ಅಡಿಕೆ ತೋಟದಲ್ಲಿ ಅಗ್ನಿ ಅವಘಡ!?

0
14

ಶಿವಮೊಗ್ಗ ತಾಲೂಕು ಹಾರನಹಳ್ಳಿ ಹೋಬಳಿ ಕೊನಗವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯರೇಕೊಪ್ಪ ಗ್ರಾಮದ   ರುಪ್ಲ ನಾಯ್ಕ ಇವರಿಗೆ ಸೇರಿದ ಕೊನಗವಳ್ಳಿ ಗ್ರಾಮದ ಸರ್ವೆ ನಂಬರ್ 56 ರಲ್ಲಿ 1 ಎಕರೆ 20 ಗುಂಟೆ ಜಮೀನಿನಲ್ಲಿ ದಿನಾಂಕ 1.3.2024 ರ ಮಧ್ಯಾಹ್ನ ಸುಮಾರು 4 ಗಂಟೆಗೆ ಐದು ವರ್ಷ ಆಗಿರುವ ಅಡಿಕೆ ತೋಟ ದಲ್ಲಿ ಆಕಸ್ಮಿಕ ಬೆಂಕಿ ಬಿದ್ದು ಸುಮಾರು ಅರ್ಧ ಅಡಿಕೆ ತೋಟ, ಡ್ರಿಪ್ ಪೈಪು, ಸ್ಪಿಂಕ್ಲರ್ಗಳು ಸುಟ್ಟು ಹೋಗಿವೇ

ಅಗ್ನಿಶಾಮಕದಳದ ಸಿಬ್ಬಂಧಿಗಳು ಬಂದು ಬೆಂಕಿಯನ್ನು
ನಂದಿಸದಿದ್ದರೆ ಅಕ್ಕ ಪಕ್ಕದ ಅಡಿಕೆ ತೋಟಕ್ಕೂ ಬೆಂಕಿ ಹರಡುವ ಸಾಧ್ಯತೆ ಇತ್ತು ಸಮಯಕ್ಕೆ ಬಂದಅಗ್ನಿಶಾಮಕ
ದಳದಿಂದ ಹೆಚ್ಚಿನ ಅವಘಡವು ತಪ್ಪಿದೆ. ಈ ಘಟನೆಯ ಕುರಿತು  ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಯಾದ ರಾಜು ಅವರಿಗೆ ಸಾತ್ವಿಕ  ನುಡಿ  ಪತ್ರಿಕೆ ಸಂಪರ್ಕಿಸಿದಾಗ  ಅವರು ಬೇಸಿಗೆ ಸಮಯ ವಾಗಿರುವುದರಿಂದ ಹಾಗೂ ಉಷ್ಣಾಂಶ ಅತಿ ಹೆಚ್ಚು ಇರುವುದರಿಂದ ಹಲವು ಮುನ್ನೆಚ್ಚರಿಕೆ ಬಗ್ಗೆ   ತಿಳಿಸಿದರು, ರೈತರು ತೋಟದ ಅಕ್ಕಪಕ್ಕ ಮೆಕ್ಕೆಜೋಳ ಬೆಳೆದಿದ್ದರೆ ಅದರ ದಂಟನ್ನು  ಕ್ಲೀನಿಂಗ್ ಮಾಡಿಕೊಳ್ಳಬೇಕು. ತೋಟದಲ್ಲಿ ಒಣಗಿದ ಹುಲ್ಲು ಇದ್ದರೆ ಅದನ್ನು  ತೋಟದಿಂದ ಹೊರಗಡೆ ಹಾಕಬೇಕು, ತೋಟದಲ್ಲಿ ಗಾಜಿನ ವೇಸ್ಟೇಜ್ ಪೀಸ್ ಗಳು ಎಲ್ಲಾದರೂ ಇದ್ದರೆ ತಕ್ಷಣ ಅದನ್ನು ತೋಟದಿಂದ ಹೊರಗಡೆ ಹಾಕಬೇಕು ಕಾರಣ ಗ್ಲಾಸ್ ಸೂರ್ಯನ ಕಿರಣಕ್ಕೆ ರಿಪ್ಲೆಕ್ಟ್ ಆಗುವುದರಿಂದ ಬೆಂಕಿ ತಗಲುವ ಸಾಧ್ಯತೆ ಅತಿ ಹೆಚ್ಚು, ಹಾಗೂ ಬಿಡಿ ಸಿಗರೇಟ್ ಸೇದು ವವರು ಅತಿ ಹೆಚ್ಚು ಮುಂಜಾಗ್ರತೆ ಕ್ರಮ ವಹಿಸಬೇಕು ಬಿಡಿ ಸಿಗರೇಟ್ ಸೇದಿದ ಮೇಲೆ ಅದನ್ನು ಯಲ್ಲೆಂದರಲ್ಲಿ ಎಸೆಯಬಾರದು ಅದರಿಂದಲೂ ಅತಿ ಹೆಚ್ಚು ಬೆಂಕಿಯ ಅವಘಡಗಳು ಸಂಭವಿಸುತ್ತಿವೆ, ಬೆಂಕಿ ನಂದಿಸಲು ತೋಟಕ್ಕೆ ಅಗ್ನಿಶಾಮಕ ವಾಹನ ತಲುಪಲು ಹಲವು ಕಡೆ ರಸ್ತೆಯ ಸಮಸ್ಯೆ ಬಹಳ ಇರುತ್ತದೆ ಹಾಗಾಗಿ ರೈತರು ತಮ್ಮ ಅಡಿಕೆಯ ತೋಟಗಳ ಬಗ್ಗೆ   ಬೆಂಕಿಯ ಬಗ್ಗೆ ಹೆಚ್ಚಿನ ಸುರಕ್ಷತೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಬೆಂಕಿಯ ಅವಘಡ ಆದಮೇಲೆ ಸುರಕ್ಷತೆಯ ಬಗ್ಗೆ ಯೋಚನೆ ಮಾಡುವ ಬದಲು ಹಲವು ಸುರಕ್ಷತೆಯ ಬಗ್ಗೆ ಗಮನಹರಿಸುವ ಬಗ್ಗೆ ವಿನಂತಿಸಿದರು.