Wednesday, September 25, 2024
spot_img

ಯದುವೀರ್ ಒಡೆಯರ್ ರಾಜಕೀಯ ಪ್ರವೇಶ​ ಸಾಧ್ಯತೆ: ರಾಜವಂಶಸ್ಥನ ಆಯ್ಕೆಗೆ ಬಿಜೆಪಿ ಮುಂದಾಗಿದ್ದಕ್ಕೆ ಕಾರಣ ಏನಿರಬಹುದು!?

ಯದುವೀರ್ ಒಡೆಯರ್ ರಾಜಕೀಯ ಪ್ರವೇಶ​ ಸಾಧ್ಯತೆ: ರಾಜವಂಶಸ್ಥನ ಆಯ್ಕೆಗೆ ಬಿಜೆಪಿ ಮುಂದಾಗಿದ್ದಕ್ಕೆ ಕಾರಣಗಳು ಇಲ್ಲಿವೆ

ಮುಂಬರುವ ಲೋಕಸಭೆ ಚುನಾವಣೆಗೆ ಮೈಸೂರಿನ ಹಾಲಿ ಸಂಸದ ಪ್ರತಾಪ್ ಸಿಂಹ ಕೈಬಿಟ್ಟು ರಾಜವಂಶಸ್ಥರಾದ ಯದುವೀರ್ ಒಡೆಯರ್​ಗೆ ಮಣೆ ಹಾಕಲು ಬಿಜೆಪಿ ಮುಂದಾಗಿದೆ ಎಂದು ವರದಿಯಾಗುತ್ತಿದೆ. 2 ಬಾರಿಯ ಸಂಸದ ಪ್ರತಾಪ್ ಅವರ ಬದಲು ಯದುವೀರ್ ಒಡೆಯರ್ ಅವರನ್ನೇ ಬಿಜೆಪಿ ಆಯ್ದುಕೊಳ್ಳಲು ಕಾರಣವೇನು? ಬಿಜೆಪಿಯ ಲೆಕ್ಕಾಚಾರ ಏನಿರಬಹುದು? ಇಲ್ಲಿದೆ ವಿವರ
ಮೈಸೂರು, ಮಾರ್ಚ್​ 13: ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್​ಗೆ (Yaduveer Wadiyar) ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಸ್ಪರ್ಧಿಸಲು ಬಿಜೆಪಿ (BJP) ಟಿಕೆಟ್ ನೀಡುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಹಾಲಿ ಸಂಸದ ಪ್ರತಾಪ್ ಸಿಂಹ ಟಿಕೆಟ್ ಕೈತಪ್ಪುವ ಆತಂಕದಲ್ಲಿ ಫೇಸ್​ಬುಕ್​ ಲೈವ್​ನಲ್ಲಿ ಬಂದು ಕಣ್ಣೀರು ಹಾಕಿರುವುದೂ ದೊಡ್ಡ ಸುದ್ದಿಯಾಗಿದೆ. ಈ ಮಧ್ಯೆ, ರಾಜಮನೆತನದ ಹಿರಿಮೆಯೊಂದಿಗೆ ಆರಾಮವಾಗಿದ್ದ ಯದುವೀರ್ ಒಡೆಯರ್ ರಾಜಕೀಯ ಪ್ರವೇಶಕ್ಕೆ ಕಾರಣಗಳೇನಿರಬಹುದು ಎಂಬ ಚರ್ಚೆಯೂ ಆರಂಭವಾಗಿದೆ. ಯದುವೀರ್ ಒಡೆಯರ್ ಅವರನ್ನೇ ಬಿಜೆಪಿ ಆಯ್ಕೆ ಮಾಡಲು (ಒಂದು ವೇಳೆ ಲೋಕಸಭೆ ಚುನಾವಣೆ ಟಿಕೆಟ್ ನೀಡಿದರೆ) ಕಾರಣಗಳು ಏನು?

ಯದುವೀರ್ ಒಡೆಯರ್ ಅವರನ್ನು ರಾಜಕೀಯಕ್ಕೆ ಕರೆತರಲು ಇರುವ ಮುಖ್ಯ ಕಾರಣ ಮೈಸೂರು ರಾಜಮನೆತನದ ಬಗ್ಗೆ ಅಲ್ಲಿನ ಜನರಿಗೆ ಇರುವ ಗೌರವ.

ಮೈಸೂರು ಚಾಮರಾಜನಗರ ಮಂಡ್ಯ ಹಾಸನ ಭಾಗದ ಜನರಿಗೆ ಯದುವಂಶದ ಬಗ್ಗೆ ಅಪಾರ ಗೌರವವಿದೆ.

ಮೈಸೂರು ಅರಸರ ಅಭಿವೃದ್ಧಿ ಕಾರ್ಯಗಳು, ದೂರದೃಷ್ಟಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 100 ವರ್ಷದ ಅಭಿವೃದ್ಧಿ ಚಿಂತನೆ ಬಗ್ಗೆ ಜನರಲ್ಲಿ ಪ್ರೀತಿ ಇದೆ.

ಕೆಆರ್​​ಎಸ್ ಜಲಾಶಯ, ವಿದ್ಯುತ್ ಉತ್ಪಾದನಾ ಘಟಕ, ಆಸ್ಪತ್ರೆಗಳು ಸೇರಿ ಹತ್ತು ಹಲವು ಕಾರ್ಖಾನೆಗಳ ಸ್ಥಾಪನೆಗೆ ಅರಸರ ಕೊಡುಗೆ ಇದೆ.

ಜನರು ಯದುವಂಶದವರನ್ನು ದೇವರ ಸ್ಥಾನದಲ್ಲಿ ನೋಡುತ್ತಿರುವುದು ಕೂಡ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಯೋಚಿಸಲು ಪ್ರಮುಖ ಕಾರಣವಾಗಿದೆ

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ರಾಜ್ಯದ ಬಿಜೆಪಿ ನಾಯಕರ ಜೊತೆಗೆ ಒಡೆಯರ್ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಒಡೆಯರ್​ಗೆ ಸಿಎಂ ಸಿದ್ದರಾಮಯ್ಯ ಜೊತೆಗೆ ಬಾಂಧವ್ಯ ಅಷ್ಟೊಂದು ಸರಿಯಿಲ್ಲ ಎನ್ನಲಾಗಿದೆ.

ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಅರಮನೆ ಸ್ವಾಧೀನ ಕಾಯ್ದೆ (PALACE ACQUISITION ACT ) ಜಾರಿಗೆ ತಂದಿದ್ದರು. ಹಲವು ಸಂದರ್ಭಗಳಲ್ಲಿ ರಾಜಮನೆತದ ವಿರುದ್ದವಾಗಿ ಪರೋಕ್ಷ ವಾಗ್ದಾಳಿ ನಡೆಸಿದ್ದರು.

ಯದುವೀರ ಈ ಹಿಂದೆ ಬಿಜೆಪಿ ನಾಯಕರ ಜೊತೆ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆದರೆ ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ.

ಅಂತರಾಷ್ಟ್ರಿಯ ಯೋಗ ದಿನಾಚರಣೆ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಸೇರಿ ಹಲವಾರು ಬಿಜೆಪಿ ಪ್ರಮುಖರ ಜೊತೆ ಒಡೆಯರ್ ಭಾಗಿಯಾಗಿದ್ದಾರೆ.

ಜನರಿಗೆ ಯದುವೀರ ರಾಜಪರಂಪರೆ ಮುಂದುವರಿಸಿದರು ಎಂಬ ಪ್ರೀತಿ ಇದೆ. ಜತೆಗೆ, ಯದುವೀರ ಯಾವುದೇ ವಿವಾದಗಳಿಗೆ ಸಿಲುಕದೆ ಇರುವುದು ಅವರ ಪ್ಲಸ್ ಪಾಯಿಂಟ್ ಆಗಿದೆ.

ತೂಕ ಹಾಗೂ ಪ್ರಬುದ್ದವಾದ ಮಾತು. ಇದುವರೆಗೂ ರಾಜಕೀಯವಾಗಿ ಯಾರನ್ನೂ ಟೀಕಿಸದೇ ಅಂತರ ಕಾಯ್ದುಕೊಂಡಿದ್ದಾರೆ.

ಪಕ್ಷಾತೀತವಾಗಿ ಯದುವಂಶ ಹಾಗೂ ಯದುವೀರ ಅವರಿಗೆ ಅಭಿಮಾನಿಗಳು ಇದ್ದಾರೆ. ಶಿಕ್ಷಣ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳ ಬಗ್ಗೆ ಕಳಕಳಿ‌ ಹೊಂದಿದ್ದಾರೆ.

ಯದು ವಂಶದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಾಲ್ಕು ಬಾರಿ ಸಂಸದರಾಗಿದ್ದರು. 1984, 1986, 1996, 1999 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಸಂಸದರಾಗಿದ್ದರು. ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ 1991 ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಚಂದ್ರಪ್ರಭ ಅರಸ್ ವಿರುದ್ಧ ಸೋಲು ಕಂಡಿದ್ದರು.

ಮಹಾರಾಜರನ್ನೇ ರಾಜಕೀಯಕ್ಕೆ ತಂದ ಪಕ್ಷದ ಮುಖಂಡರಿಗೆ ನಮೋ! ಯದುವೀರ್​​ ರಾಜಕೀಯ ಪ್ರವೇಶ ಬಗ್ಗೆ ಪ್ರತಾಪ್​ ಸಿಂಹ ಟಾಂಗ್

ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಈ ಬಾರಿ ಪ್ರತಾಪ್ ಸಿಂಹ (Pratap Simha) ಬದಲು ರಾಜವಂಶಸ್ಥರಾದ ಯದುವೀರ್ ಒಡೆಯರ್​ಗೆ ಬಿಜೆಪಿ (BJP) ಟಿಕೆಟ್ ನೀಡಲಿದೆ ಎಂಬ ಬಗ್ಗೆ ವರದಿಗಳಾಗಿವೆ. ಈ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಯದುವೀರ್​ಗೆ ಟಿಕೆಟ್ ಕೊಟ್ಟರೆ ಸ್ವಾಗತ. ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡುತ್ತೇನೆ. ಅರಮನೆಯ ದರ್ಬಾರಿನಲ್ಲಿರುವ ಬದಲು ಸಾಮಾನ್ಯ ಪ್ರಜೆಗಳಂತೆ ಬದುಕಲು ಬಂದರೆ ಸ್ವಾಗತಿಸದಿರಲು ಆಗುತ್ತದೆಯೇ,

ರಾಜ-ಪ್ರಜೆ ನಡುವಣ ವ್ಯತ್ಯಾಸ ಬದಿಗಿಟ್ಟು ಬಂದರೆ ಅವರಿಗೆ ಸ್ವಾಗತ. ರಾಜರೇ ಪ್ರಜೆಗಳ ಜೊತೆ ಇರಲು ಬಂದರೆ ನನ್ನ ಸ್ವಾಗತ. ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರದ ನಡುವೆ ವ್ಯಾಜ್ಯಗಳಿವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿ ಆಗಿ ಆ ಆಸ್ತಿಗಳನ್ನು ಜನರಿಗೆ ಬಿಟ್ಟು ಕೊಡಿಸುತ್ತಾರೆ. ಅರಮನೆಯಲ್ಲಿ ಅರಾಮವಾಗಿದ್ದ ವ್ಯಕ್ತಿ ಹೋರಾಟಕ್ಕೆ ಬರುತ್ತಿದ್ದಾರೆ. ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಡಲು ಬೀದಿಗೆ ಬಂದ್ರೆ ಸಂತೋಷ. ಅರಮನೆ ವೈಭೋಗ ಬೇಡ, ಹೋರಾಟಕ್ಕೆ ಬರುತ್ತೇನೆ ಅಂದರೆ ಸ್ವಾಗತ. ಠಾಣೆಗೆ ಬಂದು ರಾಜರು ಸಮಸ್ಯೆ ಬಗೆಹರಿಸಿದರೆ ಸಂತೋಷ ಅಲ್ವಾ ಎಂದು ಅವರು ಹೇಳಿದರು.

ಸುಖದ ಸುಪತ್ತಿಗೆಯಲ್ಲಿದ್ದವರನ್ನು ರಾಜಕೀಯಕ್ಕೆ ತಂದವರಿಗೆ ಧನ್ಯವಾದ. ಮಹಾರಾಜರನ್ನೇ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ ಎಂದು ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles