ಉರಗ ಸಂರಕ್ಷಕ ಸ್ನೇಕ್ ಕಿರಣ್ ನಾಗರಹಾವು ಸಂರಕ್ಷಣೆ

0
95

ಐದೂವರೆ ಅಡಿ ಉದ್ದದ ಭಾರೀ ಗಾತ್ರದ ನಾಗರಹಾವು ಸಂರಕ್ಷಣೆ

ಶಿವಮೊಗ್ಗ ನಗರದ ಶಂಕರಮಠ ರಸ್ತೆಯಲ್ಲಿರುವ ವಾಹನಗಳ ಶೋ ರೂಂ ಬಳಿ ಭಾರೀ ಗಾತ್ರದ ನಾಗರಹಾವನ್ನು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸುರಕ್ಷತವಾಗಿ ಸಂರಕ್ಷಸಿದ ಘಟನೆ ನಡೆದಿದೆ. ಶಂಕರ ಮಠ ರಸ್ತೆಯ ಬಜಾಜ್ ಶೋ ರೂಂ ನಡುವಿನ ಕಾಂಪೌಂಡ್ ಗೋಡೆ ಮೇಲಿನ ಮಲ್ಲಿಗೆ ಹೂವಿನ ಗಿಡದ ಮೇಲೆ ಹಾವು ಕಂಡುಬಂದಿತ್ತು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಕಿರಣ್‌ ಅವರು ಅತ್ಯಂತ ಸುರಕ್ಷತವಾಗಿ ಹಾವನ್ನು ಸಂರಕ್ಷಸುವಲ್ಲಿ ಯಶಸ್ವಿಯಾಗಿದ್ದಾರೆ.