ಶಿವಮೊಗ್ಗ ತಾಲೂಕಿನ ಸಿದ್ಲಿಪುರ ವಿವಾಹಿತೆ ಕಸ್ತೂರಿ ವಿಷ ಸೇವನೆ!?

0
396

ಶಿವಮೊಗ್ಗ ತಾಲೂಕಿನ ಮುದ್ದಿನ್ಕೊಪ್ಪ ಗ್ರಾಮ ಪಂಚಾಯತಿ ಸಿದ್ಲೀಪುರದಲ್ಲಿ ಪತ್ತಿಯನ್ನ ಚೆನ್ನಾಗಿ ನೋಡಿಕೊಳ್ಳದ ಪತಿಯೊಬ್ಬ ಪತಿ ಮತ್ತು ಪತ್ನಿಯ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಕಸ್ತೂರಿ (24)ವಿಷಸೇವಿಸಿರುವ ಘಟನೆ ತಾಲೂಕಿನ ಸಿದ್ಲೀಪುರದಲ್ಲಿ ನಡೆದಿದ್ದು,

ಕಸ್ತೂರಿ (24) ಎಂಬ ವಿವಾಹಿತ ಮಹಿಳೆಗೆ ಪತಿ ಮಂಜುನಾಥ್ ವಿಷ ಉಣಸಿವಿಷ ಉಣಿಸಿ ಪತ್ನಿಯನ್ನ ಆಸ್ಪತ್ರೆಗೆ ಕರೆತರುವಾಗ ಸಾವನ್ನಪ್ಪಿದ್ದಾಳೆ. ಮಗು ಚಿರಾಗ್ ಸಾವು ಮತ್ತು ಬದುಕಿನ ನಡುವೆ ಹೋರಾಡುತ್ತಿದೆ.  ಕಸ್ತೂರಿ ಸಾವಿಗೆ ಪತಿಯೇ ಕಾರಣವೆಂದು ಮೃತಳ ಕುಟುಂಬ ಆರೋಪಿಸಿದೆ.

ಕಸ್ತೂರಿಯ ತವರು ಮನೆ ತಾವರೆಕೊಪ್ಪದ ತಂದೆ ಪೆರಿ ಸ್ವಾಮಿಗೆ ಮೂವರು ಮಕ್ಕಳಿದ್ದು ಎರಡು ಹೆಣ್ಣು ಒಂದು ಗಂಡು ಮಕ್ಕಳಿದ್ದಾರೆ.

ಐದು ವರ್ಷದ ಹಿಂದೆ ಸಿದ್ಲೀಪುರದ ಮಂಜುನಾಥ್ ಎಂಬುವನಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದಾಗ ಚೆನ್ನಾಗಿ ನೋಡಿಕೊಂಡಿದ್ದ ಮಂಜುನಾಥ್ ಮೊದಲನೇ ಹೆಣ್ಣು ಮಗು ಸೀಳು ತುಟಿಯೊಂದಿಗೆ ಹುಟ್ಟಿದ ವೇಳೆಯಿಂದ ಹಿಂಸೆ ಆರಂಭಿಸಿರುವುದಾಗಿ ಮೃತಳ ಕುಟುಂಬ ಆರೋಪಿಸಿದೆ. ಮಗುವಿನ ಸೀಳುತುಟಿ ಆಪರೇಷನ್ ಗೆ ಕಸ್ತೂರಿ ತವರು ಮನೆಯವರೆ ಐದು ಲಕ್ಷ ಖರ್ಚು ಮಾಡಿರುವುದಾಗಿ ಮೃತಳ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಂಜುನಾಥ್ ಮತ್ತು ಕಸ್ತೂರಿಗೆ ಎರಡು ಮಕ್ಕಳಿವೆ. ಮೊದಲನೇ ಮಗು ಹೆಣ್ಣು ಮಗು ಹುಟ್ಟಿದ್ದರೆ ಎರಡನೇ ಮಗು ಗಂಡಾಗಿದೆ. ಸೀಳುತುಟಿ ಮಗು ಹುಟ್ಟಿದರಿoದ ಕೋಪಿಸಿಕೊಂಡ  ಮಂಜ ಹೆಂಡತಿಗೆ ಮತ್ತೆ ಹಿಂಸೆ ಆರಂಭಿಸಿರುವುದಾಗಿ  ಕಸ್ತೂರಿಗೆ ತಂದೆ ಗೆ ಫೋನ್ ಮಾಡಿ  ತಿಳಿಸಿದ್ದಾರೆ , ಎಂಬುದು ತಂದೆಯ ಆರೋಪ.  

ಮುದ್ದಿನಕೊಪ್ಪ ಗ್ರಾಪಂ ಸದಸ್ಯ ಹಾಗೂ ಸಿದ್ಲೀಪುರದ ನಿವಾಸಿ  ಪಂಚಾಯಿತಿ ಸದಸ್ಯಚಂದ್ರನಾಯ್ಕನ ಬಳಿ ಮಂಜುನಾಥ್ ಕೂಲಿ ಕೆಲಸಕ್ಕಿದ್ದನು. ಚಂದ್ರನಾಯ್ಕನ ಮನೆ ಕೆಲಸಕ್ಕೆ ಕಸ್ತೂರಿಗೆ ಕೂಲಿ ಕೆಲಸಕ್ಕೆ ಹೋಗಲು ಒತ್ತಾಯಿಸುತ್ತಿದ್ದ  ಚಂದ್ರನಾಯ್ಕ್ ಬಳಿ ಕೆಲಸ ಮಾಡಲು ನಿರಾಕರಿಸುತ್ತಿದ್ದಳು. ಇದರಿಂದ ಪ್ರತಿದಿನ ಗಲಾಟೆಯಾಗುತ್ತಿತ್ತು  ಇದಕ್ಕೆ ಚಂದ್ರನಾಯಕನ
ಕುಮ್ಮಕ್ಕಿನಿಂದ ನಿನ್ನೆ ಮದ್ಯಾಹ್ನ 3-50 ಗೆ ಕವಿತಾ ಮತ್ತು 6 ತಿಂಗಳ ಗಂಡು ಮಗುವಿಗೆ ವಿಷ ಉಣಿಸಿ ಕೊಲೆ ಮಾಡಿ ಬೈಕ್ ನಲ್ಲಿ ಇಬ್ಬರನ್ನೂ ಮೆಗ್ಗಾನ್ ಗೆ ಕರೆತಂದಿದ್ದಾನೆ. ತಾಯಿ ಸಾವನ್ನಪ್ಪಿದ್ದಾಳೆ. ಮಗು ಚಿರಾಗ್ ಮೆಗ್ಗಾನ್ ನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಎಂದು ತಂದೆ ಪೆರಿಸ್ವಾಮಿ ಆರೋಪಿಸಿದ್ದಾರೆ.