ಬೋರ್ ಡ್ರಿಲ್ಲಿಂಗ್ ಮಾಡಲು ಯಥೇಚ್ಛ ಹಣಕ್ಕೆ ಬೇಡಿಕೆ ಇಟ್ಟ  ತಮಿಳ್ನಾಡಿನ ಬೋರ್ ಮಾಲಿಕ!?

0
163

ಬೋರ್ ಡ್ರಿಲ್ಲಿಂಗ್ ಮಾಡಲು ಯಥೇಚ್ಛ ಹಣಕ್ಕೆ ಬೇಡಿಕೆ ಇಟ್ಟ  ತಮಿಳ್ನಾಡಿನ ಬೋರ್ ಮಾಲಿಕ

 

ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ ಗ್ರಾಮದಲ್ಲಿ  ಬೋರ್ ವಿಫಲವಾಗಿ ಅಡಿಕೆ ತೋಟ ಒಣಗಿ ಹೋಗಿದ್ದು ಮಂಜುನಾಥ ರಾಕ್ ಡ್ರಿಲ್ಸ ಲಾರಿ
( ಮೂಲ ತಮಿಳುನಾಡು)ಡ್ರಿಲ್ಲಿಂಗ್ ಮಾಡಲು ತೋಟಕ್ಕೆ ಕರೆಸಿದ ಬೋರ್ ಲಾರಿ ಅವರು ದುಬಾರಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಗ್ರಾಮದ ರೈತರು  ಹೋರಾಟ ಆರಂಭಿಸಿದ್ದು   ಲೋಕಲ್ ಏಜೆನ್ಸಿ ಅವನಾದ ರಾಜೇಶ್ ಹೊಸನಗರ ಇದಕ್ಕೂ ನಮಗೂ ಸಂಬಂಧವಿಲ್ಲ ಬೋರ್ ಲಾರಿ ಮಾಲಿಕ ತಮಿಳ್ನಾಡಿನವನಾಗಿದ್ದು ಅವನು ಹೇಳಿದ ರೀತಿಯಲ್ಲಿ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ವಿವರಣೆ ನೀಡಿ ಮಂಜುನಾಥ ರಾಕ್ ಡ್ರಿಲ್ಸ್ ತಮಿಳುನಾಡಿನ ಲಾರಿ ಮಾಲೀಕರಿಗೆ ಫೋನ್ ಕರೆ ಮಾಡಿ ರೈತರಿಗೆ ನೀಡುತ್ತಾನೆ ಮಾಲಿಕ ನನ್ನದು 151 ಲಾರಿಗಳು ಇವೆ ನಿಮ್ಮಲ್ಲಿಗೆ ಕಳಿಸಿರುವುದು 151ನೇ ಲಾರಿ ನಾವು ಕೇಳಿದಷ್ಟು ಹಣ ನೀಡಿ ಬೋರ್ ಕೊರಸಿ ಎಂದು ಫೋನಲ್ಲೇ ಅವಾಜ್ ನೀಡುತ್ತಾನೆ ಸ್ಥಳದಲ್ಲಿದ್ದ  ರೈತರು   ಇದರಿಂದ ಕೋಪಿತಗೊಂಡು ಹೋರಾಟ ಹಾದಿ ಹಿಡಿಯುತ್ತಾರೆ  ಸ್ಥಳದಲಿದ್ದ  ಏಜೆನ್ಸಿಯ ರಾಜೇಶ್ ಹೊಸನಗರ  ಅಲ್ಲಿಂದ ಕಾಲ್ಕಿತ್ತಿದ್ದಾನೆ 

ರೈತರು ಸ್ಥಳದಿಂದ ಯಾವುದೇ ಕಾರಣಕ್ಕೂ ಲಾರಿಯನ್ನು ಬಿಡುವುದಿಲ್ಲ ಎಂದು ಹೋರಾಟಕ್ಕಿಳಿದಿದ್ದಾರೆ,
ಯಾವುದೇ ಕಾರಣಕ್ಕೂ ದುಬಾರಿ ಹಣ ನೀಡುವುದಿಲ್ಲ  ಹಾಗೂ ಬೋರ್ ಡ್ರಿಲ್ಲಿಂಗ್ ಮಾಡಿದ ನಂತರ ಮನಸ್ಸಿಗೆ ಬಂದಷ್ಟು ಕೇಸಿಂಗ್ ಪೈಪನ್ನು ಅಳವಡಿಸಿ ಹೆಚ್ಚು ಹೆಚ್ಚು ಹಣವನ್ನು ರೈತರಿಂದ ಪಿಕ್ಕುತಿದ್ದಾರೆ ಹಾಗೂ ಯಾವುದೇ ತರದ ಬಿಲ್ ಗಳನ್ನು ರೈತರಿಗೆ ನೀಡುವುದಿಲ್ಲ ರೈತರು ವಿಚಾರಿಸಿದರೆ ಬೋರ್ ಕೊರೆಯುವುದೇ ಕಷ್ಟವಾಗಿದೆ ಕೇಳಿದಷ್ಟು ಮುಂಗಡ 50,000 ಹಣ ನೀಡಿ ಎಂದು ದಬಾಯಿಸುತ್ತಾರೆ
ಕೆಲವು ರೈತರು ಕೇಳಿದಷ್ಟು ಹಣ ನೀಡಿ ಸುಮ್ಮನಾಗುತ್ತಿದ್ದಾರೆ ಇದನ್ನೇ ಬಂಡವಾಳ ಮಾಡಿಕೊಂಡ ಏಜೆನ್ಸಿ ಯವರು ಹಾಗೂ ತಮಿಳುನಾಡಿನ ಲಾರಿ ಮಾಲೀಕರು ಪ್ರಶ್ನೆ ಮಾಡಿದ ರೈತರಿಗೆ ಯಾವುದೇ ಕಾರಣಕ್ಕೂ ಬೋರ್ ಡ್ರಿಲ್ಲಿಂಗ್ ಮಾಡದೆ  ರೈತರಿಗೆ ಕಾಟ ನೀಡುತ್ತಿದ್ದಾರೆ

ಈಗಲಾದರೂ  ಜಿಲ್ಲಾ ಆಡಳಿತದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಆಗುತ್ತಿರುವ ಅನ್ಯಾಯಕ್ಕೆ  ನ್ಯಾಯ ಕೊಡಿಸಬೇಕು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬೇಕು ಸ್ಥಳದಲ್ಲಿರುವ ಬೋರ್ ಲಾರಿ ಮಾಲೀಕನಿಗೆ ಎಚ್ಚರಿಕೆ ನೀಡಿ ಬೆಲೆ ನಿಗದಿ ಮಾಡಿ  ಎನ್ನುವುದು ರೈತರ ಆಗ್ರಹವಾಗಿದೆ.