗಿದೆ. ಆ ಸವಾಲನ್ನು ಒಂದು ಚುನಾವಣೆಯ ನಂತರ ಇನ್ನೊಂದು ಚುನಾವಣೆಯಲ್ಲಿ ಯಶಸ್ಸನ್ನು ಸಾಧಿಸುವ ಮುಖೇನ ವಿಶ್ವದ ಅತಿ ದೊಡ್ಡ ಪ್ರಜಾಪಭುತ್ವ ರಾಷ್ಟ್ರಕ್ಕೆ ಗೌರವ ತಂದಿದೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles