ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ!?

0
25

ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಜೀವನಶೈಲಿ ಬದಲಾಯಿಸಿ ಕೊಳ್ಳಲು ಭರವಸೆ ಸಂಸ್ಥೆ ಹಾಗೂ ಅರಣ್ಯ ಇಲಾಖೆಯಿಂದ  ಜಾಗೃತಿ ಕಾರ್ಯಕ್ರಮ.

ಸುಬ್ರಹ್ಮಣ್ಯ ಬಿಸೆಲ್ ಘಾಟಿ ರಸ್ತೆಯಲ್ಲಿ ಹಾದು ಹೋಗುವ ಭೇಜವಾಬ್ಧಾರಿ ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುವ ಪ್ಲಾಸ್ಟಿಕ್ ಕವರ್ಗಳು ಹಾಗೂ  ಹೆಂಡದ ಖಾಲಿ ಬಾಟಲಿಗಳು,

 

 

ಕಾಡಿನ ಪ್ರಪಂಚದಲ್ಲಿ ವಾಸವಾಗಿರುವ ಪ್ರಾಣಿಗಳು ತಮಗೆ ಅರವಿಗೆ ಬಾರದೆ ಇವುಗಳನ್ನು ತಿನ್ನುತ್ತಾ  ಕಾಡಲ್ಲಿ ವಾಸವಾಗಿರುವ  ಪ್ರಾಣಿಗಳ  ಆರೋಗ್ಯ ಮತ್ತು ಪ್ರಾಣಕ್ಕೆ ತೊಂದರೆ ಉಂಟಾಗಿ  ಸಾವನ್ನಪ್ಪುತ್ತಿವೆ,

ಮನುಷ್ಯ ಎಂಬ ಕ್ರೂರಿ ಇದರ ಬಗ್ಗೆ ಅರವಿದ್ದರೂ ಪರಿಸರದ ಮೇಲೆ ತಮ್ಮ ದಬ್ಬಾಳಿಕೆಯನ್ನು ಮಾಡುತ್ತಲೇ ಬಂದಿದ್ದಾರೆ,
ಇದನ್ನು ಅರಿತ  ಭರವಸೆ ಸಂಸ್ಥೆ ಯ ತಂಡ ಆ ಸ್ಥಳದಲ್ಲಿ ಸ್ವಚ್ಛತಾ ಕಾರ್ಯಕ್ರಮ ವನ್ನ ಕೈಗೊಂಡು ಸಾಕಷ್ಟು ಪ್ಲಾಸ್ಟಿಕ್ ಮತ್ತು ಕಾಲಿ ಬಾಟಲಿಗಳನ್ನು  ಸಂಗ್ರಹಿಸಿ ಬೇರೆ ಕಡೆಗೆ ವಿಲೇವಾರಿ ಮಾಡಲು ಸಂಗ್ರಹಿಸಿದರು,
ಈ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಯದ ಮನೋಜ್ ರವರು, ಘಾಟಿಯಲ್ಲಿ ಸಾಗುವ ಪ್ರವಾಸಿಗರಿಗೆ ಉತ್ತಮ ಮಾಹಿತಿ ನೀಡುತ್ತಾ,  ನಮ್ಮ  ಜನತೇ ಪ್ರಯಾಣ ಮಾಡುವಾಗ, ಹಾಗೂ ಪ್ರವಾಸಕ್ಕೆ ಹೋಗುವಾಗ ಬಟ್ಟೆಯ ಬ್ಯಾಗನ್ನು ಆದಷ್ಟು ಉಪಯೋಗಿಸಿ,
ಅಷ್ಟಾಗಿಯೂ ಪ್ಲಾಸ್ಟಿಕ್ ಕವರ್ ಗಳು ಏನಾದರೂ ತಂದಿದ್ದರೆ, ಅದನ್ನು ಎಲ್ಲಿ ಬೇಕು ಅಲ್ಲಿ ಹಾಕದೆ ನೀವುಗಳು ತೆಗೆದುಕೊಂಡು ಬಂದ ಪ್ಲಾಸ್ಟಿಕ್ ವಸ್ತುಗಳನ್ನ ಸಂಗ್ರಹ ಮಾಡಿಕೊಂಡು ಕಸದ ತೊಟ್ಟಿ ಇರುವಕಡೆ ಅದನ್ನು ದಯವಿಟ್ಟು ಹಾಕಿ ಪರಿಸರ ಹಾಗೂ ಪ್ರಾಣಿಗಳ ಮನುಕುಲಕ್ಕೆ ಆಗುವ ತೊಂದರೆಗಳನ್ನು  ತಡೆಯಭವುದು  ಎಂದು ಕಡಿಮೆ ಸಮಯದಲ್ಲೇ ಈ ವಿಷಯದ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಾದ ಮನೋಜ್ ರವರು ಇದರ ಬಗ್ಗೆ  ನೆರೆದಿದ್ದವರ ಗಮನ ಸೆಳೆದರು.