ನೇರ ನೇಮಕಾತಿ ಅಥವಾ ಸಮಾನ ಕೆಲಸಕ್ಕೆ ಸಮಾನ ವೇತನ!?

0
116

ಕರ್ನಾಟಕ ನೀರು ಸರಬರಾಜು ನೌಕರರಿಂದ ನೇರ ನೇಮಕಾತಿಗಾಗಿ- ಸಚಿವ ಬೈರತಿ ಸುರೇಶ್ ರವರಿಗೆ ಮನವಿ

ರಾಜ್ಯದ 7 ಮಹಾನಗರ ಪಾಲಿಕೆಗಳಲ್ಲಿ ಹೊರಗುತ್ತಿಗೆ ನೀರು ಸರಬರಾಜು ವಿಭಾಗದಲ್ಲಿ ನಿರ್ವಹಿಸುತ್ತಿರುವ ಸುಮಾರು 1450 ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಅಥವಾ ನೇರ ನೇಮಕಾತಿಯಲ್ಲಿ ಮಂಜೂರು ಮಾಡಬೇಕೆಂದು ಮಾನ್ಯ ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರನ್ನು ಅವರ ನಿವಾಸದಲ್ಲಿ ಕರ್ನಾಟಕ ರಾಜ್ಯ ನೀರು ಸರಬರಾಜು ನೌಕರರು ಭೇಟಿ ಮಾಡಿ ಮನವಿ ಮಾಡಿದರು

*ಮಾನ್ಯ ಸಚಿವರಾದ ಬೈರತಿ ಸುರೇಶ್ ಅವರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೂಡಲೇ ಸಕಾರಾತ್ಮಕವಾದ ನಿರ್ಧಾರ ಕೈಗೊಳ್ಳಲಾಗುವುದೆಂದು ತಿಳಿಸಿದರು

*ಕರ್ನಾಟಕ ರಾಜ್ಯ ನೀರು ಸರಬರಾಜು ನೌಕರರ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಶಿವಮೊಗ್ಗದ ಕಿರಣ್ , ಸತೀಶ್ ,ದಶರಥ ,ರಾಧಾಕೃಷ್ಣ ,ನಂಜುಂಡ ಹಾಗೂ ಇತರ ಪದಾಧಿಕಾರಿಗಳು ಹಾಗೂ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್  ಮುಖಂಡರಾದ ಕೆ. ರಂಗನಾಥ್, ಎಂ.ಪ್ರವೀಣ್ ಕುಮಾರ್, ಹೆಚ್ .ಪಿ .ಗಿರೀಶ್, ಇನ್ನಿತರರು ಇದ್ದರು.