ದಾರಿ ತಪ್ಪಿದ ಅಗ್ನಿಶಾಮಕ ಠಾಣೆ ವಾಹನ!?

0
433

ಶಿವಮೊಗ್ಗ ತಾಲೂಕ ಮುದ್ದಿನಕೊಪ್ಪ ಶಿವಮೊಗ್ಗದಿಂದ 12 ಕಿಲೋಮೀಟರ್ ಇರುವ ಗ್ರಾಮಕ್ಕೆ ಕರೆ ಮಾಡಿ ಸುಮಾರು ಮುಕ್ಕಾಲು ಗಂಟೆ ಆದರೂ ಬೆಂಕಿ ಹತ್ತಿದ ಜಾಗಕ್ಕೆ ಬರದ ಅಗ್ನಿಶಾಮಕ ವಾಹನ ಲೈನ್ ಸಫಾರಿ ಮುಂಭಾಗದ 100 ಮೀಟರ ಬಲಭಾಗಕ್ಕೆ ತಿರುಗಬೇಕಾಗಿದ್ದ ವಾಹನ ಸುಮಾರು ಎಂಟು ಕಿಲೋಮೀಟರ್ ಮುಂದೆ ಹೋಗಿ ಸ್ಥಳಕ್ಕೆ ಬರುವಷ್ಟರಲ್ಲಿ 4 ಎಕರೆ ತೋಟ ಸಂಪೂರ್ಣ ಬೆಂಕಿಯ ಕೆನ್ನಾಲೆಗೆ ಸುಟ್ಟು ಬಸ್ಮವಾಗಿತ್ತು ಹಾಗಾದರೆ ಗೂಗಲ್ ಮ್ಯಾಪ್ ಸಹಾಯ ಪಡೆಯಬಹುದಿತ್ತಲ್ಲವೇ?  ವಾಹನ ದಲ್ಲಿದ್ದ ಅಧಿಕಾರಿಗಳಿಗೆ ಹತ್ತಿರದ ಸ್ಥಳದಿಂದ ಗ್ರಾಮಕ್ಕೆ ಹೋಗುವ  ಮಾಹಿತಿ ಕೊರತೆಯಿತ್ತೇ??

 

ಅತಿ ಬೇಗ ಹೋಗಬೇಕಾಗಿದ್ದ ವಾಹನ ಸುದ್ದಿ ಬಳಸಿ ಲೇಟಾಗಿ ಬಂದಿದ್ದರಿಂದ  ಅಗ್ನಿಶಾಮಕ ದವರಿಗೆ ರೈತರು ಹಿಡಿ ಶಾಪ  ಹಾಕಿದ್ದರೆ, ಹಳೆಯ ಗಾದೆಯಂತೆ ಬಡವನ ಕೋಪ ದವಡೆಗೆ ಮೂಲ ಎಂಬoತಾಗಿದೆ
ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ ಗ್ರಾಮದ ಹರೀಶ್, ಅವರಿಗೆ ಸೇರಿದಗ್ರಾಮದ ಸರ್ವೆನಂ19/02ರಲ್ಲಿ 1 ಎಕರೆ 26 ಗುಂಟೆ ಜಮೀನು ಹಾಗೂ ಮಂಜುನಾಥ್ ಅವರಿಗೆ ಸೇರಿದ ಎರಡು ಎಕರೆ ಅಡಿಕೆ ಗಿಡ ಸಂಪೂರ್ಣವಾಗಿ ಸುಟ್ಟು ಹೋಗಿದ್ದು
ಗಿಡಗಳಿಗೆ ನೀರಿಗಾಗಿ ಡ್ರಿಪ್ ಪೈಪು(ಹನಿನೀರಾವರಿ),ಪಿವಿಸಿ ಪೈಪುಗಳು ಮತ್ತು
ಸ್ಪಿಂಕ್ಲರ್ ಪೈಪುಗಳನ್ನು ಅಳವಡಿಸಿದ್ದು ದಿನಾಂಕ:11/02/2024 ರಂದು ಮಧ್ಯಾಹ್ನ 12.30ರಿಂದ 1.00 ಗಂಟೆ
ಸಮಯದಲ್ಲಿ ಆಕಸ್ಮಿಕವಾಗಿ ರಸ್ತೆ ಬದಿಯಿಂದ ಬೆಂಕಿ ಬಂದು  ಹೊಲಕ್ಕೆ ಬೆಂಕಿ ತಗಲಿ  ಜಮೀನಿನ 2
ವರ್ಷದ ಅಡಿಕೆ ಗಿಡಗಳು ಹಾಗೂ ಗಿಡಗಳಿಗೆ ನೀರಿಗಾಗಿ ಡ್ರಿಪ್ ಪೈಪು.(ಹನಿ ನೀರಾವರಿ),ಪಿವಿಸಿ ಪೈಪುಗಳು ಮತ್ತು ಸ್ಪಿಂಕ್ಲರ್ ಪೈಪುಗಳು ಸಂಪೂರ್ಣ ಸುಟ್ಟು ಹೋಗಿರುತ್ತದೆ.  ಎರಡು ವರ್ಷದ ಅಡಿಕೆ ಗಿಡಕ್ಕೆ ಸರ್ಕಾರಿ ಮೌಲ್ಯ 3600 ರೂಗಳಾಗಿದ್ದು ಒಟ್ಟು 670 ಗಿಡಗಳ ಮೌಲ್ಯ 24.12 ಲಕ್ಷರೂಗಳಷ್ಟು  ಹಾಗೂ ಹರೀಶ್ ಸೋದರರಾದ ಮಂಜುನಾಥ್ ರವರ ಎರಡು ಎಕರೆ ಅಡಿಕೆ ತೋಟದ  ಗಿಡಗಳಿಗೆ ನೀರಿಗಾಗಿ ಡ್ರಿಪ್ ಪೈಪು,(ಹನಿ ನೀರಾವರಿ),ಪಿವಿಸಿ ಪೈಪುಗಳು ಮತ್ತು ಸ್ಪಿಂಕ್ಲ‌ ಪೈಪುಗಳು ಸುಟ್ಟು ಹೋಗಿ ಅಂದಾಜು  ಒಟ್ಟು 25.12 ಲಕ್ಷ ರೂಗಳಷ್ಟು ನಷ್ಟ ಉಂಟಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ಠಾಣೆಯ ಲಾರಿ ಬಂದಿದ್ದರೆ 2 ಎಕರೆ ಅಡಿಕೆ ತೋಟ ಬೆಂಕಿಯಿಂದ ರಕ್ಷಿಸಬಹುದಿತ್ತು  ಎನ್ನುವುದು ಸ್ಥಳದಲ್ಲಿ ನೆರೆದಿದ್ದ ರೈತರ ಮಾತಾಗಿದೆ.
ಮೊದಲೇ ಬರ ಬಂದು ಕಂಗಾಲಾಗಿರುವ ರೈತರಿಗೆ ಕಷ್ಟಪಟ್ಟು ಮೂರು ವರ್ಷದಿಂದ ಸಾಕಿದ ಅಡಿಕೆ ತೋಟ ಸುಟ್ಟು ಹೋಗಿದೆ ಸರ್ಕಾರ ಯಾವ ರೀತಿಯ ಪರಿಹಾರ ನೀಡುತ್ತದೆ ಕಾದು ನೋಡಬೇಕಾಗಿದೆ.