ಹೊಸ ಮೇಲ್ಸೇತುವೆಗೆ ಲಾರಿ ಡಿಕ್ಕಿ!?

0
166

ಹೊಸ ಮೇಲ್ಸೇತುವೆಗೆ ಲಾರಿ ಡಿಕ್ಕಿ!

ಶಿವಮೊಗ್ಗದ ವಿದ್ಯಾನಗರ  ಮೇಲ್ಸೇತುವೆ ಉದ್ಘಾಟನೆಯಾಗಿ ಹತ್ತು ದಿನ ಕಳೆಯುವುದರಲ್ಲಿ ಸೇತುವೆ ಮೇಲೆ ಅಪಘಾತ ಸಂಭವಿಸಿದೆ. ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆ  ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಹೊಳೆಹೊನ್ನೂರು ದಿಕ್ಕಿನಿಂದ ಬಂದ ಲಾರಿಯೊಂದು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಲಾರಿ ಮುಂಭಾಗ ಜಖಂ ಆಗಿದೆ. ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ಲಾರಿಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ ಬೆಳಗಿನ ಹೊತ್ತಿನಲ್ಲಿ ಆಕ್ಸಿಡೆಂಟ್ ಆಗಿರುವುದರಿಂದ ಇನ್ನು ರಾತ್ರಿಯ ಹೊತ್ತಿನಲ್ಲಿ ಓಡಾಡುವ ವೆಹಿಕಲ್ಗಳ ಗತಿ ಏನು ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ